ಕೆಂಭಾವಿ: ಮಾದಕ ವಸ್ತುಗಳಾದ ಗಾಂಜಾ, ಅಫೀಮು, ಗಸಗಸೆ ಸೋಪು, ನಿದ್ರೆ ಮಾತ್ರೆ, ಸೇವನೆಯು ಆರೋಗ್ಯಕ್ಕೆ ಹಾನಿಕಾರಕ, ಇವುಗಳ ವಿರುದ್ದ ಯುವಜನತೆ ದ್ವನಿ ಎತ್ತಬೇಕು ಎಂದು ಪಿಎಸ್ಐ ರಾಜಶೇಖರ ರಾಠೋಡ್ ಹೇಳಿದರು.
ಪಟ್ಟಣದ ಶ್ರೀಮತಿ ಗಂಗಾಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಯಾದಗಿರಿ ಜಿಲ್ಲಾ ಪೋಲೀಸ್ ಮತ್ತು ಕೆಂಭಾವಿ ಪೋಲೀಸ್ ಠಾಣೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ “ಮಾದಕ ದ್ರವ್ಯಗಳ ಸೇವನೆ ಮತ್ತು ಸಾಗಣಿಕೆ ವಿರುದ್ಧ ದಿನ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮಾದಕ ವಸ್ತುಗಳ ವ್ಯಸನಿಗಳಾಗಿ, ದಿನಕ್ಕೆ ಹತ್ತು ಜನರು ಆತ್ಮಹತ್ಯೆ ಮಾಡಿಕೊಳುತ್ತಾರೆ ಎಂದವರು. ಅಕ್ರಮವಾಗಿ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟ ಅಕ್ಷಮ್ಯ ಅಪರಾಧ ಎನ್ನುತ್ತಾ, ಅನೇಕ ಕಾನೂನಾತ್ಮಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಾ. ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಮಾದರಿ ವ್ಯಕ್ತಿಯಾಗಿ ನಾಳೆ ನಾಡ ನಾಯಕರಾಗುವಂತೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ ನಾಗಪ್ಪ ಚಾವಲ್ಕರ್, ಮದ್ಯಪಾನ ಧೂಮಪಾನ ಸಹವಾಸ ಹೆಂಡಿರು ಮಕ್ಕಳು ಉಪವಾಸ ಎಂಬಂತೆ, ವಿದ್ಯಾರ್ಥಿಗಳು ನಶೆ ಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು. ಅತ್ಯಮೂಲ್ಯ ವಿದ್ಯಾರ್ಥಿ ಜೀವನ ಹಾಳಾಗದಂತೆ ಎಚ್ಚರಿಕೆ ಹೆಜ್ಜೆ ಇಡುವುದು ಒಳ್ಳೆಯದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ ನಂದಾ ವಾರದ, ಡಾ ಬಸಮ್ಮ ಎಸ್, ನಸ್ರೀನ್ ತಾಜ್, ಡಾ ಯಂಕನಗೌಡ ಎಸ್, ಡಾ ಉಪೇಂದ್ರ ನಾಯಕ್, ಮರಿಸ್ವಾಮಿ, ಮಲ್ಲಿಕಾರ್ಜುನ ಕಲಾಲ್, ಮಾಸುಮ ಅಲಿ ನಾಶಿ, ಸಂಗಣ್ಣ ಪಟ್ಣಣಕರ್, ಸೇರಿದಂತೆ ಬಿಎ ಬಿಕಾಂ ಬಿಎಸ್ಸಿ ಓದುತ್ತಿರುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

