Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕೊಲ್ಹಾರ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರೊಬ್ಬರ ಮಗಳು ನೇಹಾ ಹಿರೇಮಠ ಅವರನ್ನು ಲವ್ ಜಿಹಾದ್ ಎಂಬ ಹೆಸರಿನಲ್ಲಿ ಕೊಲೆ ಮಾಡಿರುವದನ್ನು ನಾನು ಮತ್ತು ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ತೀವ್ರವಾಗಿ ಖಂಡಿಸುತ್ತೇವೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.ಪಟ್ಟಣದ ಅಗಶಿಯ ಹತ್ತಿರ ಪ್ರತಿಭಟಣೆಯನ್ನು ಹಮ್ಮಿಕೊಂಡು ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌದದಲ್ಲಿಯೇ ಪಾಕಿಸ್ತಾನ ಜಿಂದಾಬಾದ ಎನ್ನುವ ಘೋಷಣೆ ಕೂಗುತ್ತಿದ್ದರು ಅದರಂತೆ ಲವ್ ಜಿಹಾದ ಸಂಘಟಣೆಯ ಯುವಕರು ಹಿಂದೂ ಯುವತಿಯರ ಮೇಲೆ ದೌರ್ಜನ್ಯ ಎಸಗುತ್ತಾ ಕೊಲೆ ಮಾಡುವಂತಹ ಹೀನಕೃತ್ಯದಲ್ಲಿ ತೊಡಗಿದರೂ ಮುಖ್ಯಮಂತ್ರಿ ಗೃಹ ಸಚಿವರು ಉಢಾಪೆ ಉತ್ತರ ಕೊಡುತ್ತಿರುವದು ರಾಜ್ಯದ ಜನತೆಗೆ ದ್ರೋಹ ಬಗೆದಂತೆ ಅಲ್ಲವೇ ಇದು ಆಡಳಿತ ಮಾಡುವ ಜನಪ್ರತಿನಿಧಿಗಳಿಗೆ ಶೋಭೆ ತರುವಂತಹದಲ್ಲ ಎಂದು ವ್ಯಂಗ್ಯವಾಡಿದರು.ಇಂತಹ ಹೇಯ ಕೃತ್ಯವನ್ನು ಎಸಗಿರುವ ಫಯಾಜನನ್ನು ಸಾರ್ವಜನಿಕರ ಸಮ್ಮುಖದಲ್ಲಿ ಎನ್‌ಕೌಂಟರ್ ಮಾಡಲು ಸರಕಾರ ಆದೇಶ ಹೊರಡಿಸಬೇಕು ರಾಜದಲ್ಲಿರುವ ಮತಾಂಧರಿಗೆ ಕಾನೂನು ಭಯ ಇಲ್ಲದಂತೆ ಮಾಡುತ್ತಿರುವ ಮುಸ್ಲೀಂ…
ಕೊಲ್ಹಾರ: ಮನುಜಕುಲವನ್ನು ಈ ಲೋಕಕ್ಕೆ ಧಾರೆ ಎರೆಯುವ ಜೀವ ಎಂದರೆ ಹೆಣ್ಣು. ಇಂಥಹ ಹೆಣ್ಣು ಎಂಬ ಮನುಕುಲಕ್ಕೆ ಕ್ರೂರ ಮನಸ್ಸಿನ ವ್ಯಕ್ತಿಗಳಿಂದ ಏನೆಲ್ಲ ನಡೆಯಬಾರದೋ ಅಂತಹ ಘಟನೆಗಳು ನಡೆಯುತ್ತಿರುವದು ನಮ್ಮ ದಾರಿ ಎತ್ತ ಸಾಗುತ್ತಿದೆ? ಮಾನವೀಯತೆ ಏನಾದರೂ ಪತನದ ಕಡೆಗೆ ಹೊರಟಿದೆ ಎನ್ನುವದು ಭಾಸವಾಗುತ್ತಿದೆ ಎಂದು ಯುವ ಚಿಂತಕ ಖುದಾತಖಾನ್ ಪಠಾಣ ವಿಷಾದ ವ್ಯಕ್ತಪಡಿಸಿದರು.ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ಹಾಗೂ ರಾಜ್ಯದಲ್ಲಿ ಆಗುತ್ತಿರುವ ಘಟನೆಗಳ ಕುರಿತು ಸುದ್ದಿಗಾರರೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಚಿಂತಕ ಖುದಾತ್‌ಖಾನ ಪಠಾಣ ಅಹಿಂಸಾ ಧರ್ಮದ ಮೂಲಕ ಸ್ವಾತಂತ್ರ ಪಡೆದ ನಾವುಗಳು ಹಿಂಸೆಯ ಮಾರ್ಗದಲ್ಲಿ ನಡೆಯುತ್ತಿರುವದು ಬಸವಾದಿ ಪ್ರಮಥರ ಪ್ರವಾದಿ ಪೈಗಂಬರರಂತಹ ಗುರುನಾನಕ್‌ರ ಮತ್ತು ಮಹಾತ್ಮಾ ಗಾಂಧಿಜಿ ಅವರ ಅಹಿಂಸಾ ಧರ್ಮದ ಮಾನವೀಯತೆಯ ಸಾಮರಸ್ಯ ಎತ್ತ ಸಾಗುತ್ತಿದೆ ಎನ್ನುವದನ್ನು ಸುಶೀಕ್ಷಿತರು ಚಿಂತನೆ ಮಾಡುವ ಅವಶ್ಯಕತೆ ಜೊತೆಗೆ ಸಮಾಜದಲ್ಲಿ ಪರಸ್ಪರ ಮನುಷ್ಯತ್ವದ ಭಾವನೆಗಳನ್ನು ಬಿತ್ತುವ ಆಲೋಚನೆಯಲ್ಲಿ ತೊಡಗಿಕೊಳ್ಳಬೇಕಾಗಿದೆ ಎಂದರು.ವಿದ್ಯಾರ್ಜನೆಗೆ, ಮಾರುಕಟ್ಟೆಗೆ, ಸಭೆ ಸಮಾರಂಭಗಳಿಗೆ, ಬಂಧುಗಳ ಸ್ನೇಹಿತರ ಭೇಟಿಗೆ ಹೋದ ಮಗಳು ಮತ್ತೆ…
ಕೊಲ್ಹಾರ: ಮನುಜಕುಲವನ್ನು ಈ ಲೋಕಕ್ಕೆ ಧಾರೆ ಎರೆಯುವ ಜೀವ ಎಂದರೆ ಹೆಣ್ಣು. ಇಂಥಹ ಹೆಣ್ಣು ಎಂಬ ಮನುಕುಲಕ್ಕೆ ಕ್ರೂರ ಮನಸ್ಸಿನ ವ್ಯಕ್ತಿಗಳಿಂದ ಏನೆಲ್ಲ ನಡೆಯಬಾರದೋ ಅಂತಹ ಘಟನೆಗಳು ನಡೆಯುತ್ತಿರುವದು ನಮ್ಮ ದಾರಿ ಎತ್ತ ಸಾಗುತ್ತಿದೆ? ಮಾನವೀಯತೆ ಏನಾದರೂ ಪತನದ ಕಡೆಗೆ ಹೊರಟಿದೆ ಎನ್ನುವದು ಭಾಸವಾಗುತ್ತಿದೆ ಎಂದು ಯುವ ಚಿಂತಕ ಖುದಾತಖಾನ್ ಪಠಾಣ ವಿಷಾದ ವ್ಯಕ್ತಪಡಿಸಿದರು.ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ಹಾಗೂ ರಾಜ್ಯದಲ್ಲಿ ಆಗುತ್ತಿರುವ ಘಟನೆಗಳ ಕುರಿತು ಸುದ್ದಿಗಾರರೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಚಿಂತಕ ಖುದಾತ್‌ಖಾನ ಪಠಾಣ ಅಹಿಂಸಾ ಧರ್ಮದ ಮೂಲಕ ಸ್ವಾತಂತ್ರ ಪಡೆದ ನಾವುಗಳು ಹಿಂಸೆಯ ಮಾರ್ಗದಲ್ಲಿ ನಡೆಯುತ್ತಿರುವದು ಬಸವಾದಿ ಪ್ರಮಥರ ಪ್ರವಾದಿ ಪೈಗಂಬರರಂತಹ ಗುರುನಾನಕ್‌ರ ಮತ್ತು ಮಹಾತ್ಮಾ ಗಾಂಧಿಜಿ ಅವರ ಅಹಿಂಸಾ ಧರ್ಮದ ಮಾನವೀಯತೆಯ ಸಾಮರಸ್ಯ ಎತ್ತ ಸಾಗುತ್ತಿದೆ ಎನ್ನುವದನ್ನು ಸುಶೀಕ್ಷಿತರು ಚಿಂತನೆ ಮಾಡುವ ಅವಶ್ಯಕತೆ ಜೊತೆಗೆ ಸಮಾಜದಲ್ಲಿ ಪರಸ್ಪರ ಮನುಷ್ಯತ್ವದ ಭಾವನೆಗಳನ್ನು ಬಿತ್ತುವ ಆಲೋಚನೆಯಲ್ಲಿ ತೊಡಗಿಕೊಳ್ಳಬೇಕಾಗಿದೆ ಎಂದರು.ವಿದ್ಯಾರ್ಜನೆಗೆ, ಮಾರುಕಟ್ಟೆಗೆ, ಸಭೆ ಸಮಾರಂಭಗಳಿಗೆ, ಬಂಧುಗಳ ಸ್ನೇಹಿತರ ಭೇಟಿಗೆ ಹೋದ ಮಗಳು ಮತ್ತೆ…
ಕೊಲ್ಹಾರ: ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಆಡಳಿತ ಯಂತ್ರದ ಚುಕ್ಕಾಣೆ ಹಿಡಿದರೆ ದೇಶದಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬದ ಮುಖ್ಯಸ್ಥಳಿಗೆ ಒಂದು ಲಕ್ಷ ರೂಪಾಯಿ ವಾರ್ಷಿಕವಾಗಿ ವಿತರಣೆ ಮಾಡು ಮೂಲಕ ಸ್ತ್ರೀ ಸಬಲೀಕರಣ ಸಶಕ್ತಗೊಳಿಸಲಾಗುವದು ಎಂದು ವಿಜಯಪೂರ ಜಿಲ್ಲಾ ಮಹಿಳಾ ಘಟಕದ ಉಪಾದ್ಯಕ್ಷೆ ಶ್ರೀಮತಿ ಕಮಲಾಬಾಯಿ ಮಾಕಾಳಿ ಹೇಳಿದರು.ಪಟ್ಟಣದ ೩ನೇ ವಾರ್ಡಿನಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಇರುವಂತೆ ಪ್ರಸಕ್ತ ಸಾಲಿನ ಲೋಕಸಭಾ ಚುಣಾವಣೆಯ ಭರವಸೆಯ ಗ್ಯಾರಂಟಿ ಕಾರ್ಡಗಳನ್ನು ವಿತರಿಸಿ ಮಾತನಾಡುತ್ತಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ಹಾಕಿ ಮತದಾರರು ಗೆಲ್ಲಿಸಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಾಗ ಮಾತ್ರ ಭರವಸೆಗಳನ್ನು ಈಡೇರಿಸಲಾಗುವದು ಆದ್ದರಿಂದ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿಕೊಂಡರು.ರಾಜ್ಯದಲ್ಲಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಜೋಡು ಎತ್ತಿನ ಸರಕಾರ ಜನರಿಗೆ ಕೊಟ್ಟ ಭರವಸೆಯನ್ನು ಜಾರಿಗೆ ತಂದು ಅನುಷ್ಠಾಣಗೊಳಿಸಿರುವದು ತಮಗೆಲ್ಲರಿಗೂ ತಿಳಿದ ವಿಷಯ ಸರ್ವ ಜನರ ಸರ್ವ ಜನಾಂಗದ ಸಮಸ್ಯೆಗಳನ್ನು ಅರಿತು ಸರ್ವರಿಗೂ ನ್ಯಾಯ ಒದಗಿಸುವ…
ವಿಜಯಪುರ: ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ, ಕರ್ನಾಟಕವು ‘ವಿದ್ಯಾರ್ಥಿ-ಯುವಜನರ ಪ್ರಣಾಳಿಕೆ: ಲೋಕಸಭಾ ಚುನಾವಣೆ ೨೦೨೪’ ಅನ್ನು ವಿಜಯಪುರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಬಿಡುಗಡೆ ಮಾಡಲಾಯಿತು.ಶನಿವಾರ ಪ್ರಣಾಳಿಕೆ ಬಿಡುಗಡೆ ಮಾಡಿದ ದಲಿತ ವಿದ್ಯಾರ್ಥಿ ಪರಿಷತ್ತಿನ ರಾಜ್ಯಾಧ್ಯಕ್ಷ ಶ್ರೀನಾಥ್ ಪೂಜಾರಿ,ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ, ಈ ದೇಶದ ವಿದ್ಯಾರ್ಥಿಗಳು ಮತ್ತು ಯುವಜನರು ಈ ಸಧ್ಯ ನಡೆಯುತ್ತಿರುವ ಎಲ್ಲಾ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ರಾಜಕೀಯ ಪಕ್ಷಗಳು ಅವರನ್ನು ಲಘುವಾಗಿ ಪರಿಗಣಿಸಬಾರದು ಎಂದು ಎಚ್ಚರಿಕೆ ನೀಡಿದರು.ಕಳೆದ ಐದು ವರ್ಷಗಳಲ್ಲಿ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಲು ವಿಫಲವಾಗಿದ್ದು, ಗಾಢನಿದ್ರೆಗೆ ಜಾರಿದ್ದವು. ಈಗ, ಚುನಾವಣೆ ಘೋಷಣೆಯಾದ ಬೆನ್ನಲ್ಲೇ, ದಿಢೀರನೆ ಎಚ್ಚರಗೊಂಡು ಮತದಾರರನ್ನು ತಮ್ಮ ಪರವಾಗಿ ಸೆಳೆಯಲು ಇದ್ದಕ್ಕಿದಂತೆ ಪ್ರಯತ್ನಿಸುತ್ತಿವೆ. ಹೀಗಿದ್ದರೂ, ವಿದ್ಯಾರ್ಥಿಗಳು ಮತ್ತು ಯುವಜನರು ಜನರ ಸಮಸ್ಯೆಗಳ ಮೇಲೆಯೇ ಚುನಾವಣೆ ಎದುರಿಸಬೇಕು ಎಂಬ ಆಶಯ ಹೊಂದಿದ್ದರು. ಆದರೆ, ಚುನಾವಣೆಯ ಮುನ್ನವೇ ಎಲ್ಲಾ ರಾಜಕೀಯ ಪಕ್ಷಗಳು, ಈ ಚುನಾವಣೆಯಲ್ಲಿ ಜನರ ಯಾವುದೇ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಅದನ್ನು ನಿವಾರಿಸುವ ಬಗ್ಗೆ…
ವಿಜಯಪುರ: ಒಳ ಮೀಸಲಾತಿ ಜಾರಿಗೆ ತಂದು ಬಂಜಾರಾ ಸಮಾಜಕ್ಕೆ ಅನ್ಯಾಯ ಮಾಡಿದ ಬಿಜೆಪಿ ಸರ್ಕಾರಕ್ಕೆ ಈ ಭಾರಿ ಬಜಾರ ಸಮಾಜ ತಕ್ಕ ಪಾಠ ಕಲಿಸಲಿದೆ. ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಮ್ಮ ಸಮಾಜ ತಕ್ಕ ಪಾಠ ಕಲಿಸಿದೆ. ಸದ್ಯ ನಡೆದಿರುವ ಲೋಕಸಭಾ ಚುನಾವಣೆಯಲ್ಲಿ ಇನೊಮ್ಮೆ ಬಿಜೆಪಿ ಸರ್ಕಾರಕ್ಕೆ ನಮ್ಮ ಸಮಾಜದ ಶಕ್ತಿ ಏನೆಂಬುದನ್ನು ತೋರಿಸಲಿದ್ದೇವೆ.ಭಾರತದಲ್ಲಿ ೧೪ ಕೋಟಿ ಜನ ಬಂದಾರ ಸಮಾಜದವರಿದ್ದೇವೆ. ಕರ್ನಾಟಕದಲ್ಲಿ ೪೫ ಲಕ್ಷ ಜನ ಇದ್ದೇವೆ. ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ತಾಂಡಗಳು ಅಂದರೆ ೫೧೮ ಅಂದರೆ ಜಿಲ್ಲೆಯಲಿವೆ. ಇಂಡಿ ತಾಲೂಕಿನಲ್ಲಿ ೪೨ ತಾಂಡಾಗಳಿವೆ. ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದ ಬಿಜೆಪಿ ಪಕ್ಷಕ್ಕೆ ನಾವು ಯಾವುದೇ ರೀತಿಯಿಂದ ಬೆಂಬಲವನ್ನು ನೀಡುವದಿಲ್ಲ. ಈ ಬಾರಿ ಬಂಜಾರ ಸಮಾಜ ಕಾಂಗ್ರೆಸ್ ಪರವಾಗಿರಲಿದೆ ಆದ್ದರಿಂದ ನಾವು ಬಂಜಾರಾ ಸಮಾಜದವರು ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಸಮಾಜ ಕಾರ್ಯಗಳನ್ನು ಮಾಡಿಕೊಳ್ಳೋಣ ಎಂದು ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಪ.ಜಾ.ವಿಭಾಗದ ಜಿಲ್ಲಾ…
ಮೋರಟಗಿ: ರಾಜ್ಯ ಸರಕಾರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರಸಾಸೋದ್ಯಮ ಸಚಿವರಾದ ಎಚ್ ಕೆ ಪಾಟೀಲ್ ಅವರು ವಿಜಯಪುರ ಮೀಸಲು ಕ್ಷೇತ್ರದ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಪ್ರೋ, ರಾಜು ಆಲಗೂರ ಅವರ ಪ್ರಚಾರಾರ್ಥಕವಾಗಿ ದಿನಾಂಕ ೨೧-೦೪-೨೦೨೪ ರವಿವಾರ ಬೆಳಿಗ್ಗೆ ೧೦ ಗಂಟೆಗೆ ಸಿಂದಗಿ ವಿಧಾನಸಭಾ ಕ್ಷೇತ್ರದ ಮೋರಟಗಿ ಗ್ರಾಮಕ್ಕೆ ಆಗಮಿಸಲಿದ್ದಾರೆ.ಮೋರಟಗಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಎಲ್ಲ ಭೂತ ಮಟ್ಟದ ಅಧ್ಯಕ್ಷರು ಸದಸ್ಯರು ಹಾಗೂ ಪಕ್ಷದ ಅಭಿಮಾನಿಗಳು ಪ್ರಚಾರ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೋರಂದೇಶ್ವರ ಕಲ್ಯಾಣ ಮಂಟಪದಲ್ಲಿ ಭಾಗವಹಿಸಬೇಕು ಎಂದು ತಾಲೂಕ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ ಹಾಗೂ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಸದಸ್ಯ ಸಲೀಮ್ ಕಣ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಲವ್ ಜಿಹಾದಿಯ ಕಾರಣಕ್ಕಾಗಿ ಪಯಾಜ್ ಎಂಬಾತ ಮಾಡಿರುವ ಭೀಕರ ಹತ್ಯೆಯನ್ನು ಖಂಡಿಸಿ ಗಾಂಧಿವೃತ್ತದ ಮೂಲಕ ಬೃಹತ್ ಪ್ರತಿಭಟನೆ ಮಾಡುತ್ತ ಶನಿವಾರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಮನವಿ ಸಲ್ಲಿಸಲಾಯಿತು.ರಾಷ್ಟ್ರೀಯ ಕಲಾ ಮಂಚ ಪ್ರಾಂತ ಸಹ ಪ್ರಮುಖರಾದ ಸುರೇಖಾ ಕುಲಕರ್ಣಿ ಮಾತನಾಡಿ, ಶಾಲಾ ಕಾಲೇಜುಗಳು ಜ್ಞಾನದ ದೇಗುಲಗಳು ಇಂತಹ ದೇಗುಲದಲ್ಲಿ ಹಾಡು ಹಗಲೇ ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನು ಭೀಕರ ಹತ್ಯೆಯನ್ನು ಮಾಡಿರುವ ಘಟನೆ ನಿಜಕ್ಕೂ ವಿದ್ಯಾರ್ಥಿ ಸಮುದಾಯದಲ್ಲಿ ಭಯದ ವಾತಾವರಣ ಮೂಡಿಸಿದಂತಾಗಿದೆ. ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಂಸಿಎ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ನೇಹಾ ಹಿರೇಮಠ ಅವಳನ್ನು ಜಿಹಾದಿ ಕ್ರೂರ ಮನಸ್ಥಿತಿಯ ಪಯಾಜ್ ಎಂಬಾತ ಲವ್ ಜಿಹಾದಿಗಾಗಿ ಅವಳನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಈ ಪ್ರೀತಿಯನ್ನು ವಿದ್ಯಾರ್ಥಿನಿ ನಿರಾಕರಿಸಿದಕ್ಕಾಗಿ ಆಕೆಯ ಕಾಲೇಜಿಗೆ ಆಕ್ರಮವಾಗಿ ಪ್ರವೇಶಿಸಿ ಚಾಕುವಿನಿಂದ ೯ ಬಾರಿ ಇರಿದು ಬರ್ಬರವಾಗಿ ಹತ್ಯೆಮಾಡಲಾಗಿದೆ.ಕಾಲೇಜಿನ ಒಳಗೆ ಬಂದು ವಿದ್ಯಾರ್ಥಿನಿಯನ್ನು…
ಮುದ್ದೇಬಿಹಾಳ: ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣವನ್ನು ಖಂಡಿಸಿ ಪಟ್ಟಣದ ಜಂಗಮ ಸಮಾಜದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಮತ್ತು ಸಮಾಜಗಳ ಬೆಂಬಲದೊಂದಿಗೆ ಆರೋಪಿ ಫಯಾಜನನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಪಟ್ಟಣದ ಹಳೆಯ ಕಾಯಿಪಲ್ಲೆ ಮಾರುಕಟ್ಟೆಯಲ್ಲಿರುವ ಖಾಸ್ಗತೇಶ್ವರ ಮಠದಿಂದ ಶುರುವಾದ ಮೆರವಣಿಗೆ, ಬಜಾರ ನ ಗ್ರಾಮ ದೇವತೆ ದೇವಸ್ಥಾನ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ತಹಶೀಲ್ದಾರ ಕಚೇರಿಯ ವರೆಗೂ ಸಾಗಿತು.ನಂತರ ನಡೆದ ಬಹಿರಂಗ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ, ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ, ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಹರೀಶ ನಾಟೆಕಾರ, ಮಾಜಿ ಪುರಸಭೆ ಸದಸ್ಯ ಕಾಮರಾಜ ಬಿರಾದಾರ, ದಾನಯ್ಯ ಹಿರೇಮಠ, ಗುರಮೂರ್ತಿ ದೇವರು, ಸಂಗಯ್ಯ ಶಾಸ್ತಿçಗಳು, ಎಚ್.ಆರ್.ಬಾಗವಾನ, ಬಸವರಾಜ ಸಿದ್ದಾಪೂರ, ವಾಯ್.ಎಚ್.ವಿಜಯಕರ ಮಾತನಾಡಿ, ಮಹಿಳೆಯರನ್ನು ದೇವತೆಯ ರೂಪದಲ್ಲಿ ಕಾಣುವ ನಮ್ಮ ನಾಡಿನಲ್ಲಿ ನಡೆದ ಈ ಕೃತ್ಯ…
ಇಂಡಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಖಂಡಿಸಿ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಇಂಡಿ ತಾಲೂಕಾ ಚಿಂತನಾ ಕ್ರೀಯಾಶೀಲ ಮಠಾಧೀಶರ ಸಮಿತಿ, ಇಂಡಿ ತಾಲೂಕಾ ಜಂಗಮ ಕ್ಷೇಮಾಭಿವೃದ್ದಿ ಸಂಘ, ಇಂಡಿ ತಾಲೂಕಾ ಸರ್ವಧರ್ಮ ಸಮನ್ವಯ ಒಕ್ಕೂಟ ಸಹಯೋಗದಲ್ಲಿ ಶನಿವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ವಿದ್ಯಾರ್ಥಿ ಕೊಲೆ ಆರೋಪಿ ಫಯಾಜ ವಿರುದ್ಧ ಘೋಷಣೆ ಕುಗಿದ ಪ್ರತಿಭಟನಾಕಾರರು ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದರು.ಪ್ರತಿಭಟನೆ ಪಟ್ಟಣದ ಅಂಬೇಡ್ಕರ ವೃತ್ತದಿಂದ ಬಸವವೃತ್ತದ ಮೂಲಕ ಮಿನಿ ವಿಧಾನಸೌಧ ತಲುಪಿ ಅಲ್ಲಿ ಬೃಹತ್ ಸಭೆಯಾಗಿ ಮಾರ್ಪಟ್ಟಿತು.ಅಲ್ಲಿ ಮಾತನಾಡಿದ ಹತ್ತಳ್ಳಿ ಗುರುಪಾದೇಶ್ವರ ಶ್ರೀಗಳು ಮತ್ತು ತಡವಲಗಾದ ರಾಚೋಟೇಶ್ವರ ಶ್ರೀಗಳು ಆರೋಪಿ ಫಯಾಜಗೆ ಗಲ್ಲು ಶಿಕ್ಷೆ ಆಗಬೇಕು.ಕಾನೂನು ಮೂಲಕ ಕಠಿಣ ಕ್ರಮ ಕೈಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು. ಜೆಡಿ ಎಸ್ ಮುಖಂಡ ಬಿ.ಡಿ.ಪಾಟೀಲ, ನ್ಯಾಯವಾದಿ ಮತ್ತು ಜಂಗಮ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎಸ್.ಎಲ್.ನಿಂಬರಗಿಮಠ, ಶ್ರೀಶೈಲಗೌಡ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ…
