Author: editor.udayarashmi@gmail.com

ಖೊಟ್ಟಿ ದಾಖಲೆ ಸೃಷ್ಠಿಸಿ ಭೂಮಿ ಮಾರಾಟ ಮಾಡಿ ವಂಚಿಸುತ್ತಿದ್ದ ಖದೀಮರು ಅಂದರ್! ವಿಜಯಪುರ: ಜಿಲ್ಲೆಯಲ್ಲಿ ಖೊಟ್ಟಿ ದಾಖಲೆ ಸೃಷ್ಠಿಸಿ ಭೂಮಿ ಮಾರಾಟ ಮಾಡಿ ವಂಚಿಸುತ್ತಿದ್ದ ಬೇರೆ ಬೇರೆ ಪ್ರಕರಣಗಳನ್ನು ವಿಜಯಪುರ ಸಿಇಎನ್ ಮತ್ತು ಆದರ್ಶ ನಗರ ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿದ್ದಾರೆ.ಈ ಕುರಿತಂತೆ ಗುರುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಸ್ಪಿ ಋಷಿಕೇಶ ಸೋನಾವಣೆ ಅವರು, ಸಿಇಎನ್ ಮತ್ತು ವಿಜಯಪುರ ನಗರದ ಆದರ್ಶ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣಗಳ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.ವಿಜಯಪುರ ನಗರದ ಕೆ.ಎಚ್.ಬಿ ಕಾಲನಿಯ ಮಾರುತಿ ರಾಜಾರಾಮ ನಾರಾಯಣಕರ ಅವರಿಗೆ ತಿಕೋಟಾ ತಾಲೂಕಿನ ತೊರವಿ ಗ್ರಾಮದ ವ್ಯಾಪ್ತಿಯಲ್ಲಿರುವ ಒಂದು ಎಕರೆ 36 ಗುಂಟೆ ಜಮೀನನ್ನು ಖೊಟ್ಟಿ ದಾಖಲೆ ಸೃಷ್ಠಿಸಿ ಕಬ್ಜಾರಹಿತ ಖರೀದಿ ಇಸಾರ ಕರಾರು ಪತ್ರ ಮಾಡಿಕೊಂಡು ರೂ. 25 ಲಕ್ಷ ಹಣವನ್ನು ಪಡೆದಿದ್ದರು. ಆದರೆ, ಅವರು ನೀಡಿದ ದಾಖಲೆಗಳು ಖೊಟ್ಟಿ ಎಂದು ಗೊತ್ತಾಗಿ ಹಣ ಮರಳಿಸಲು…

Read More

ಆರೋಗ್ಯ ಇಲಾಖೆ ಪ್ರಗತಿ ಪರಿಶೀಲಿಸಿದ ಆರೋಗ್ಯ ಸಚಿವರು | ತಜ್ಞ ವೈದ್ಯರ ನೇಮಕಾತಿಗೆ ಅನುಮತಿ | ಅಧಿಕಾರಿಗಳಿಗೆ ಖಡಕ್ ಸೂಚನೆ ವಿಜಯಪುರ: ಜಿಲ್ಲೆಯಲ್ಲಿನ ವೈದ್ಯರ ಕೊರತೆ ನೀಗಿಸುವ ನಿಟ್ಟಿನಲ್ಲಿ ಗುತ್ತಿಗೆ ಆಧಾರದ ಮೇಲೆ ತಜ್ಞರ ವೈದ್ಯರ ನೇಮಕಾತಿಗಾಗಿ ಅನುಮತಿ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ ಆರ್.ಗುಂಡೂರಾವ್ ಅವರು ಹೇಳಿದರು.ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಮೆಡಿಕಲ್ ಕಾಲೇಜುಗಳೊಂದಿಗೆ ಸಮನ್ವಯತೆ ಸಾಧಿಸಿಕೊಂಡು, ಅವರೊಂದಿಗೆ ಸಂಯೋಜನೆ ಮಾಡಿ, ವೈದ್ಯರ ಹಾಗೂ ಇತರ ಸಿಬ್ಬಂದಿಗಳ ಕೊರತೆ ನೀಗಿಸಲು ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ತಾಯಿ ಮತ್ತು ಶಿಶುವಿನ ಮರಣ ಪ್ರಮಾಣವನ್ನು ತಗ್ಗಿಸಲು ಅಗತ್ಯ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಭ್ರೂಣ ಹತ್ಯೆ ತಡೆಗೆ ಸೂಕ್ತ ಜಾಗೃತಿ ಹಾಗೂ ತಿಳುವಳಿಕೆ ಮೂಡಿಸಬೇಕು. ಭ್ರೂಣ ಹತ್ಯೆ ತಡೆಗೆ ತಳಮಟ್ಟದಿಂದ ಯೋಜನೆ ರೂಪಿಸಿ, ಭ್ರೂಣ…

Read More

ಸಿಎಂ ಭೇಟಿ ಮಾಡಿದ ಕಾನಿಪ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ನೇತೃತ್ವದ ನಿಯೋಗ ಬೆಂಗಳೂರು: ಪತ್ರಕರ್ತರಿಗೆ ಉಚಿತ ಆರೋಗ್ಯ, ಬಸ್ ಪಾಸ್ ಮತ್ತಿತರ ಬೇಡಿಕೆಗಳ ಬಗ್ಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ.ಅರ್ಜಿ ಸಲ್ಲಿಸಿದ್ದರೂ, ಅರ್ಹ ಪತ್ರಕರ್ತರ ಮಾಸಾಶನ ಮಂಜೂರು ಮಾಡಿಲ್ಲ. ಮೂರ‌್ನಾಲ್ಕು ತಿಂಗಳಾದರೂ ಪತ್ರಕರ್ತರ ಮಾಸಾಶನ ಇನ್ನೂ ಬಿಡುಗಡೆ ಆಗಿಲ್ಲ ಎಂಬಿತ್ಯಾದಿ ಬೇಡಿಕೆಗಳ ಬಗ್ಗೆ ಸಿಎಂ ಗಮನಕ್ಕೆ ತರಲಾಗಿದೆ.ಹಿಂದುಳಿದ ವರ್ಗ, ಬ್ರಾಹ್ಮಣ ಮತ್ತು ದಲಿತ ವರ್ಗಗಳಿಗೆ ಬಿಡುಗಡೆ ಮಾಡಬೇಕಾದ ಜಾಹೀರಾತುಗಳ ಬಗ್ಗೆ ಸಿಎಂ ಗಮನ ಸೆಳೆಯಲಾಯಿತು.ಮಾಧ್ಯಮ ಅಕಾಡೆಮಿ, ಪ್ರೆಸ್ ಕ್ಲಬ್ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಂಟಿಯಾಗಿ ಜುಲೈ 1 ರಂದು ಬೆಂಗಳೂರಿನ ಪ್ರೆಸ್ ಕ್ಲಬ್‌ ಆವರಣದಲ್ಲಿ ಆಯೋಜಿಸಿರುವ ಪತ್ರಿಕಾ ದಿನಾಚರಣೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಯಿತು.ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ರಾಜ್ಯ ಸಮಿತಿ ಸದಸ್ಯರಾದ ಎನ್.ರವಿಕುಮಾರ್ ಮತ್ತು ರಾಜ್ಯ…

Read More

ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ’ವಚನಗಳಲ್ಲಿ ವಿಜ್ಞಾನ’ ಉಪನ್ಯಾಸ ವಿಜಯಪುರ: ೧೨ ನೇ ಶತಮಾನದ ಶರಣರ ವೈಜ್ಞಾನಿಕ ಚಿಂತನೆಗಳ ಒಲವು ವಚನ ಸಾಹಿತ್ಯ ಈ ನೆಲದ ಅಮೂಲ್ಯ ಸಂಪತ್ತು. ೧೨ ನೇ ಶತಮಾನದಲ್ಲಿಯೇ ಬಸವಾದಿ ಶರಣರು ವೈಜ್ಞಾನಿಕ ಚಿಂತನೆಗಳನ್ನು ತಮ್ಮ ವಚನಗಳಲ್ಲಿ ಬಹಳ ಸ್ಪಷ್ಠವಾಗಿ ಹೇಳಿದ್ದಾರೆ. ಅವುಗಳನ್ನು ಬಿತ್ತುವಂತಾಗಬೇಕು ಎಂದು ಸಾಹಿತಿ ಪ್ರೊ. ಸುಧಾ ಹುಚ್ಚಣ್ಣನವರ ಹೇಳಿದರು.ನಗರದ ಬಿ.ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗದ ಸಂಯುಕ್ತಾಶ್ರಯದಲ್ಲಿ ’ವಚನಗಳಲ್ಲಿ ವಿಜ್ಞಾನ’ ಎಂಬ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ವಚನ ಸಾಹಿತ್ಯ ಈ ನೆಲದ ಅಮೂಲ್ಯ ಸಂಪತ್ತು. ೧೨ ನೇ ಶತಮಾನದಲ್ಲಿಯೆ ಬಸವಾದಿ ಶರಣರು ವೈಜ್ಞಾನಿಕ ಚಿಂತನೆಗಳನ್ನು ತಮ್ಮ ವಚನಗಳಲ್ಲಿ ಬಹಳ ಸ್ಪಷ್ಡವಾಗಿ ಹೇಳಿದ್ದಾರೆ. ಅಂದಿನ ಶರಣರು ಸಾಮಾಜಿಕ ಆಧ್ಯಾತ್ಮೀಕ ಸುಧಾರಣೆಗೆ ಒತ್ತು ನೀಡಿದ ಹಾಗೆ ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಗಳ ಕುರಿತು ಹೆಚ್ಚಿನ ಒಲವುಗಳನ್ನು ತೋರಿದ್ದರು ಎಂದು ಸೂಚಿಸುತ್ತದೆ.…

Read More

ಮುದ್ದೇಬಿಹಾಳ: ಪಟ್ಟಣದ ಎಂಜಿವ್ಹಿಸಿ ಕಾಲೇಜಿನಲ್ಲಿ ಜೂ.೨೮ ರಂದು ಬೆಳಿಗ್ಗೆ ೧೦:೩೦ ಗಂಟೆಗೆ “ಜಾನಪದ ಪರಂಪರೆ ಮತ್ತು ಪ್ರಯೋಗ ತಾತ್ವಿಕ ಚಿಂತನೆ ” ಈ ವಿಷಯದ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಜೋಗತಿ ಮಂಜಮ್ಮನವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಅಶೋಕ ತಡಸದ ವಹಿಸಲಿದ್ದಾರೆ. ಬೆಳಗಾವಿಯ ಆರ್‌ಪಿಡಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎನ್.ಬಿ.ಕೋಲ್ಕಾರ ಆಶಯ ನುಡಿಗಳನ್ನಾಡಲಿದ್ದಾರೆ. ಸಂಶೋಧಕರಾದ ಡಾ.ವಾಯ್ ವಾಯ ಕೊಕ್ಕನವರ, ಡಾ. ವೀರೇಶ್ ಹಟ್ಟಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸುತ್ತಿದ್ದು ಹಲವು ಪ್ರಾಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಲಿದ್ದಾರೆ. ಕಾರ್ಯಕ್ರಮದ ಹಾಗೂ ಗೋಷ್ಠಿಯ ಅಧ್ಯಕ್ಷತೆಯನ್ನು ಎ.ಆರ್.ಮುಲ್ಲಾ ವಹಿಸಲಿದ್ದು ಕಾಲೇಜಿನ ಪ್ರಾಚಾರ್ಯ ಪ್ರೊ.ಎಸ್.ಎನ್.ಪೋಲೇಶಿ ಹಾಗೂ ಸಂಕಿರಣದ ಸಂಯೋಜಕ ಡಾ. ಪ್ರಕಾಶ ನರಗುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮುದ್ದೇಬಿಹಾಳ: ತಾಲೂಕಿನ ನಾಲತವಾಡ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ದೇವಿ ದೇವಸ್ಥಾನದ ಬಳಿ ಇಸ್ಪೀಟ್ ಆಡುತ್ತಿದ್ದವರ ಮೇಲೆ ಪಿಎಸ್‌ಐ ಸಂಜೀವ ತಿಪರೆಡ್ಡಿ ಪ್ರಕರಣ ದಾಖಲಿಸಿದ್ದಾರೆ.ಘಾಳಪೂಜಿಯ ಹುಲಗಪ್ಪ ನಾಗರಬೆಟ್ಟ, ಲೊಟಗೇರಿ ಗ್ರಾಮದ ಮಹೇಶ ಹಟ್ಟಿ, ನಾಲತವಾಡದ ಬಸವರಾಜ ಗುಬ್ಬಿ, ಮಹಮ್ಮದ ಮೌಲಾಸಾಬ, ಅಬೂಬಕರ ರಕ್ಕಸಗಿ, ಗುರು ತಂಗಡಗಿ, ಪೀರು ಚಿಮನಕೋರ ಇವರ ಮೇಲೆ ಪ್ರಕರಣ ದಾಖಲಾಗಿದ್ದು ಇಸ್ಪೀಟ್ ಎಲೆಗಳು ಸೇರಿದಂತೆ ಹಣವನ್ನು ವಶಕ್ಕೆ ಪಡೆದಿದ್ದಾರೆ.

Read More

೨೬೦ ರೈತ ಕುಟುಂಬಕ್ಕೆ ಬರಬೇಕಿರುವ ೩ ಕೋಟಿ ಬಾಕಿ ಹಣ ಬಿಡುಗಡೆಗೆ ರೈತಸಂಘ ಆಗ್ರಹ ವಿಜಯಪುರ: ಇಂಡಿ ತಾಲೂಕಿನ ಹಿರೇಬೇವನೂರಿನ ಜ್ಞಾನಯೋಗಿ ಶಿವಕುಮಾರ ಸ್ವಾಮೀಜಿ ಸಕ್ಕರೆ ಕಾರ್ಖಾನೆಯಲ್ಲಿಯ ೨೦೧೮-೧೯ ನೇ ಸಾಲಿನಲ್ಲಿ ಕಬ್ಬು ಕಟಾವು ಹಾಗೂ ಸಾಗಾಣಿಕೆಗೆ ಮಾಡಿರುವ ಸುಮಾರು ೩ ಕೋಟಿಗಿಂತಲೂ ಅಧಿಕ ಬಾಕಿ ಇರುವ ಹಣವನ್ನು ಕೂಡಲೇ ಹಾಕಿಸಬೇಕೆಂದು ಜಿಲ್ಲಾಧಿಕಾರಿಗಳಾದ ಟಿ. ಭೂಬಾಲನ ಅವರಿಗೆ ಕೃಷಿ ಕಾರ್ಮಿಕರು ಮತ್ತು ಟ್ರಾಕ್ಟರ್ ಮಾಲಿಕರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಗುರುವಾರ ಮನವಿ ಸಲ್ಲಿಸಲಾಯಿತು.ಈ ವೇಳೆ ಹಿರೇಬೇವನೂರಿನ ಗಿರಮಲ್ಲಗೌಡ ಬಿರಾದಾರ ಮಾತನಾಡಿ, ಹಿಂದಿನ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರು ನಮ್ಮೆಲ್ಲರಿಗೂ ಭರವಸೆ ನೀಡಿ ಆತ್ಮಸ್ಥೈರ್ಯ ತುಂಬಿ ಯಾವುದೇ ಜೀವಹಾನಿ ಮಾಡಿಕೊಳ್ಳಬಾರದೆಂದು ಧೈರ್ಯ ತುಂಬಿದ್ದರು. ಆದರೆ ಈಗ ಸಕ್ಕರೆ ಕಾರ್ಖಾನೆ ದಿವಾಳಿಯಾಗಿದೆ, ಮುಂದೆ ಯಾರು ಕಾರ್ಖಾನೆ ಪ್ರಾರಂಭಿಸುತ್ತಾರೋ ಅವರಿಂದ ಸುಮಾರು ೨೬೦ ಕುಟುಂಬಗಳಿಗೆ ಬರಬೇಕಿರುವ ಹಣ ಕೊಡಿಸುವುದಾಗಿ ಹೇಳಿದ್ದರು, ಆದರ ಪ್ರಕಾರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯಿಂದ…

Read More

ತಿಕೋಟಾ: ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಆಚರಣೆ ಮಾಡಲಾಯಿತು.ಕೆಂಪೇಗೌಡ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ ಅವರು, ಕೆಂಪೇಗೌಡರು ನವ ನಾಡಿನ ಅಭಿವೃದ್ಧಿ ಚಿಂತಕರಾಗಿದ್ದರು. ನಾಡು ಕಟ್ಟುವಲ್ಲಿ ಇವರ ಪಾತ್ರ ಹಿರಿದಾಗಿದೆ. ಇವರ ಆದರ್ಶಗಳನ್ನು ಇಂದಿನ ಕಾಲದಲ್ಲಿ ಸರ್ವರೂ ಮೈಗೂಡಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ತಾಪಂ ಯೋಜನಾಧಿಕಾರಿ ಆಯೇಷಾ ಸಾಲೋಟಗಿ, ಸಹಾಯಕ ನಿರ್ದೇಶಕರಾದ ಶೋಭಕ್ಕ ಶೀಳಿನ, ವಿಜಯ ಶೇಗುಣಸಿ, ತಾಂತ್ರಿಕ ಸಂಯೋಜಕ ಸಂಜೀವಕುಮಾರ ಬಿರಾದಾರ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಅಪರ್ಣಾ ಬದಾಮಿ, ಜಯಶ್ರೀ ಕೆಂಗಲಗುತ್ತಿ, ಸಾವಿತ್ರಿ ಲವಗಿ, ವಿಜಯ ಯರಗಟ್ಟಿ, ಜಯಶ್ರೀ ಪೂಜಾರಿ, ಸುನೀಲ ಬನಸೋಡೆ, ಮಹಾಶಾಂತ ಬಂದಿ, ಸಿಬ್ಬಂದಿಗಳು ಸೇರಿ ಇತರರು ಹಾಜರಿದ್ದರು.

Read More

ವಿಜಯಪುರ: ಜಲನಗರದಲ್ಲಿರುವ ಮಹಾನಗರ ಪಾಲಿಕೆಯ ಮಳಿಗೆಯಲ್ಲಿದ್ದ ಅಂಗವಿಕಲ (ಮಾತು ಬಾರದ) ವ್ಯಕ್ತಿಯ ಟೇಲರಿಂಗ್ ಅಂಗಡಿ ಇತ್ತೀಚೆಗೆ ಆಕಸ್ಮಿಕವಾಗಿ ಸುಟ್ಟಿರುವ ಹಿನ್ನೆಲೆ, ಅಂಗಡಿ ಮಾಲೀಕ ಬಸವರಾಜ ಕೂಸೂರ ಅವರಿಗೆ ನಗರ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರು, ವೈಯಕ್ತಿಕವಾಗಿ ರೂ.೫೦ ಸಾವಿರ ಸಹಾಯ ಧನ ನೀಡಿದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಮತ್ತಿತರರು ಇದ್ದರು.

Read More