Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಇಂಡಿ: ಆಚಾರ ವಿಚಾರಕ್ಕೆ, ಪೂಜೆ ಪುನಸ್ಕಾರಗಳಿಗೆ, ಅಂಧಕಾರಕ್ಕೆ, ಮೂಡ ನಂಬಿಕೆಗಳಿಗೆ, ಕಟ್ಟಪ್ಪಣೆಗಳಿಗೆ ಸೀಮಿತವಾಗಿರುವ ಧರ್ಮ ಧರ್ಮವೇ ಅಲ್ಲ. ಸಮಾಜದಲ್ಲಿ ನೊಂದ ಮನುಷ್ಯನನ್ನು ದುಶ್ಚಟಗಳಿಗೆ ದಾಸನಾಗಿರುವವನನ್ನು, ಬಡತನದಿಂದ ಕಂಗೆಟ್ಟಿರುವವನ್ನು, ರೋಗಗಳಿಂದ ನರಳುತ್ತಿರುವವನನ್ನು ಆರೈಕೆ ಮಾಡಿ ಅವನನ್ನು ಮೇಲೆತ್ತಲು ಪ್ರಯತ್ನಿಸುವುದೇ ನಿಜವಾದ ಧರ್ಮ ಎಂದು ಅಭಿನವ ರಾಚೋಟೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು.ಅವರು ಗುರುವಾರ ಇಂಡಿ ಪಟ್ಟಣದ ಕಾಳಿಕಾ ದೇವಿ ಮಂಗಲ ಕಾರ್ಯಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ ಹಮ್ಮಿಕೊಂಡಿದ್ದ ೭ ದಿನಗಳ ಮಧ್ಯವರ್ಜನ ಶಿಬಿರದ ಸಾನಿಧ್ಯತೆ ವಹಿಸಿ ಮಾತನಾಡಿದರು.ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆ ದೂರದ ಇಂಡಿ ಪಟ್ಟಣದಲ್ಲಿಯೂ ಕಳೆದ ೭ ವರ್ಷಗಳಿಂದ ಅನೇಕ ಸಾಮಾಜಿಕ ಪ್ರಗತಿಪರ ಕೆಲಸಗಳನ್ನು ಮಾಡುತ್ತಿದೆ. ಗ್ರಾಮಗಳಲ್ಲಿ ಕುಡಿಯುವ ನೀರು, ಸ್ವಚ್ಚತೆ, ರಸ್ತೆ ಅಭಿವೃದ್ಧಿ, ನಿರುದ್ಯೋಗಿಗಳಿಗೆ ಕೆಲಸ, ಕೈಗಾರಿಕೋದ್ಯಮಿ ಬೆಳವಣಿಗೆ, ಬಡವರಿಗೆ ಉದ್ಯೋಗ, ನಿರುದ್ಯೋಗಿಗಳಿಗೆ ಆರ್ಥಿಕ ಸಹಾಯ ಮುಂತಾದ ಕೆಲಸಗಳೊಂದಿಗೆ ಮಧ್ಯವರ್ಜನಿಗಳನ್ನು ಕೂಡಿಸಿ, ಅವರಿಗೆ ತಿಳುವಳಿಕೆ ನೀಡಿ, ಉಟೋಪಚಾರ ಮಾಡಿಸಿ, ಮಧ್ಯ ಸೇವನೆಯಿಂದ ಆಗುವ ದುಷ್ಪರಿಣಾಮಗಳನ್ನು ತಿಳಿಸಿ, ದುಶ್ಚಟದಿಂದ ಮುಕ್ತಿ ಹೊಂದುವಂತೆ ಕೆಲಸ…
ಇಂಡಿ: ವಿದ್ಯಾರ್ಥಿಗಳು ಆದರ್ಶ ನಾಯಕತ್ವದ ಗುಣಗಳನ್ನು ಬೆಳಸಿಕೊಳ್ಳಬೇಕು ಎಂದು ಬಿ.ಡಿ. ಇ ಕಾಲೇಜಿನ ಪ್ರೊ.ರಘೋತ್ತಮ ಅರ್ಜುಣಗಿ ಹೇಳಿದರು.ಅವರು ಇಂಡಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ವಾಣಿಜ್ಯಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ಅಡಿಯಲ್ಲಿ ಹಮ್ಮಿಕೊಂಡಿದ್ದ ನಾಯಕತ್ವದ ಗುಣಗಳು ಎಂಬ ವಿಶೇಷ ಉಪನ್ಯಾಸ ʼ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಆರ್.ಎಚ್.ರಮೇಶ ಮಾತನಾಡಿ ಭವಿಷ್ಯದ ಭಾರತಕ್ಕೆ ಉತ್ತಮ ನಾಯಕತ್ವದ ಗುಣಗಳನ್ನು ಯುವಜನತೆ ಅಳವಡಿಸಿಕಳ್ಳಬೇಕು ಎಂದರು.ಐಕ್ಯೂಎಸಿ ಸಂಯೋಜಕರಾದ ಡಾ.ಶೀರುನುಸುಲ್ತಾನ ಇನಾಂದಾರ, ಪ್ರೊ.ತಿಪ್ಪಣ್ಣ ವಗ್ದಾಳ,ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ರಾಜಲಕ್ಷ್ಮಿ ಆರ್, ಉಪನ್ಯಾಸಕರಾದ ಪ್ರೊ.ಪಿಎಸ್.ದೇವರ, ಎಂ.ಎಚ್.ಮೋಮಿನ್, ಪೂಜಾ ಡಿ.ಆರ್, ಭಾರತಿ ಕನ್ನೊಳ್ಳಿಮೊದಲಾದವರು ವೇದಿಕೆಯಲ್ಲಿದ್ದರು.ಕು.ರಾಹುಲ್ಭಾಸಗಿ ಸ್ವಾಗತಿಸಿದರು. ಕು.ರಮೇಶ ಮಾವನಿಹಳ್ಳಿ ನಿರೂಪಿಸಿದರು. ಕು.ಸ್ವಾಗತ ಸಾತಲಗಾಂವ ವಂದಿಸಿದರು.
ತಾಳಿಕೋಟಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ವತಿಯಿಂದ ನೀಡಲಾಗುವ 2024 ನೇ ಸಾಲಿನ ಸಂಘದ ವಾರ್ಷಿಕ ಪ್ರಶಸ್ತಿಗೆ ಪಟ್ಟಣದ ಕ್ರಿಯಾಶೀಲ ವರದಿಗಾರ ಸುನೀಲ ತಳವಾರ ಆಯ್ಕೆಯಾಗಿದ್ದಾರೆ.ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಜಿಲ್ಲೆಯ ಒಟ್ಟು 31 ಜನರನ್ನು ಆಯ್ಕೆ ಮಾಡಲಾಗಿದ್ದು ಇದರಲ್ಲಿ ಪಟ್ಟಣದ ಕನ್ನಡಮ್ಮ ದಿನಪತ್ರಿಕೆಯ ತಾಲೂಕ ವರದಿಗಾರ ರಾಗಿರುವ ಸುನೀಲ ತಳವಾರ ಕೂಡಾ ಒಬ್ಬರಾಗಿದ್ದಾರೆ.ಜುಲೈ 28 ರಂದು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಯೋಗದಲ್ಲಿ ನಗರದ ಪೊಲೀಸ್ ಸಮುದಾಯ ಭವನದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ, ಸಕ್ಕರೆ ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ಸಂಸದ ರಮೇಶ ಜಿಗಜಿಣಗಿ ಹಾಗೂ ಜಿಲ್ಲೆಯ ಎಲ್ಲ ಶಾಸಕರ ಸಮ್ಮುಖದಲ್ಲಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ…
ವಿಜಯಪುರ: ರಾಷ್ಟ್ರೀಯ ಬಂಜಾರಾ ಪರಿಷದ್ ಯುವ ಘಟಕದ ರಾಜ್ಯಾಧ್ಯಕ್ಷರನ್ನಾಗಿ, ಬಿಜೆಪಿ ನಗರ ಮಂಡಲ ಎಸ್.ಸಿ ಮೋರ್ಚಾ ಅಧ್ಯಕ್ಷರಾದ ಪ್ರಕಾಶ ಚವ್ಹಾಣ ಅವರನ್ನು ನೇಮಕ ಮಾಡಿ ಪರಿಷದ್ ರಾಷ್ಟ್ರೀಯ ಅಧ್ಯಕ್ಷ ವಿಲಾಸಬಾಹು ರಾಠೋಡ ಆದೇಶ ಹೊರಡಿಸಿದ್ದಾರೆ.
ಇಂಡಿ: ತಾಲ್ಲೂಕಿನಲ್ಲಿ ಸಮಸ್ಯೆಗಳ ಸರಮಾಲೆ ತುಂಬಿಕೊಂಡಿವೆ. ಅವುಗಳನ್ನು ಕೂಡಲೇ ಸರಕಾರದ ಗಮನಕ್ಕೆ ತಂದು ಪರಿಹರಿಸಬೇಕು ಎಂದು ಬಿಜೆಪಿ ಮುಖಂಡ ಅದೃಷಪ್ಪ ವಾಲಿ (ಮಸಳಿ) ಅವರು ಜಿಲ್ಲಾಧಿಕಾರಿ ಟಿ ಭೂಬಾಲನ್ ಅವರಿಗೆ ಮನವಿ ಸಲ್ಲಿಸಿದರು.ಬುಧವಾರ ಪಟ್ಟಣದ ಆಡಳಿತ ಸೌಧಕ್ಕೆ ಡೆಂಗ್ಯೂ ಜಾಗೃತಿ ಜಾಥಾ ಚಾಲನೆ ನೀಡಲು ಜಿಲ್ಲಾಧಿಕಾರಿ ಆಗಿಮಿಸಿದ್ದರು. ಈ ಸಂದರ್ಭದಲ್ಲಿ ಮಸಳಿ ಹಾಗೂ ಇತರೆ ಗ್ರಾಮಸ್ಥರು ತಾಲ್ಲೂಕಿನಲ್ಲಿ ಹಲವಾರು ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದು ಮನವಿ ಸಲ್ಲಿಸಿದರು.ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯ ಅಧಿಕಾರಿ, ಹಾಗೂ ಗರ್ಭಿಣಿಯರಿಗೆ ಬಿಸಿ ನೀರು ಸೇರಿದಂತೆ ಇತರೆ ಸಮಸ್ಯೆಗಳು ಎದ್ದು ಕಾಣುತ್ತಿವೆ. ಇನ್ನೂ ತಾಲ್ಲೂಕಿನ ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟು ಹೋಗಿವೆ. ಜನರು ವ್ಯಾಪಾರ, ವಹಿವಾಟು, ಆಸ್ಪತ್ರೆ, ಶಾಲೆಗೆ ಬರುವ ಮಕ್ಕಳ ಗೋಳು ಹೇಳತಿರದಂತಾಗಿದೆ. ಇನ್ನೂ ಪಡಿತರ ಚೀಟಿ, ಶುದ್ದ ಕುಡಿಯುವ ನೀರಿನ ಸಮಸ್ಯೆ ಇನ್ನೂ ಹಲವಾರು ಸಮಸ್ಯೆಗಳು ತಾಲ್ಲೂಕಿನಲ್ಲಿ ತಾಂಡವಾಡುತ್ತಿವೆ. ಕೂಡಲೇ ಜಿಲ್ಲಾಧಿಕಾರಿಗಳು ಸರಕಾರದ ಗಮನಕ್ಕೆ ತಂದು ಜನಸಾಮಾನ್ಯರ ಸಾರ್ವಜನಿಕ ಸಮಸ್ಯೆಗಳು ಪರಿಹಾರ ನೀಡಬೇಕು ಎಂದು…
ಇಂಡಿ: ಅಕ್ರಮವಾಗಿ ವಾಹನದಲ್ಲಿ ಅಕ್ಕಿ ಸಾಗಾಟದ ವೇಳೆ ಪೊಲೀಸರು ಹಾಗೂ ಆಹಾರ ನಿರೀಕ್ಷಕ ಅಧಿಕಾರಿಗಳು ದಾಳಿಗೈದು ಅಕ್ಕಿ ಜಪ್ತಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಕೊಳೂರಗಿ ಗ್ರಾಮದ ಬಳಿ ನಡೆದಿದೆ. ಅಬೂಬಕರ್ ಲಾಲಸಾಬ್ ಜಮಾದಾರ ಬಂಧಿತ ಆರೋಪಿ. ಇನ್ನು ಬಂಧಿತ ಆರೋಪಿಯಿಂದ 16,153 ಮೌಲ್ಯದ 500 ಕೆಜಿ 57 ಗ್ರಾಂದ ರೇಷನ್ ಅಕ್ಕಿ, 50 ಸಾವಿರ ಮೌಲ್ಯದ ವಾಹನ, ಒಂದು ಮಷಿನ್ ವಶಕ್ಕೆ ತೆಗೆದುಕೊಂಡಿದ್ದಾರೆ. ಹೊರ್ತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕ ಪರಮಾನಂದ ಹೂಗಾರ, ಪಿಎಸ್ಐ ಸಿತಾರಾಮ ಹಾಗೂ ಪೆದೆ ಪಿ ಬಿ ಬಿರಾದಾರ, ಎಸ್ ಎಂ ಹುಣಶ್ಯಾಳ ಉಪಸ್ಥಿತರಿದ್ದರು.
ಬಸವನಬಾಗೇವಾಡಿ: ಪಟ್ಟಣದ ಹೃದಯ ಭಾಗದಲ್ಲಿ ಪುರಸಭೆಯಿಂದ ನಿರ್ಮಾಣಗೊಂಡಿರುವ ಮೆಗಾಮಾರುಕಟ್ಟೆ ಕಟ್ಟಡದ ಕೊಲ್ಹಾರಕ್ಕೆ ಹೋಗುವ ಮುಖ್ಯರಸ್ತೆಗೆ ಹೊಂದಿಕೊಂಡಿದ್ದ ಆವರಣಗೋಡೆ(ಕಂಪೌಂಡ್)ಯನ್ನು ತೆರವು ಗೊಳಿಸುವ ಕಾರ್ಯಾಚರಣೆ ಪುರಸಭೆಯಿಂದ ಗುರುವಾರ ನಡೆಸಲಾಯಿತು.ಆವರಣಗೋಡೆಗೆ ಹೊಂದಿಕೊಂಡು ಹಾಕಲಾಗಿದ್ದ ಡಬ್ಬಾ ಅಂಗಡಿಗಳನ್ನು ಪುರಸಭೆಯಿಂದ ಮೊದಲು ತೆರವು ಗೊಳಿಸಿದ ನಂತರ ಜೆಸಿಬಿಯಿಂದ ಆವರಣಗೋಡೆಯನ್ನು ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ಆವರಣಗೋಡೆಗೆ ಇಟ್ಟಿದ್ದ ಡಬ್ಬಾ ಅಂಗಡಿಗಳ ವ್ಯಾಪಾರಿಗಳು ನಮ್ಮ ನಿತ್ಯ ಜೀವನ ಇದರಿಂದ ನಡೆಯುತ್ತಿದೆ. ಅಧಿಕಾರಿಗಳು ನಮ್ಮ ಬಗ್ಗೆ ಗಮನ ಹರಿಸಬೇಕು. ನಮ್ಮ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಳ್ಳುವ ಜೊತೆಗೆ ಅಽಕಾರಿಗಳೊಂದಿಗೆ ಮಾತಿನ ವಾಗ್ವಾದ ನಡೆಯಿತು.ಮೆಗಾಮಾರುಕಟ್ಟೆಯಲ್ಲಿ ಬಾಡಿಗೆ ಹಿಡಿದ ಅಂಗಡಿ ಮಾಲೀಕರು ಪುರಸಭೆ ಮುಖ್ಯಾಧಿಕಾರಿಗಳಿಗೆ ಕೊಲ್ಹಾರ ರಸ್ತೆಗೆ ಹೊಂದಿಕೊಂಡಿರುವ ಆವರಣಗೋಡೆಯನ್ನು ತೆರವು ಗೊಳಿಸಿ ನಮ್ಮ ಅಂಗಡಿಗಳಿಗೆ ಜನರು ಬರುವಂತೆ ಅನುಕೂಲ ಮಾಡಿಕೊಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬುಧವಾರವಷ್ಟೇ ಮನವಿ ಸಲ್ಲಿಸಿದ್ದರು. ಇದರ ಬೆನ್ನಲ್ಲೆಯಲ್ಲಿಯೇ ಇಂದು ತಾತ್ಕಾಲಿಕವಾಗಿ ಕಟ್ಟಲಾಗಿದ್ದ ಆವರಣಗೋಡೆಯ ತೆರವು ಕಾರ್ಯಾಚರಣೆಯನ್ನು ಇಂದು ಪುರಸಭೆಯಿಂದ ನಡೆದಿದೆ.ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಅವರನ್ನು ಸಂಪರ್ಕಿಸಿದಾಗ, ಮೆಗಾಮಾರುಕಟ್ಟೆಯ…
ಬಸವನಬಾಗೇವಾಡಿ: ಗ್ರಾಮೀಣ ಭಾಗದಲ್ಲಿ ಆಯೋಜಿಸುವ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳಿಂದ ಶಿಬಿರಾರ್ಥಿಗಳು ಸೇವಾ ಮನೋಭಾವ ಗುಣ ಅರಿತುಕೊಳ್ಳುವ ಜೊತೆಗೆ ಗ್ರಾಮೀಣ ಭಾಗದ ಸಂಸ್ಕ್ರತಿಯನ್ನು ಅರಿತುಕೊಳ್ಳಲು ಪೂರಕವಾಗುತ್ತದೆ ಎಂದು ರಾಷ್ಟ್ರೀಯ ಸೇವಾ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಡಾ.ಪ್ರಕಾಶ ರಾಠೋಡ ಹೇಳಿದರು.ತಾಲೂಕಿನ ಟಕ್ಕಳಕಿ ಗ್ರಾಮದಲ್ಲಿ ಈಚೆಗೆ ಒಂದು ವಾರ ಕಾಲ ಸ್ಥಳೀಯ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯವು ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರೆ ಉತ್ತಮ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯ. ಒಂದು ವಾರ ಕಾಲ ಈ ಗ್ರಾಮದಲ್ಲಿ ಜರುಗಿದ ಶಿಬಿರದಿಂದ ಗ್ರಾಮೀಣ ಸಂಸ್ಕ್ರತಿ, ಬದುಕು, ಕೃಷಿಕರ ಸಮಸ್ಯೆಗಳನ್ನು ಶಿಬಿರಾರ್ಥಿಗಳು ಅರಿತುಕೊಳ್ಳುವಲ್ಲಿ ಸಹಾಯಕವಾಗಿದೆ. ಗ್ರಾಮೀಣ ಭಾಗದ ಜನರಿಗೆ ಸ್ವಚ್ಛತೆ ಸೇರಿದಂತೆ ವಿವಿಧ ವಿಷಯಗಳನ್ನು ಜಾಗೃತಿ ಮೂಡಿಸುವಲ್ಲಿ ಶಿಬಿರವು ಮಾಡಿಸುವ ಮೂಲಕ ಯಶಸ್ವಿಯಾಗಿದೆ ಎಂದರು.ಮಹಾವಿದ್ಯಾಲಯದ ಎನ್ಎನ್ಎಸ್ ಕಾರ್ಯಕ್ರಮಾಧಿಕಾರಿ ಡಾ.ವೈ.ಬಿ.ನಾಯಕ ಮಾತನಾಡಿ, ಜು.೧೫ ರಿಂದ ೨೧ ರವರೆಗೆ…
ಸಿಂದಗಿ: ಕರ್ನಾಟಕ ಕಾರ್ಯನಿರತ ಪರ್ತಕರ್ತರ ಸಂಘ ಜಿಲ್ಲಾ ಘಟಕ ವಿಜಯಪುರ ವತಿಯಿಂದ ೨೦೨೪ನೆಯ ಸಾಲಿನಲ್ಲಿ ಕೊಡಮಾಡುವ ಜಿಲ್ಲಾ ವಾರ್ಷಿಕ ಪ್ರಶಸ್ತಿಗೆ ಸಿಂದಗಿ ಕನ್ನಡಪ್ರಭ ತಾಲೂಕು ವರದಿಗಾರ ಸಿದ್ದಲಿಂಗ ಕಿಣಗಿ ಹಾಗೂ ವಿಜಯ ಕರ್ನಾಟಕ ತಾಲೂಕು ವರದಿಗಾರ ಸುದರ್ಶನ ಜಂಗಣ್ಣಿ ಅವರು ಆಯ್ಕೆಯಾಗಿದ್ದಾರೆ ಎಂದು ಕಾನಿಪ ತಾಲೂಕಾಧ್ಯಕ್ಷ ಆನಂದ ಶಾಬಾದಿ ಹೇಳಿದ್ದಾರೆ.ಜು.೨೮ರಂದು ವಿಜಯಪುರದ ಸೋಲಾಪೂರ ರಸ್ತೆಯಲ್ಲಿರುವ ಪೊಲೀಸ್ ಪರೇಡ್ ಮೈದಾನದ ಎದುರಿರುವ ಪೊಲೀಸ್ ಸಮುದಾಯ ಭವನ ನಡೆಯುವ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕಾನಿಪ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಂದಗಿ: ತಾಲೂಕಿನ ನಬಿರೋಷನ್ ಪ್ರಕಾಶನ, ಬೋರಗಿ ವತಿಯಿಂದ ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ಪೊಲೀಸ್ ಕಲಾ ಸಂಗಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದ ಉದ್ಘಾಟಕರಾಗಿ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಡಾ.ಹಂಸಲೇಖ ಅವರಿಗೆ ಅವರ ನಿವಾಸದಲ್ಲಿ ಭೇಟಿಯಾಗಿ ಆಹ್ವಾನಿಸಲಾಯಿತು. ಇದೇ ವೇಳೆ ಪೊಲೀಸ್ ಅಧಿಕಾರಿ ಸುರೇಶ, ಆರಕ್ಷಕ ಮೌಲಾಲಿ ಆಲಗೂರ, ಜಲಾಲುದ್ದೀನ್ ದಲಾಲ್ ಇದ್ದರು.
