ಇಂಡಿ: ಅಕ್ರಮವಾಗಿ ವಾಹನದಲ್ಲಿ ಅಕ್ಕಿ ಸಾಗಾಟದ ವೇಳೆ ಪೊಲೀಸರು ಹಾಗೂ ಆಹಾರ ನಿರೀಕ್ಷಕ ಅಧಿಕಾರಿಗಳು ದಾಳಿಗೈದು ಅಕ್ಕಿ ಜಪ್ತಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಕೊಳೂರಗಿ ಗ್ರಾಮದ ಬಳಿ ನಡೆದಿದೆ. ಅಬೂಬಕರ್ ಲಾಲಸಾಬ್ ಜಮಾದಾರ ಬಂಧಿತ ಆರೋಪಿ. ಇನ್ನು ಬಂಧಿತ ಆರೋಪಿಯಿಂದ 16,153 ಮೌಲ್ಯದ 500 ಕೆಜಿ 57 ಗ್ರಾಂದ ರೇಷನ್ ಅಕ್ಕಿ, 50 ಸಾವಿರ ಮೌಲ್ಯದ ವಾಹನ, ಒಂದು ಮಷಿನ್ ವಶಕ್ಕೆ ತೆಗೆದುಕೊಂಡಿದ್ದಾರೆ. ಹೊರ್ತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕ ಪರಮಾನಂದ ಹೂಗಾರ, ಪಿಎಸ್ಐ ಸಿತಾರಾಮ ಹಾಗೂ ಪೆದೆ ಪಿ ಬಿ ಬಿರಾದಾರ, ಎಸ್ ಎಂ ಹುಣಶ್ಯಾಳ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

