ವಿಜಯಪುರ: ವಿಜಯಪುರ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮುಳವಾಡ ಮಧ್ಯಂತರ ಪಂಪಿನ ಮನೆಯಿಂದ ಜಲನಗರ ಪಂಪಿನ ಮನೆಯವರೆಗೆ ಅಳವಡಿಸಿರುವ ೯೦೦ಎಂಎಂ ವ್ಯಾಸದ ಪಿಎಸ್‌ಸಿ ಮುಖ್ಯ ಏರು ಕೊಳವೆ ಮಾರ್ಗದ ಜೈನೇಜ್ ೩೬.೧೩೦ ಕಿ.ಮೀ. ಗುಮರಿ ಹಳ್ಳದ ಹತ್ತಿರ ಕೊಳವೆ ಮಾರ್ಗವು ಬರ್ಸ್ಟ್ ಆಗಿರುವುದರಿಂದ ತುರ್ತು ದುರಸ್ತಿ ಕಾಮಗಾರಿ ಜಲಮಂಡಳಿ ವತಿಯಿಂದ ಕೈಗೊಳ್ಳಲಾಗುತ್ತಿದೆ. ಜುಲೈ ೪ ರಂದು ವಿಜಯಪುರ ನಗರಕ್ಕೆ ಕೊಲ್ಹಾರ ಶುದ್ಧ ಕುಡಿಯುವ ಘಟಕದಿಂದ ನೀರು ಸರಬರಾಜಾಗುವ ಪ್ರದೇಶಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ನಗರದ ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸುವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
