Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಜುಲೈ ೧೩ ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಕಕ್ಷಿದಾರರು ಹಾಗೂ ವಕೀಲರ ಸಹಕಾರದಿಂದ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಾಕಿ ಇದ್ದ ಒಟ್ಟು ೧೩,೪೦೦ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು ಹಾಗೂ ೨,೧೯,೪೭೫ ವ್ಯಾಜ್ಯ ಪೂರ್ವ ಪ್ರಕರಣಗಳು ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಇತ್ಯರ್ಥಗೊಂಡಿದೆ.ಈ ಲೋಕ ಅದಾಲತ್‌ನಲ್ಲಿ ವಿವಿಧ ಕಾರಣಗಳಿಂದ ವಿಚ್ಚೇದನಕ್ಕೆ ಮೊರೆ ಹೋಗಿದ್ದ ಏಳು ದಂಪತಿಗಳನ್ನು ನ್ಯಾಯಾಧೀಶರು ಹಾಗೂ ವಕೀಲರ ಮಧ್ಯಸ್ಥಿಕೆಯಲ್ಲಿ ನಡೆದ ರಾಜಿ ಸಂಧಾನದಲ್ಲಿ ಮೂಲಕ ಒಂದಾಗಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.ಈ ರಾಷ್ಟ್ರೀಯ ಲೋಕ್ ಅದಾಲತನ ಯಶಸ್ಸಿಗೆ ಸಹಕರಿಸಿದ ಎಲ್ಲಾ ವಕೀಲರು, ಕಕ್ಷಿದಾರರು, ವಿಮಾ ಕಂಪನಿಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮತ್ತು ರಾಷ್ಟ್ರೀಯ ಲೋಕ್ ಅದಾಲತ್ ಬಗ್ಗೆ ಪ್ರಚಾರದಲ್ಲಿ ಸಹಭಾಗಿಯಾದ ಎಲ್ಲರಿಗೂ ಪ್ರಧಾನ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಶಿವಾಜಿ ಅನಂತ ನಲವಡೆ ಹಾಗೂ ಸದಸ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಅಂಬಲಿ ಅವರು ಅಭಿನಂದಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯಪುರ: ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಮಂಗಳವಾರ ಬೆಳಿಗ್ಗೆ ನಗರದ ಡಾ. ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣಕ್ಕೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಣಾಧಿಕಾರಿ ರಿಷಿ ಆನಂದ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ ಸೋನಾವಣೆ ಅವರೊಂದಿಗೆ ದಿಢೀರ ಭೇಟಿ ನೀಡಿ, ಕ್ರೀಡಾಂಗಣದ ಆವರಣ ಪರಿವೀಕ್ಷಣೆ ನಡೆಸಿದರು.ಕ್ರೀಡಾಂಗಣದಲ್ಲಿ ಒದಗಿಸಿರುವ ಕ್ರೀಡಾ ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದ ಅವರು, ಕ್ರೀಡಾಂಗಣ ಸ್ವಚ್ಛತೆಯೂ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿರುವ ಮಾಹಿತಿ ಪಡೆದುಕೊಂಡು, ಈ ಬಗ್ಗೆ ನಿಯಮಿತವಾಗಿ ಪರಿಶೀಲನೆ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ವಾಲಿಬಾಲ್, ಪುಟ್ಬಾಲ್, ಬಾಸ್ಕೆಟ್ ಬಾಲ್, ಅಥ್ಲೆಟಿಕ್ಸ್, ಹಾಕಿ ಅಸೋಷಿಯೇಶನ್ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಕ್ರೀಡಾ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕುರಿತು ಕುಂದುಕೊರತೆ ಸಭೆ ನಡೆಸಿದರು. ಕ್ರೀಡಾ ಇಲಾಖೆಯ ತರಬೇತಿದಾರರೊಂದಿಗೆ ಕ್ರೀಡಾ ತರಬೇತಿ ಹಾಗೂ ಸಾಧನೆಯ ಪ್ರಗತಿ ಕುರಿತು ವಿವರ ಪಡೆದುಕೊಂಡ ಅವರು,ಅಗತ್ಯ ಸಲಹೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ…
ಪಂ.ಪಂಚಾಕ್ಷರ ಗವಾಯಿಗಳ ಪುಣ್ಯಸ್ಮರಣೆಯಲ್ಲಿ ಪಂ.ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕ ಚನ್ನವೀರಸ್ವಾಮಿ (ಕಡಣಿ) ಆಗ್ರಹ ಧಾರವಾಡ: ಉತ್ತರದ ಸಂಗೀತವನ್ನು ದಕ್ಷಿಣಕ್ಕೆ ತಂದ ಪ್ರಮುಖರಲ್ಲಿ ಒಬ್ಬರಾದ, ಶಿಷ್ಯ ಪರಂಪರೆಯ ಮೂಲಕ ಧಾರವಾಡಕ್ಕೆ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ತವರು ಎನ್ನುವ ಖ್ಯಾತಿ ತಂದು ಕೊಟ್ಟ, ವಚನಗಳಿಗೆ ರಾಗ ಸಂಯೋಜಿಸಿ ಹಾಡಿ, ವಚನ ಗಾಯನ ಪರಂಪರೆಗೆ ನಾಂದಿ ಹಾಡಿದ, ಮಾತ್ರವಲ್ಲದೇ ಭಾರತ ರತ್ನ ಭೀಮಸೇನ ಜೋಷಿಯವರಂತಹ ಮಹಾನ ಸಂಗೀತ ದಿಗ್ಗಜರನ್ನು ಕೊಡುಗೆಯಾಗಿ ನೀಡಿದ ಶ್ರೇಯಸ್ಸು ಗಾನಯೋಗಿ ಪಂಚಾಕ್ಷರ ಗವಾಯಿಗಳವರಿಗೆ ಸಲ್ಲುತ್ತದೆ. ಇಂತಹ ಮಹಾನ್ ವಿಭೂತಿ ಪುರುಷ ಗಾನಯೋಗಿ ಪಂ. ಪಂಚಾಕ್ಷರ ಗವಾಯಿಗಳವರ ಸ್ಮಾರಕ ಧಾರವಾಡದಲ್ಲಿ ಆಗಬೇಕು ಎಂದು, ಡಾ. ಪಂ.ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕರಾದ ವೇ. ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಹೇಳಿದರು.ಅವರು ಜು.೧೪ ರಂದು ಸಂಜೆ ಧಾರವಾಡದ ರಂಗಾಯಣದಲ್ಲಿ, ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಆಯೋಜಿಸಿದ್ದ ಗಾನಯೋಗಿ ಪಂ. ಪಂಚಾಕ್ಷರ ಗವಾಯಿಗಳವರ ೮೦ನೆಯ ಪುಣ್ಯಸ್ಮರಣೆ ‘ಗುರು ಗುಣಗಾನ’ ಕವಿಗೋಷ್ಠಿ, ಕಾವ್ಯಗಾಯನ ಮತ್ತು ನೃತ್ಯ ನಮನವನ್ನು…
ಮಹರ್ಷಿ ವಾಲ್ಮೀಕಿ ಪ್ರತಿಮೆ ಬಳಿ ಧರಣಿ, ಪ್ರತಿಭಟನೆ | ವಿಧಾನಸಭೆಯ ಒಳಗೆ-ಹೊರಗೆ ಹೋರಾಟ ಮುಂದುವರಿಕೆ | ಸಿಬಿಐ ತನಿಖೆಗೆ ಆಗ್ರಹ ಬೆಂಗಳೂರು: ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ, SC/ST ನಿಧಿ ಬಳಕೆ, ವಕ್ಫ್ ಬೋರ್ಡ್ ಹಗರಣದ ವಿಚಾರವಾಗಿ ರಾಜ್ಯಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದ್ದು, ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕರ್ನಾಟಕದಲ್ಲಿ ಪ್ರತಿಪಕ್ಷ ಬಿಜೆಪಿ ಶಾಸಕರು ಸೋಮವಾರ ಪ್ರತಿಭಟನೆ ನಡೆಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಶಾಸಕರು ತುಂತುರು ಮಳೆಯ ನಡುವೆಯೇ ವಿಧಾನಸೌಧದ ಬಳಿಯ ಮಹರ್ಷಿ ವಾಲ್ಮೀಕಿ ಪ್ರತಿಮೆ ಬಳಿ ಧರಣಿ ಪ್ರತಿಭಟನೆ ನಡೆಸಿದರು.ಸರ್ಕಾರವನ್ನು ಖಂಡಿಸುವ ಬ್ಯಾನರ್‌ಗಳೊಂದಿಗೆ ಮೆರವಣಿಗೆಯನ್ನೂ ನಡೆಸಿದ ನಾಯಕರು, ಘೋಷಣಾ ಫಲಕಗಳನ್ನು ಹಿಡಿದು ಕಾಂಗ್ರೆಸ್ ಸರ್ಕಾರವನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ”ಸರ್ಕಾರ ದಲಿತರು ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧವಾಗಿದೆ. ಕರ್ನಾಟಕ ವಿಧಾನಸಭೆಯ ಒಳಗೆ…
ಚುನಾವಣೆ ಟಾಸ್ಕ್ನಲ್ಲಿ ಸೋತ ಸಚಿವರನ್ನು ಸಂಪುಟದಿಂದ ಕೈಬಿಡಲು ಮಾಲಿಕಯ್ಯ ಗುತ್ತೇದಾರ ಆಗ್ರಹ ಅಫಜಲಪುರ: ಕಲಬುರಗಿ ಲೋಕಸಭೆಯಿಂದ ಮತದಾರರು ನನ್ನನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳಿಸಿದ್ದಾರೆ, ನಾನು ಕಲಬುರಗಿ ಧ್ವನಿಯಾಗಿ ಸಂಸತ್ತಿನಲ್ಲಿ ಕೆಲಸ ಮಾಡುತ್ತೇನೆ ಎಂದು ಸಂಸದ ರಾಧಾಕೃಷ್ಣ ದೊಡ್ಮನಿ ಹೇಳಿದರು.ಪಟ್ಟಣದ ಸರಸಂಬಾ ಕಲ್ಯಾಣ ಮಂಟಪದಲ್ಲಿ ನಡೆದ ಮತದಾರರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಾ, ಮತದಾರರು ಬಹಳ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಎಲ್ಲರ ಕಣ್ಣು ಕಲಬುರಗಿ ಮೇಲಿತ್ತು. ಆದರೆ ಮತದಾರರು ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಇಟ್ಟು ನನ್ನನ್ನು ಆಯ್ಕೆ ಮಾಡಿದ್ದಾರೆ. ಪಕ್ಷದ ಹಿರಿಯರು, ಶಾಸಕರು, ಸಚಿವರು, ಮುಖಂಡರು, ಕಾರ್ಯಕರ್ತರು, ಕ್ಷೇತ್ರದ ಮತದಾರರ ಅಭಿಪ್ರಾಯ, ಸಲಹೆ ಪಡೆದು ಅಭಿವೃದ್ದಿ ಕೆಲಸಗಳನ್ನು ಮಾಡುತ್ತೇನೆ ಎಂದರು.ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡುತ್ತಾ, ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧೆ ಮಾಡಿದ್ದ ಸಂದರ್ಭದಲ್ಲಿ ಅಫಜಲಪುರ ಮತಕ್ಷೇತ್ರದಿಂದ ೩೭ ಸಾವಿರ ಮತಗಳು ಬಿಜೆಪಿಗೆ ಲೀಡ್ ಬಂದಿದ್ದರಿಂದ ಖರ್ಗೆ ಅವರು ಸೋಲಬೇಕಾಯಿತು. ಆದರೆ ಈ ಬಾರಿ…
ಇಂಡಿ: ಪಟ್ಟಣದಲ್ಲಿ ಹುಸೇನ ಬಾಷಾ ದೇವಸ್ಥಾನದಲ್ಲಿ ಸಂಭ್ರಮ ಸಡಗರದಿಂದ ಆಟವಿ ಖತಾಲ ಆಚರಿಸಲಾಯಿತು.ಜಾತ್ರೆ ನಿಮಿತ್ಯ ಇಂಡಿ ಸೇರಿದಂತೆ ಕಲಬುರಗಿ, ವಿಜಯಪುರ, ಸೋಲಾಪುರ, ಪುನಾ, ಮುಂಬಯಿ ಮತ್ತು ಮಹಾರಾಷ್ಟ್ರ ಆಂಧ್ರದಿಂದ ಅಂದಾಜು ೧೫ ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ತಮ್ಮ ಹರಕೆ ತೀರಿಸಿದರು.ಹುಸೇನರು ಮಕ್ಕಾ ಮದೀನಾದ ಕರಬಲಾ ಮೈದಾನದಲ್ಲಿ ಹುತಾತ್ಮರಾದ ನಿಮಿತ್ಯ ಆಟವಿ ಖತಾಲ ಆಚರಿಸುವದು ಇಂಡಿಯ ಮೊಹರಮ್ ವಿಶೇಷ.ಬೆಳಗ್ಗೆಯಿಂದ ಭಕ್ತಾದಿಗಳು ದರ್ಶನ ಮತ್ತು ನೈವೆದ್ಯ ಅರ್ಪಣೆಗೆ ಪ್ರಾರಂಭಿಸಿದ್ದರು. ಇಂಡಿಯ ದಾದಾಗೌಡರ ಮನೆ, ನಾಡಗೌಡ, ದೇಶಪಾಂಡೆ ಸೇರಿದಂತೆ ಅನೇಕ ಗಣ್ಯರ ಮನೆಯಿಂದ ನೈವೆದ್ಯ ಮೆರವಣೆಗೆಯಲ್ಲಿ ಬಂದು ಸಲ್ಲಿಸಿದರು.ಕರಬಲ್, ಭಡಂಗ ಕುಣಿತ, ಡೊಳ್ಳು, ಹುಲಿಕುಣಿತ, ಸೇರಿದಂತೆ ತಾಷಾ,ಬೆಂಡ ಒಳಗೊಂಡ ಕಾರ್ಯಕ್ರಮಗಳು ದೇವಸ್ಥಾನದ ಆವರಣದಲ್ಲಿ ನಡೆದವು.ದರ್ಶನಕ್ಕೆ ಗದ್ದಲ ನಿಮಿತ್ಯ ಅರ್ಧ ಕಿ.ಮಿ ವರೆಗೂ ಸರದಿ ಮಾಡಲಾಗಿತ್ತು.ಪೋಲಿಸ ಇಲಾಖೆ ಸಿಪಿಐ ರತನಕುಮಾರ ಜಿರಗಿಹಾಳ ಇವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ ಮಾಡಿದ ನಿಮಿತ್ಯ ಶಾಂತಿಯುತವಾಗಿ ಭಕ್ತರು ದರ್ಶನ ಪಡೆದರು.ಮಂಗಳವಾರ ನಸುಕಿನ ೪ ಗಂಟೆಯ ವರೆಗೂ ದರ್ಶನ ಮುಂದು ವರೆಯಲಿದ್ದು…
ವಿಜಯಪುರ: ಎಸ್.ಎಂ.ಎನ್. ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದಿಂದ ವಂಚಿತಗೊಂಡ ಗ್ರಾಹಕರ ಸಭೆಯನ್ನು ವಿಜಯಪುರ ಗಗನಮಹಲ್ ದಲ್ಲಿ ಜು.೧೭, ಬುಧವಾರದಂದು ಬೆಳಗ್ಗೆ ೧೧ ಗಂಟೆಗೆ ಕರೆಯಲಾಗಿದೆ. ಈ ಸಭೆಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಕರೆಯಲಾದ ಕ್ಲೇಮಗೆ ಅರ್ಜಿ ಆಹ್ವಾನ ಸೇರಿದಂತೆ ವಿವಿಧ ಮಹತ್ವದ ವಿಷಯಗಳನ್ನು ಚರ್ಚೆ ಮಾಡಲಾಗುವದು ಎಂದು ಎಸ್.ಎಂ.ಎನ್. ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದ ವಂಚಿತ ಗ್ರಾಹಕರ ಹೋರಾಟ ಸಮಿತಿಯ ಅಧ್ಯಕ್ಷ ಅರವಿಂದ ಕುಲಕರ್ಣಿ ಹಾಗೂ ಹೋರಾಟದ ಸಮಿತಿಯ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಂದಗಿ: ಹೂವಾಡಿಗ, ಹೂಗಾರ. ಜೀರ, ಗುರವ, ಪೂಜಾರಿ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಸರ್ಕಾರ ಕರ್ನಾಟಕ ಮಾಲಿ, ಮಾಲಗಾರ ಹಾಗೂ ಹೂಗಾರ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿ ಸ್ಥಾಪಿಸಿ ೧೦೦ ಕೋಟಿ ರೂ.ಹಣ ಮಿಸಲಿಡಬೇಕು ಎಂದು ಸಿಂದಗಿ ತಾಲೂಕಾ ಹೂಗಾರ ಸಮಾಜ ಸೇವಾ ಸಂಘ ತಾಲೂಕಾ ಘಟಕದ ವತಿಯಿಂದ ಸೋಮವಾರ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಗ್ರೇಡ್-೨ ತಹಶೀಲ್ದಾರ ಇಂದಿರಾಬಾಯಿ ಬಳಗಾನೂರ ಅವರಿಗೆ ಮನವಿ ಸಲ್ಲಿಸುವ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ನಂತರ ಶಾಸಕ ಅಶೋಕ ಮನಗೂಳಿ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿ ಅಧಿವೇಶನದಲ್ಲಿ ನಮ್ಮ ಸಮಾಜದ ಧ್ವನಿಯಾಗಿ ಮಾತನಾಡಬೇಕು ಎಂದು ಮನವಿ ಮಾಡಿಕೊಂಡರು.ಕರ್ನಾಟಕ ಮಾಲಿ, ಮಾಲಗಾರ ಹಾಗೂ ಹೂಗಾರ ಅಭಿವೃದ್ಧಿ ನಿಗಮಕ್ಕೆ ಶ್ರೀ ಹೂಗಾರ ಮಾದಯ್ಯ ಅಭಿವೃದ್ಧಿ ನಿಗಮ ಎಂದು ಮರು ನಾಮಕರಣ ಮಾಡಬೇಕು ಎಂಬ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದ ಪಕ್ಷದಲ್ಲಿ ಜು.೨೭ ರಂದು ಅಖಂಡ ಕನಾಟಕ ಹೂಗಾರ ಮಹಾಸಭಾ ವತಿಯಿಂದ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಜು.೨೭ ರಂದು ಅಹೋರಾತ್ರಿ ಧರಣಿ…
ವಿಜಯಪುರ: ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ (ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ) ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಜಿಲ್ಲಾ ಘಟಕದ ವತಿಯಿಂದ ವಿಜಯಕುಮಾರ ಆಜೂರ ಜಿಲ್ಲಾ ಪಂಚಾಯತ ಡಿ.ಎಸ್ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ವಿವಿಧ ಬೇಡಿಕೆಗಳಾದ ಶಿಕ್ಷಕರ ಸಾಮಾನ್ಯ ವರ್ಗಾವಣೆಯನ್ನು ಎಪ್ರಿಲ್/ಮೇ ತಿಂಗಳನಲ್ಲಿ ಜಾರಿಗೊಳಿಸುವುದು, ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ವೇತನವನ್ನು ಮಾಡುವುದು, ೭ ನೇ ವೇತನ ಆಯೋಗ ಜಾರಿಗೊಳಿಸುವುದು, ಪ್ರತಿವರ್ಷ ನಿಯಮಿತವಾಗಿ ಪ್ರೌಢಶಾಲಾ ಶಿಕ್ಷಕರ ಮುಖ್ಯೋಪಾಧ್ಯಾಯರ ಹುದ್ದೆಗೆ ಮುಂಬಡ್ತಿ ನೀಡುವುದು, ಜ್ಯೋತಿ ಸಂಜೀವಿನಿ ಸ್ಕಿಮ್‌ನ್ನು ಅನುದಾನಿತ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ವಿಸ್ತರಿಸುವುದು, ಹಾಗು ಪ್ರೌಢಶಾಲಾ ಶಿಕ್ಷಕರನ್ನು ಪದವಿಪೂರ್ವ ಕಾಲೇಜುಗಳಿಗೆ ಮುಂಬಡ್ತಿ ನೀಡುವುದು ಹಾಗು ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಅರುಣ ಶಹಾಪೂರ, ಎ.ಎಸ್. ಬಿರಾದಾರ, ವೈ. ಎಮ್. ಪ್ರಧಾನಿ, ಜಿ.ಎಸ್. ಸಾವಳಗಿ, ಎಸ್.ಜಿ. ಹಂಚನಾಳ, ಎಸ್,ಬಿ. ಜೋಶಿ ಮುಂತಾದವರು ಇದ್ದರು.
