ಚಿಮ್ಮಡ ಪಿಕೆಪಿಎಸ್ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ
ಚಿಮ್ಮಡ: ರೈತರಿಗೆ ಸಹಕಾರಿ ಸಂಘದಿಂದ ದೊರೆಯುವ ಸಕಲ ಸೌಲಭ್ಯಗಳನ್ನು ನೀಡುವ ಮೂಲಕ ಅವರ ಹಿತ ಕಾಯಲು ನೂತನ ಅಧ್ಯಕ್ಷ ಉಪಾಧ್ಯಕ್ಷರು ಬದ್ದರಾಗಿರಬೇಕೆಂದು ತೇರದಾಳ ಶಾಸಕ ಸಿದ್ದು ಸವದಿ ಸಲಹೆ ನೀಡಿದರು.
ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದ ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ರೈತರ ಜೀವನಾಡಿಯಾಗಿರುವ ಈ ಸಂಘ ಈಗಾಗಲೇ ಲಾಭದಲ್ಲಿದ್ದು ರೈತ, ನೇಕಾರ, ಕೂಲಿ ಕಾರ್ಮಿಕರ ಹಾಗೂ ವ್ಯಾಪಾರಸ್ಥರ ಸರ್ವತೋಮುಖ ಅಭಿವೃದ್ದಿಗೆ ಶೃಮಿಸುವ ಮೂಲಕ ಸಂಘವನ್ನು ಇನ್ನೂ ಉನ್ನತ ಶ್ರೇಣಿಗೆ ಕೊಂಡೊಯ್ಯಬೇಕೆಂದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಪರಪ್ಪಾ ಪಾಲಭಾವಿ, ಪ್ರಭು ನೇಸೂರ ಮಾತನಾಡಿದರು.
ಇದೇ ಸಂದರ್ಬದಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಗೊಂಡ ಹಣಮಂತ ಬಸಪ್ಪ ನೇಸೂರ ಉಪಾಧ್ಯಕ್ಷರಾಗಿ ಆಯ್ಕೆಯಾದ ಹಣಮಂತ ಮಲ್ಲಪ್ಪ ಕೋಳಿಯವರನ್ನು ಸತ್ಕರಿಸಲಾಯಿತು.
ಹಿಂದಿನ ಅಧ್ಯಕ್ಷ ಶಂಕರ ಗಂಗಪ್ಪ ಬಟಕುರ್ಕಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪೂಜೇರಿ, ಆನಂದ ಕವಟಿ, ಪ್ರಕಾಶ ಪಾಟೀಲ, ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ನಿಂಗಪ್ಪ ಪೂಜಾರಿ, ಬಸವರಾಜ ಕುಂಚನೂರ, ಗುರುಪಾದಪ್ಪಾ ಉರಭಿನವರ ಸೇರಿದಂತೆ ಹಲವಾರು ಜನ ಪ್ರಮುಖರು, ಪಿಕೆಪಿಎಸ್ ನಿರ್ದೇಶಕರು ರೈತ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.
ಚುನಾವಣಾಧಿಕಾರಿಯಾಗಿ ಎಸ್. ಆರ್. ನ್ಯಾಮಗೌಡ ಆಗಮಿಸಿ ಚುನಾವಣಾ ಪ್ರಕ್ರಿಯೆ ಪೋರೈಸಿದರು.
ಕಾರ್ಯಕ್ರಮಕ್ಕೆ ಸಂಘದ ಮುಖ್ಯ ಕಾರ್ಯ ನಿರ್ವಾಹಕ ಎಂ.ವ್ಹಿ. ವಜ್ಜರಮಟ್ಟಿ ಸ್ವಾಗತಿಸಿ ನಿರೂಪಿಸಿದರು, ಮಹಾಲಿಂಗ ಹಳ್ಳೂರ ವಂದಿಸಿದರು.

