ವಿಜಯಪುರ: ವೀರಲೋಕ ಪ್ರಕಾಶನ ಬೆಂಗಳೂರು, ಉತ್ತರ ಪರ್ವ ಎಂಬ ವಿನೂತನ ಕಥಾ ಸುಗ್ಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ನೂರಕ್ಕೂ ಹೆಚ್ಚು ಕೃತಿಗಳು ಆಯ್ಕೆಗಾಗಿ ಬಂದಿದ್ದವು. ಸಾಹಿತಿಗಳಾದ ರಾ.ಗಂ ಅವರ ಸಂಪಾದಕತ್ವದಲ್ಲಿ ಮೂರು ಹಂತದ ಆಯ್ಕೆಯಲ್ಲಿ ಹತ್ತು ವಿಭಿನ್ನ ಕೃತಿಗಳನ್ನು ಆಯ್ಕೆ ಮಾಡಲಾಯಿತು.
ಶೇಕ್ಷಾವಲಿ ಮಣಿಗಾರ – ಆ ವದನ
ಮರ್ತುಜಾಬೇಗಂ ಕೊಡಗಲಿ – ಪರಸ್ಪರ ಮತ್ತಿತರ ಕೃತಿಗಳು
ಡಾ.ಸದಾಶಿವ ದೊಡಮನಿ – ಇರುಳ ಬಾಗಿಲಿಗೆ ಕಣ್ಣ ದೀಪ
ರವೀಂದ್ರ ಮುದ್ದಿ – ವರದಾ ತೀರದ ಕಥೆಗಳು
ಸಿ.ವಿ.ವೀರುಪಾಕ್ಷ – ಖದೀಜಾ
ಶ್ರೀಧರ ಗಸ್ತಿ – ಚಂದ್ರಾ ಲೇಔಟ್
ಪ್ರಕಾಶ ಗಿರಿಮಲ್ಲನವರ – ಜನನಾಯಕ
ಬಿಜೆ ಪಾರ್ವತಿ ವಿ. ಸೋನಾರೆ – ಓಡಿ ಹೋದಾಕಿ
ಕವಿತಾ ಹೆಗಡೆ ಅಭಯಂ – ಇತ್ತ ಹಾಯಲಿ ಚಿತ್ತ
ನವ್ಯ ಆರ್ ಕತ್ತಿ – ಮಾಯಾ ಗುಹೆ
ಆಯ್ಕೆಯಾದ ಈ ಎಲ್ಲ ಲೇಖಕರ ಕೃತಿಗಳು ಭಾನುವಾರ ಬೆಂಗಳೂರಿನ ಚಾಮರಾಜಪೇಟೆಯ ಸಾಹಿತ್ಯ ಪರಿಷತ್ತು ಸಭಾಭವನದಲ್ಲಿ ಲೋಕಾರ್ಪಣೆ ಆಗಲಿವೆ. ಕೃತಿಕಾರರಿಗೆ ರಾಯಧನ ಮತ್ತು ಪುಸ್ತಕಗಳನ್ನು ನೀಡಿ ಗೌರವಿಸಲಾಗುವುದು. ಅತಿಥಿಗಳಾಗಿ ಖ್ಯಾತ ಚಲನ ಚಿತ್ರ ನಿರ್ದೇಶಕ ಬಿ.ಸುರೇಶ, ರಾ.ಗಂ, ಕರ್ಕಿ ಕೃಷ್ಣಮೂರ್ತಿ, ಮಧು ವೈ.ಎನ್, ಪ್ರಕಾಶಕ ವೀರಕಪುತ್ರ ಶ್ರೀನಿವಾಸ, ಇರಲಿದ್ದಾರೆ ಎಂದು ವ್ಯವಸ್ಥಾಪಕ ಅನಂತ ಕುಣಿಗಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಆಲಮೇಲದ ಕು.ನವ್ಯ ಆರ್. ಕತ್ತಿ ಅವರ ಮಕ್ಕಳ ಕಥಾ ಸಂಕಲನ ಮಾಯಾ ಗುಹೆ ಕೂಡಾ ಬಿಡುಗಡೆಯಾಗಲಿರುವುದು ವಿಶೇಷ.
Subscribe to Updates
Get the latest creative news from FooBar about art, design and business.
Related Posts
Add A Comment

