Author: editor.udayarashmi@gmail.com

ಆಲಮೇಲ: ಜಿಲ್ಲೆಯಲ್ಲಿ ಅಹಿಂದ ಚಳುವಳಿಯನ್ನು ಜೀವಂತವಾಗಿಟ್ಟು ಕಾಂಗ್ರೆಸ್ಪಕ್ಷಕ್ಕಾಗಿ ನಿಷ್ಠೆಯಿಂದ, ಪ್ರಾಮಾಣಿಕವಾಗಿ ಜಿಲ್ಲೆಯಾದ್ಯಂತ ಅಹಿಂದ ವರ್ಗಗಳಧ್ವನಿಯಾಗಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಕೆಪಿಸಿಸಿ ವಕ್ತಾರಎಸ್.ಎಂ.ಪಾಟೀಲ ಗಣಿಹಾರ ಅವರಿಗೆ ವಿಧಾನ ಪರಿಷತ್ಪ್ರವೇಶಿಸಲು ಅವಕಾಶ ಕಲ್ಪಿಸಬೇಕೆಂದು ಆಲಮೇಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಬಶೀರ್ ತಾಂಬೋಳಿ ಒತ್ತಾಯಿಸಿದ್ದಾರೆ.ಜಿಲ್ಲೆಯಲ್ಲಿ ಅಹಿಂದ ಸಮುದಾಯ ರಾಜಕೀಯದಿಂದ ವಂಚಿತವಾಗಿದ್ದು,ಅಹಿಂದರ ಶಕ್ತಿಯನ್ನುದುರ್ಬಲಗೊಳಿಸಲು ಹಲವಾರು ಕುತಂತ್ರಗಳು ನಡೆಯುತ್ತಿವೆ. ಕಾರಣ ಅಹಿಂದ ಸಮುದಾಯಗಳಿಗೆ ನ್ಯಾಯ ಒದಗಿಸಲು, ಅಹಿಂದ ಮತಗಳಿಂದಅಧಿಕಾರಕ್ಕೆ ಬಂದ ಸರಕಾರ ಪ್ರಾಮಾಣಿಕವಾಗಿ ದುಡಿಯುವ ಅಹಿಂದ ನಾಯಕರಿಗೆಅಧಿಕಾರ ನೀಡುವ ವ್ಯವಸ್ಥೆ ಮಾಡಬೇಕು. ಅಲ್ಲದೇ ಬಿಜೆಪಿಯ ಟೀಕೆಗಳಿಗೆ ಸಮರ್ಥವಾಗಿ ಉತ್ತರಿಸುವ ನಾಯಕನನ್ನು ಅಹಿಂದರ ಧ್ವನಿಯಾಗಿಗುರುತಿಸಿದಂತಾಗುತ್ತದೆ ಎಂದು ತಾಂಬೋಳೆ ಹೇಳಿದ್ದಾರೆ.

Read More

ವಿಜಯಪುರ ಜಿಲ್ಲಾ KDP ಸದಸ್ಯ ನೂರಹಮ್ಮದ ಅತ್ತಾರ ಆಗ್ರಹ ವಿಜಯಪುರ: ಕಾಂಗ್ರೆಸ್ ಪಕ್ಷಕ್ಕಾಗಿ ನಿಷ್ಠೆಯಿಂದ, ಪ್ರಾಮಾಣಿಕವಾಗಿ ಜಿಲ್ಲೆಯ ಅಹಿಂದ ವರ್ಗಗಳ ಧ್ವನಿಯಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿರುಳು ಪ್ರಾಮಾಣಿಕ ಪಕ್ಷದ ಸೇವೆ ಸಲ್ಲಿಸುತ್ತಿರುವ ಹಿರಿಯ ಹೋರಾಟಗಾರ ಹಾಗೂ ಕೆಪಿಸಿಸಿ ವಕ್ತಾರರಾದ ಎಸ್.ಎಂ.ಪಾಟೀಲ್ (ಗಣಿಹಾರ) ರವರಿಗೆ ವಿಧಾನಪರಿಷತ್ ಪ್ರವೇಶಿಸಲು ಅವಕಾಶ ಕಲ್ಪಿಸಬೇಕೆಂದು ಸಿಂದಗಿ ಕಾಂಗ್ರೆಸ್‌ ಪಕ್ಷದ ಅಲ್ಪಸಂಖ್ಯಾತರ ಯುವ ನಾಯಕ ಹಾಗೂ ವಿಜಯಪುರ ಜಿಲ್ಲಾ KDP ಸದಸ್ಯ ನೂರಹಮ್ಮದ ಅತ್ತಾರ ರವರು ಒತ್ತಾಯಿಸಿದ್ದಾರೆ.ವಿಜಯಪುರ ಜಿಲ್ಲಾದ್ಯಾಂತ ಅಹಿಂದ ಸಮುದಾಯವು ರಾಜಕೀಯವಾಗಿ ಕುಂಟಿತಗೊಂಡಿದ್ದು ಅಹಿಂದ ಸಮುದಾಯದ ಶಕ್ತಿಯನ್ನು ಬಲಿಷ್ಠಗೊಳಿಸಲು ಅಹಿಂದ ಸಮುದಾಯಗಳಿಗೆ ನ್ಯಾಯ ಒದಗಿಸಿ ದಂತಾಗುತ್ತದೆ. ಅಹಿಂದ ಮತಗಳಿಂದ ಅಧಿಕಾರಕ್ಕೆ ಬಂದ ಸರ್ಕಾರ ಪ್ರಾಮಾಣಿಕವಾಗಿ ದುಡಿಯುವ ಅಹಿಂದ ನಾಯಕರನ್ನು ವಿಧಾನಪರಿಷತ್ತಿಗೆ ಅವಕಾಶ ನೀಡಬೇಕು. ಅಂತಹ ಅಹಿಂದ ನಾಯಕರನ್ನು ಅಧಿಕಾರ ನೀಡುವ ವ್ಯವಸ್ಥೆ ಮಾಡಬೇಕು. ಅಲ್ಲದೆ ಬಿಜೆಪಿಯ ಟೀಕೆಗಳಿಗೆ ಸಮರ್ಥವಾಗಿ ಉತ್ತರಿಸುವ ನಾಯಕನನ್ನು ಅಹಿಂದ ಧ್ವನಿಯಾಗಿ ಗುರುತಿಸಿದಂತಾಗುತ್ತದೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು…

Read More

ವಿಜಯಪುರ: ಮತ ಎಣಿಕೆಗೆ ನಿಗದಿಪಡಿಸಿರುವ ಸೂಚನೆಗಳ ಕ್ರಮಬದ್ಧತೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗದಂತೆ ನಿಯಮಗಳನ್ನು ಪರಿಪಾಲಿಸಿ ಮತ ಎಣಿಕೆ ಕಾರ್ಯವನ್ನು ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.ಸೋಮವಾರ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಲೋಕಸಭಾ ಚುನಾವಣೆ–2024ರ ಮತ ಎಣಿಕೆ ಪೂರ್ವ ಸಿದ್ಧತೆ ತರಬೇತಿಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮತ ಎಣಿಕೆಗೆ ನಿಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗೆ ಸಲಹೆ ಸೂಚನೆಗಳನ್ನು ನೀಡಿದರು.ಮತ ಎಣಿಕೆ ಪ್ರಕ್ರೀಯೆ ಜೂನ್ 4ರಂದು ವಿಜಯಪುರ ಸೈನಿಕ ಶಾಲೆಯಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಮತ ಎಣಿಕೆಗೆ ನಿಯೋಜನೆಗೊಂದಿರುವ ಅಧಿಕಾರಿ ಮತ್ತು ಸಿಬ್ಬಂದಿ ಉತ್ತಮ ರೀತಿಯಲ್ಲಿ ತರಬೇತಿಯನ್ನು ಪಡೆದುಕೊಂಡು ಮತ ಎಣಿಕೆ ಕಾರ್ಯದಲ್ಲಿ ಲೋಪದೋಷಗಳು ಆಗದಂತೆ ನೋಡಿಕೊಳ್ಳಿ ಎಂದರು.ಅಂದು ಬೆಳಗ್ಗೆ 7 ಗಂಟೆಯ ಒಳಗೆ ತಮಗೆ ನಿಗದಿ ಪಡಿಸಿದ ಮತ ಎಣಿಕೆ ಹಾಲ್‌ನಲ್ಲಿ ಹಾಜರಿರಬೇಕು. ಮತ ಎಣಿಕೆ ಹಾಲ್ ಒಳಗಡೆ ಮೊಬೈಲ್ ನ್ನು ನಿಷೇಧಿಸಲಾಗಿದೆ. ಮತ ಎಣಿಕೆ ಹಾಲ್ ಒಳಗಡೆ ಪೊಲೀಸ್, ಸೆಕ್ಯುರಿಟಿ ಸಿಬ್ಬಂದಿಗಳಿಗೆ…

Read More

ಸಂತೋಷ್ ರಾವ್ ಪೆರ್ಮುಡ, ಬೆಳ್ತಂಗಡಿ ಒಮ್ಮೆ ಎಲ್ಲರಿಗೂ ಪ್ರಿಯವಾದ ಹಾಲು ಭಗವಂತನನ್ನು ಕುರಿತು ತಪಸ್ಸು ಮಾಡಿತು. ಆಗ ದೇವರು ಪ್ರತ್ಯಕ್ಷನಾಗಿ ಏನು ನಿನ್ನ ಸಮಸ್ಯೆ ಎಂದು ಕೇಳುತ್ತಾರೆ. ಆಗ ಹಾಲು ‘ಓ ದೇವರೇ, ನನ್ನ ಹೆಸರು ಹಾಲು ನಾನು ಆಕಳು ಮತ್ತು ಎಮ್ಮೆಗಳ ಕೆಚ್ಚಲಿನಿಂದ ಬರುವಾಗ ಬಂದಾಗ ಶುದ್ಧವಾಗಿಯೇ ಇರುತ್ತೇನೆ. ಆದರೆ ಈ ಪಾಪಿ ಮನುಷ್ಯ ಮಾತ್ರ ನನಗೆ ಹುಳಿ ಹಿಂಡಿ ನನ್ನ ಮನಸ್ಸನ್ನೇ ಕೆಡಿಸಿಬಿಡುತ್ತಾನೆ. ನನಗೆ ಸದಾ ಕಾಲ ಹಾಲಾಗಿಯೇ ಇರುವಂತೆ ವರವನ್ನು ಕೊಡು’ ಎಂದು ಬೇಡಿಕೊಂಡಿತು.ಹಾಲಿನ ಈ ಮಾತನ್ನು ಕೇಳಿದ ದೇವರು ನಕ್ಕು, ‘ಎಲೈ ಹಾಲೇ ಇಲ್ಲಿ ಕೇಳು, ನೀನು ಸದಾ ಹಾಲಾಗಿಯೇ ಇರಬೇಕೆನ್ನುವ ಬದುಕಿಗೆ ಆಸೆ ಪಡುವ ಮೊದಲು ಈ ಮಾತನ್ನು ಕೇಳು. ನೀನು ಕೇವಲ ಹಾಲಾಗಿ ಅಷ್ಟೇ ಇದ್ದರೆ ಕೇವಲ ಒಂದು ದಿನ ಮಾತ್ರ ಬದುಕುತ್ತೀಯಾ. ಹಾಲಿಗೆ ಹುಳಿಯಿಂದ ಹೆಪ್ಪನ್ನು ಹಾಕಿದರೆ ನೀನು ಎರಡು ದಿನಗಳ ಕಾಲ ಬದುಕಿರುತ್ತೀಯಾ. ನಿನ್ನನ್ನು ಮೊಸರಾಗಿ ಕಡೆದರೆ ಹುಳಿ ಹುಳಿಯಾಗಿ…

Read More

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಘಟನೆ ಒಂದು.. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಚಾಕ್ಲೇಟ್ ಕೊಡುತ್ತೇನೆ ಎಂದು ಪಕ್ಕದ ಮನೆಯ ಪುಟ್ಟ ಹುಡುಗಿಗೆ ಆಸೆ ತೋರಿಸಿ ಪೈಶಾಚಿಕ ಕೃತ್ಯ ಎಸಗಿದ ಯುವಕ.ಘಟನೆ ಎರಡು.. ಹೊರಗೆ ಸುತ್ತಾಡಿಸಿಕೊಂಡು ಬರುತ್ತೇನೆ ಎಂದು ಸಂಬಂಧಿಕರ ಅಬೋಧ ಮಕ್ಕಳ ಮೇಲೆ ಅಮಾನುಷ ಅತ್ಯಾಚಾರ.ಘಟನೆ ಮೂರು.. ಪಾಠ ಹೇಳುವ ನೆಪದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಘಟನೆ ನಾಲ್ಕು…. ಗಂಡು ಹುಡುಗ ಎಂದು ಗೊತ್ತಿದ್ದು ಕೂಡ ಆತನನ್ನು ತಮ್ಮ ಕಾಮಪಿಪಾಸೆಗೆ ಬಳಸಿಕೊಂಡ ವಯಸ್ಕ.ಹೀಗೆ ಹತ್ತು ಹಲವು ದುರ್ಘಟನೆಗಳನ್ನು ಪ್ರಪಂಚದ ಒಂದಲ್ಲ ಒಂದು ಭಾಗದಲ್ಲಿ ನಡೆಯುವುದನ್ನು ಕಾಣುತ್ತೇವೆ.ನಮ್ಮ ಮಕ್ಕಳನ್ನು ಅವರು ತುಂಬಾ ಪ್ರೀತಿಸ್ತಾರೆ ಎಂಬ ಭಾವದಿಂದ ಪರರನ್ನು ಸಂಪೂರ್ಣವಾಗಿ ನಂಬುವ ಎಷ್ಟೋ ಜನ ಪಾಲಕರು ಏನಾದರೂ ತಪ್ಪು ನಡೆದಾಗ ಅದನ್ನು ಹೇಳಲಾಗದೆ ತಮ್ಮ ಮಕ್ಕಳು ಒದ್ದಾಡಿ ಪದಗಳಿಗಾಗಿ ತಡಕಾಡಿ ಕೊನೆಗೆ ಹೇಳಿದಾಗ ತಮ್ಮ ಮಕ್ಕಳಿಗೆ ಹೇಳುವುದು ಶ್…! ಯಾರಿಗೂ ಹೇಳಬೇಡ!! ಎಂದು.ಅದೆಷ್ಟು ಬಾರಿ ತಾಯಂದಿರು ತಮ್ಮ ಮಕ್ಕಳಿಗೆ ಈ…

Read More

-ಪ್ರೊ.ಧರ್ಮರಾಜ ಕುಂಬಾರ ಉಪನ್ಯಾಸಕರು ಮತ್ತು ಉದ್ಯೋಗ ತರಬೇತಿ ಅಧಿಕಾರಿ ಒಬ್ಬ ನಾಯಕನಾಗಲಿ, ವಿದ್ಯಾರ್ಥಿಯಾಗಲಿ, ಅಥವಾ ಒಂದು ಸಂಸ್ಥೆಯ ಚುಕ್ಕಾಣಿ ಹಿಡಿದಂತ ನಾಯಕನೇ ಆಗಲಿ ಯಾವತ್ತೂ ಚೌಕಟ್ಟನ್ನು ಮೀರಿ ಯೋಚಿಸುವ ಶಕ್ತಿ ಹೊಂದಿರಬೇಕು ಅದನ್ನೇ ನಾವು Thinking out of box ಎನ್ನುತ್ತೇವೆ.ಏಕೆಂದರೆ ಚೌಕಟ್ಟಿನ ಹೊರಗೆ ಯೋಚಿಸುವುದು ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ನಮ್ಮೊಳಗೆ ನಮ್ಮ ಅರಿವಿಲ್ಲದಂತೆಯೇ ಬೆಳೆಯಲು ನಮಗೆ ಸಹಾಯ ಮಾಡುತ್ತದೆ, ಇದು ಸಾಮಾನ್ಯವಾಗಿ ಹೊಸ ಮತ್ತು ಸುಧಾರಿತ ಯೋಚನೆಗಳೊಂದಿಗೆ ಅತ್ಯುತ್ತಮ ಸೇವೆ ನೀಡಲು ಕಾರಣವಾಗುತ್ತದೆ. ಅದಲ್ಲದೆ ಸಮಸ್ಯೆಗಳನ್ನು ಅತ್ಯುತ್ತಮ ರೀತಿಯಲ್ಲಿ ಪರಿಹರಿಸುವ ಮೂಲಕ ಸಂವಹನ ಕೌಶಲ್ಯವನ್ನು ಕೂಡ ಪರಿಣಾಮಕಾರಿಯಾಗಿಸುತ್ತದೆ.Thinking out of Box ಎನ್ನುವುದು ಸುಲಭವಲ್ಲ ಏಕೆಂದರೆ ನಾವು ನಮ್ಮ comfort zone ಇಂದ ಮೊದಲು ಹೊರಗೆ ಬರಬೇಕು. ಚೌಕಟ್ಟಿನೊಳಗೆ ಎಲ್ಲರೂ ಆರಾಮವಾಗಿ ಇರುತ್ತಾರೆ. ಒಬ್ಬ ಮನುಷ್ಯ ಚೌಕಟ್ಟನ್ನು ಮೀರಿ ಹೊರಗೆ ಬಂದಾಗ ಸಮಸ್ಯೆಗಳಿಗೆ ವಿಭಿನ್ನ ರೀತಿಯಲ್ಲಿ ಪರಿಹಾರ ಕೊಂಡುಕೊಳ್ಳುತ್ತಾನೆ. ಅದೇ ರೀತಿ ಒಬ್ಬ ನಾಯಕ ಯಶಸ್ವಿ ನಾಯಕನಾಗುತ್ತಾನೆ. ಹೆಚ್ಚಿನ ಜನರು…

Read More

ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಟೀಕೆ ಬೆಂಗಳೂರು: ಕೇಂದ್ರ ಸರಕಾರವು ಸಾವಿರಾರು ಕೋಟಿ ರೂ. ಬರಗಾಲದ ಪರಿಹಾರಧನ ಕೊಟ್ಟಿದೆ. ಆದರೂ, ದೇವರು ಕೊಟ್ಟರೂ ಕೂಡ ಪೂಜಾರಿ ಕೊಡಲು ತಯಾರಿಲ್ಲ ಎಂಬಂತೆ ಕೇಂದ್ರ ಸರಕಾರ, ನರೇಂದ್ರ ಮೋದಿಯವರು ಬರಗಾಲದ ಮೊತ್ತವನ್ನು ಕೊಟ್ಟಿದ್ದರೂ ಅದನ್ನು ಸುಮಾರು 2 ಲಕ್ಷಕ್ಕಿಂತ ಹೆಚ್ಚು ರೈತರ ಖಾತೆಗಳಿಗೆ ಇವತ್ತಿಗೂ ನೀಡಿಲ್ಲ ಎಂದು ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅವರು ಟೀಕಿಸಿದರು.ಈ ಕುರಿತು ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರವು ರೈತರ ಪಾಲಿಗೆ ಸತ್ತು ಹೋಗಿದೆ. ಕಳೆದ ಸುಮಾರು ಒಂದು ವರ್ಷದಿಂದ ಬರಗಾಲದಿಂದ ತತ್ತರಿಸಿ ಹೋದ ರೈತರಿಗೆ ಸಹಾಯ ಮಾಡುತ್ತಿಲ್ಲ, ಇದು ರೈತರ ಪಾಲಿಗೆ ಸತ್ತು ಹೋದ ಸರಕಾರದಂತಿದೆ ಎಂದು ಹೇಳಿದರು.ಬರಗಾಲದಿಂದ ಬೆಂದಿರುವ ರೈತರಿಗೆ ಅತ್ಯಂತ ಕಡಿಮೆ ದರದಲ್ಲಿ ಬಿತ್ತನೆ ಬೀಜವನ್ನು ವಿತರಿಸುವ ಕೆಲಸವನ್ನು ಈ ಸರಕಾರ ಮಾಡಬೇಕಿತ್ತು. ಆದರೆ, ಕಾಂಗ್ರೆಸ್ ಸರಕಾರವು ಬಿತ್ತನೆ ಬೀಜಕ್ಕೂ…

Read More

ವಿಜಯಪುರ: ನಗರದ ಬಳಿಯ ಭೂತನಾಳ ತಾಂಡಾದ ಸುನೀಲ ತಂ.ರೂಪಸಿಂಗ ರಾಠೋಡ ಇವರು ಜೂ. ೨೧ರಿಂದ ೨೭ ರವರೆಗೆ ನಡೆಯಲಿರುವ Tenpin Para Bowling ಅಂತರಾಷ್ಟ್ರೀಯ Comodiya Open Para Bowling Championship೨೦೨೪ ರಲ್ಲಿ ನಡೆಯಲಿರುವ ಕ್ರೀಡೆಗೆ ಆಯ್ಕೆಯಾಗಿ ತೆರಳುತ್ತಿದ್ದು, ಇದಕ್ಕಿಂತ ಮುಂಚೆ ರಜ್ಯ, ರಾಷ್ಟ್ರೀಯ ಮತ್ತು ೩ ಬಾರಿ ಅಂತರಾಷ್ಟ್ರೀಯ Para Olympic Commitee of India ದಿಂದ ಆಯ್ಕೆಯಾಗಿ ದುಬೈ ಸಾರಜಾತದಲ್ಲಿ ನಡೆದ ಗೆ ಆWorld wasಯ್ಕೆಯಾಗಿ ೪ನೇ ಸ್ಥಾನವನ್ನು ಪಡೆದಿರುತ್ತಾರೆ. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ೪ನೇ ಪ್ಯಾರಾ ಟೆನಪಿನ್ ನ್ಯಾಷನಲ್ ಚಾಂಪಿಯನಶೀಫ್‌ನಲ್ಲಿ ತೃತೀಯ ಸ್ಥಾನ ಪಡೆದು, ಅಂತರಾಷ್ಟ್ರೀಯ ಕಾಂಬೋಡಿಯಾ ಅಂತರಾಷ್ಟ್ರೀಯ ಕ್ರೀಡೆಗೆ ಆಯ್ಕೆಯಾಗಿ ತೆರಳುತ್ತಿದ್ದಾರೆ. ಅಲ್ಲದೇ ವಿಜಯಪುರ ನಗರ, ವಿಜಯಪುರ ಜಿಲ್ಲೆ ಕೀತಿರ್ಯನ್ನು ಹೆಚ್ಚಿಸಿರುತ್ತಾರೆ.ಅಲ್ಲದೇ ಇವರು ಕ್ರೀಡೆಯಲ್ಲೂ ಭಾಗವಹಿಸಲು ಸಹಾಯ ಮಾಡಿದ ಶ್ರೀ ಸತ್ಯನಾರಾಯಣ ಸರ್ ಪ್ಯಾರಾ ಓಲಪಿಂಕ ಕಮೀಟಿ ಚೇರಮನ್ ಮತ್ತು ಸುರರ್ಜಿತಸಿಂಗ್ ಏಸಿಯನ್ ಮೆಡಲಿಸ್ಟ್ ಹಾಗೂ ಓಲಪಿಂಕ ಪದಕ ವಿಜೇತ ಎಚ್.ಎನ್.ಗಿರೀಶ ಹಾಗೂ ಕಾಮನವೆಲ್ಲ ಮೆಡಲಿಸ್ಟ್…

Read More

ಸಿಂದಗಿ: ನಿಮ್ಮೊಂದಿಗೆ ನಾನಿದ್ದೇನೆ. ನಮ್ಮ ಸರ್ಕಾರವಿದೆ ನೀವು ಯಾವುದೇ ರೀತಿಯ ಭಯಪಡುವ ಅವಶ್ಯಕತೆ ಇಲ್ಲ. ಧೈರ್ಯವಾಗಿರಿ ಎಂದು ಶಾಸಕ ಅಶೋಕ್ ಮನಗೂಳಿ ಸಾಂತ್ವನ ಹೇಳಿದರು.ಇತ್ತೀಚಿಗೆ ಸಿಂದಗಿ ಮತಕ್ಷೇತ್ರದ ಕಕ್ಕಳಮೇಲಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಗುರುಶಾಂತಯ್ಯ ಸಿದ್ದಯ್ಯ ನಾಗನಮಠ ಅವರ ಮನೆಗೆ ಭೇಟಿ ಮನಗೂಳಿ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.ಇದೇ ಸಂದರ್ಭದಲ್ಲಿ ಪ್ರಭುಗೌಡ ಬಿರಾದಾರ, ಶಂಕರ ಮಾವುರ, ಶಫಿಕ ಮುಜಾವರ, ಯಲ್ಲಾಲಿಂಗ ಅಗಸರ, ಶಂಕರಲಿಂಗ ಪತ್ತಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read More