ವಿಜಯಪುರ: ಕರ್ನಾಟಕ ರಾಜ್ಯ ಉಪ್ಪಾರ ಸಂಘ,ಬೆಂಗಳೂರು ಇವರ ಆಶ್ರಯದಲ್ಲಿ ಸನ್ ೨೦೨೪ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ.೯೦% ರಷ್ಟು ಅಂಕ ಪಡೆದು ಉತ್ತೀರ್ಣಗೊಂಡ ಉಪ್ಪಾರ ಸಮಾಜದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಪ್ರತಿಭಾ ಪುರಸ್ಕಾರದ ದಿನಾಂಕ ಇನ್ನು ನಿಗದಿಯಾಗಿರುವದಿಲ್ಲ. ಅಲ್ಲಿಯವರೆಗೆ ನೀವು ತಮ್ಮ ಸ್ವ ವಿವರಗಳನ್ನು ಈ ಕೆಳಕಂಡ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸು ಮಾಹಿತಿ ಸಲ್ಲಿಸಬಹುದು.
ಕಾರಣ ವಿಜಯಪುರ ಜಿಲ್ಲೆಯ ಉಪ್ಪಾರ ಸಮಾಜದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ.೯೦% ಅಂಕ ಪಡೆದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ತಮ್ಮ ಅಂಕಪಟ್ಟಿ ಹಾಗೂ ಸ್ವ ವಿವರಗಳೊಂದಿಗೆ ವಿಜಯಪುರ ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷರಾದ ಜಕ್ಕಪ್ಪ ಯಡವೆ ಮೊ:೯೪೮೩೨೪೮೫೦೮, ಪುಂಡಲೀಕ ಉಪ್ಪಾರ : ೦೮೩೫೨-೬೩೬೩೫೨ ಮಾಹಲಿಂಗ ಉಪ್ಪಾರ, ಸಿದ್ದು ಗೇರಡೆ ಮೊಬೈಲ್ ನಂ. ೯೦೦೮೮೪೫೯೮೬ ಇವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
