ಇಂಡಿ: ವಿದ್ಯಾರ್ಥಿಗಳು ಆದರ್ಶ ನಾಯಕತ್ವದ ಗುಣಗಳನ್ನು ಬೆಳಸಿಕೊಳ್ಳಬೇಕು ಎಂದು ಬಿ.ಡಿ. ಇ ಕಾಲೇಜಿನ ಪ್ರೊ.ರಘೋತ್ತಮ ಅರ್ಜುಣಗಿ ಹೇಳಿದರು.
ಅವರು ಇಂಡಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ವಾಣಿಜ್ಯಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ಅಡಿಯಲ್ಲಿ ಹಮ್ಮಿಕೊಂಡಿದ್ದ ನಾಯಕತ್ವದ ಗುಣಗಳು ಎಂಬ ವಿಶೇಷ ಉಪನ್ಯಾಸ ʼ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಆರ್.ಎಚ್.ರಮೇಶ ಮಾತನಾಡಿ ಭವಿಷ್ಯದ ಭಾರತಕ್ಕೆ ಉತ್ತಮ ನಾಯಕತ್ವದ ಗುಣಗಳನ್ನು ಯುವಜನತೆ ಅಳವಡಿಸಿಕಳ್ಳಬೇಕು ಎಂದರು.
ಐಕ್ಯೂಎಸಿ ಸಂಯೋಜಕರಾದ ಡಾ.ಶೀರುನುಸುಲ್ತಾನ ಇನಾಂದಾರ, ಪ್ರೊ.ತಿಪ್ಪಣ್ಣ ವಗ್ದಾಳ,ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ರಾಜಲಕ್ಷ್ಮಿ ಆರ್, ಉಪನ್ಯಾಸಕರಾದ ಪ್ರೊ.ಪಿಎಸ್.ದೇವರ, ಎಂ.ಎಚ್.ಮೋಮಿನ್, ಪೂಜಾ ಡಿ.ಆರ್, ಭಾರತಿ ಕನ್ನೊಳ್ಳಿಮೊದಲಾದವರು ವೇದಿಕೆಯಲ್ಲಿದ್ದರು.
ಕು.ರಾಹುಲ್ಭಾಸಗಿ ಸ್ವಾಗತಿಸಿದರು. ಕು.ರಮೇಶ ಮಾವನಿಹಳ್ಳಿ ನಿರೂಪಿಸಿದರು. ಕು.ಸ್ವಾಗತ ಸಾತಲಗಾಂವ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

