ವಿಜಯಪುರ: ಪ್ರತಿ ತಿಂಗಳ ಒಂದನೇ ಸೋಮವಾರದಂದು ವಿಜಯಪುರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವತಿಯಿಂದ ಸಾರ್ವಜನಿಕರು/ಪ್ರಯಾಣಿಕರಿಂದ ಕುಂದುಕೊರತೆಗಳನ್ನು ಆಲಿಸಿ, ಪರಿಹರಿಸುವ ಸದುದ್ದೇಶದಿಂದ ಪೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅದರಂತೆ ಈ ತಿಂಗಳ ಮೊದಲನೇ ಸೋಮವಾರ ಆಗಸ್ಟ್ ೫ರ ಸೋಮವಾರದಂದು ಮಧ್ಯಾಹ್ನ ೩-೩೦ರಿಂದ ೫-೩೦ ಗಂಟೆಯವರೆಗೆ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಪುರ ದೂ: ೭೭೬೦೯೯೨೨೫೦, ವಿಭಾಗೀಯ ಸಾರಿಗೆ ಅಧಿಕಾರಿ ವಿಜಯಪುರ ದೂ: ೭೭೬೦೯೯೨೨೫೨ ಹಾಗೂ ವಿಭಾಗದ ಸಹಾಯವಾಣಿ ಸಂಖ್ಯೆ : ೬೩೬೬೪೨೩೮೮೭ ಸಂಖ್ಯೆಗೆ ಸಾರ್ವಜನಿಕರು-ಪ್ರಯಾಣಿಕರು ಕರೆ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರಿಗೆ ಸೌಕರ್ಯ ಸೇರಿದಂತೆ ಇತರೆ ಕುಂದು ಕೊರತೆಗಳನ್ನು ಸಲ್ಲಿಸಬಹುದಾಗಿದೆ ಎಂದು ವಿಜಯಪುರ ಕಕರಸಾ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
