Author: editor.udayarashmi@gmail.com

ವಿಜಯಪುರ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆ.೧೯ ರಂದು ಶ್ರೀ ನುಲಿಯ ಚಂದಯ್ಯ ಜಯಂತಿ, ಆ.೨೦ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಮತ್ತು ಆ.೨೬ ರಂದು ಶ್ರೀ ಕೃಷ್ಣ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಅಪರ ಜಿಲ್ಲಾಧಿಕಾರಿಗಳಾದ ಸೋಮಲಿಂಗ ಗೆಣ್ಣೂರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯಕ್ಕೆ ಕೈಗೊಳ್ಳಲಾಯಿತು.ಆಗಸ್ಟ್ ೧೯ ರಂದು ನುಲಿಯ ಚಂದಯ್ಯ ಜಯಂತಿ ಆಚರಣೆ ಅಂಗವಾಗಿ ಅಂದು ಬೆಳಿಗ್ಗೆ ೯ ಗಂಟೆಗೆ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರದವರೆಗೆ ಶ್ರೀ ನುಲಿಯ ಚಂದಯ್ಯ ಭಾವಚಿತ್ರ ಮೆರವಣಿಗೆ ಹಾಗೂ ೧೦-೩೦ಕ್ಕೆ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಆ.೨೦ರಂದು ಸಂಜೆ ೪ ಗಂಟೆಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಬ್ರಹ್ಮಶ್ರೀ ನಾರಾಯಣಗುರು ಭಾವಚಿತ್ರ ಮೆರವಣಿಗೆ ಹಾಗೂ ಸಂಜೆ ೫ ಗಂಟೆಗೆ ಕಂದಗಲ್ ಶ್ರೀ ಹನುಮಂತರಾಯ ರಂಗ ಮಂದಿರದಲ್ಲಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲು…

Read More

ಮಡಿಕೇಶ್ವರಕ್ಕೆ ಭೇಟಿ ನೀಡಿದ ಲೋಕಾ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅಭಿಮತ ಮುದ್ದೇಬಿಹಾಳ: ಸರ್ಕಾರಿ ನೌಕರರಿಗೆ ಸಾರ್ವಜನಿಕರ ತೆರಿಗೆ ಹಣದಿಂದ ವೇತನ ಪಾವತಿಯಾಗುತ್ತದೆ. ಪ್ರತಿಯೊಬ್ಬ ಸರ್ಕಾರಿ ನೌಕರನೂ ಸಾರ್ವಜನಿಕರಿಗೆ ಸರಿಯಾದ ಸೇವೆ ನೀಡಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲರು ಹೇಳಿದರು.ತಾಲೂಕಿನ ಮಡಿಕೇಶ್ವರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.ಪ್ರತಿಯೊಬ್ಬ ಸರ್ಕಾರಿ ನೌಕರನ ವರ್ತನೆ ಸರಿಯಾರಬೇಕು. ತಮ್ಮ ಕರ್ತವ್ಯವನ್ನು ನಿಗಧಿತ ಅವಧಿಯಲ್ಲಿ ಮಾಡಬೇಕು. ವಿನಾಕಾರಣ ಸಾರ್ವಜನಿಕರನ್ನು ಅಲೆದಾಡಿಸಬಾರದು. ಸೇವೆ ನೀಡಲು ಯಾರೊಬ್ಬರ ಬಳಿಯೂ ಹಣ ನೀಡುವಂತೆ ಒತ್ತಾಯಿಸಬಾರದು. ಸರ್ಕಾರಿ ನೌಕರರು ತಮ್ಮ ಸೇವೆಗಾಗಿ ಹಣ ನೀಡುವಂತೆ ಒತ್ತಾಯಿಸಿದಲ್ಲಿ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡುವಂತೆ ತಿಳಿಸಿದರು.ಆರೋಗ್ಯ ಕೇಂದ್ರದ ಸಂಗ್ರಹಣಾ ಕೊಠಡಿ, ಪ್ರಯೋಗಾಲಯ, ವಾರ್ಡ, ಸಿಬ್ಬಂದಿಗಳ ದಿನಚರಿ ಪುಸ್ತಕ, ಔಷಧಿಗಳನ್ನು ಖುದ್ದು ತಾವೇ ಪರಿಶೀಲಿಸಿದ ಲೋಕಾಯುಕ್ತರು ಸಾರ್ವಜನಿಕರಿಗೆ ಸೇವೆ ನೀಡುವ ಅವರ ಜವಾಬ್ದಾರಿಯ ಬಗ್ಗೆ ತಿಳಿಸಿದರು.ಈ ವೇಳೆ ಲೋಕಾಯುಕ್ತ ಅಧೀಕ್ಷಕ ಟಿ.ಮಲ್ಲೇಶ, ಉಪಾಧೀಕ್ಷಕ ಸುರೇಶ ರೆಡ್ಡಿ, ಇನ್ಸಪೆಕ್ಟರ್‌ಗಳಾದ ಆನಂದ ಡೋಣಿ ಮತ್ತು ಆನಂದ…

Read More

ಹೊನವಾಡ: ದೇಶದಲ್ಲಿ ಅನೇಕ ಶರಣರು, ಸಂತರು ಬಂದು ಹೋಗಿದ್ದಾರೆ ಅಂಥವರಲ್ಲಿ ಸಿದ್ಧಾರೂಢರು ಒಬ್ಬರಾಗಿದ್ದು, ಆಧ್ಯಾತ್ಮಿಕ ಭದ್ರ ಬುನಾದಿ ಹಾಕಿದ್ದಾರೆ. ಸಿದ್ಧಾರೂಢರು ಎಲ್ಲ ಕಡೆ ಕಾಲ್ನಡಿಗೆಯಲ್ಲಿ ಸಂಚರಿಸಿ ಜನರಿಗೆ ಆಧ್ಯಾತ್ಮಿಕ ಜ್ಞಾನ ನೀಡಿದರು ಎಂದು ಅಧ್ಯಕ್ಷತೆ ವಹಿಸಿ ನಿವೃತ್ತ ಶಿಕ್ಷಕ ಎಸ್ ಎನ್ ಮಂಗೊಂಡ ಹೇಳಿದರು.ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ಮಾತಾ ಬನಶಂಕರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತವಾಗಿ ಬನಶಂಕರಿದೇವಿ ಸೇವಾ ಕಮಿಟಿ ವತಿಯಿಂದ ಶ್ರೀ ಸಿದ್ದಾರೂಢರ ಕಥಾಮೃತ ಪ್ರವಚನ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶಂಕರ ತಿಪ್ಪಾರ ಶಾಸ್ತಿಗಳು ಮಾತನಾಡಿ, ಮನುಷ್ಯ ಸಂತರ ದರ್ಶನ ಪಡೆದು ಜೀವನ ಪಾವನ ಪಡೆಯಬೇಕು ಎಂದರು. ಐದು ವರ್ಷ ಇದ್ದಾಗಲೇ ಓಂಕಾರ ಪದವನ್ನು ಅರ್ಥವನ್ನು ಹೇಳುವ ಮೂಲಕ ಅವರು ಭಗವಂತನ ಸ್ವರೂಪ ಎಂಬುದನ್ನು ಸಾರಿದರು.ಈ ಕಾರ್ಯಕ್ರಮದಲ್ಲಿ ಕೃಷ್ಣಾಜಿ ಭೂಯಿನ ಗುಬ್ಬು ಹತ್ತಿಕಾಳ ನೀಲಯ್ಯ ಗೂಗವಾಡ ಶರಣು ಕುಂಬಾರ ಮತ್ತಿತರರು ಇದ್ದರು.ಶ್ರೀಕಾಂತ ಹಡಪದ ನಿರೂಪಿಸಿದರು, ಶ್ರಿಕಾಂತ ಕುಂಬಾರ ಸ್ವಾಗತಿಸಿದರು, ಚಂದ್ರಶೇಖರ ಕೊಣ್ಣೂರ ವಂದಿಸಿದರು.

Read More

ಕೊಲ್ಹಾರ: ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ಹಾಗೂ ತಾಲೂಕ ಘಟಕ ಕೊಲ್ಹಾರ ವತಿಯಿಂದ ಕೊಲ್ಹಾರ ಪಟ್ಟಣದ ಸಂಗಮೇಶ್ವರ ಪ ಪೂ ಮಹಾವಿದ್ಯಾಲಯದಲ್ಲಿ ಆ.೧೦ರಂದು “ವಿಶ್ಟ ಬುಡಕಟ್ಟು” ದಿನಾಚರಣೆ ಆಚರಿಸಲಾಗುವುದು.ಕ ಜಾ ಪ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಪ್ರಾಚಾರ್ಯ ಡಾ ಎ ಡಿ ಚವ್ಹಾಣ ಉದ್ಘಾಟಿಸುವರು, ಮೋಹನ ಕಟ್ಟಿಮನಿ ಉಪನ್ಯಾಸ ನೀಡುವರು, ಮುಖ್ಯ ಅತಿಥಿಗಳಾಗಿ ಚು ಸಾ ಪ ಜಿಲ್ಲಾಧ್ಯಕ್ಷ ಜಗದೀಶ ಸಾಲಳ್ಳಿ, ಪ್ರಾ ಶಾ ಶಿ ಸಂಘದ ತಾಲೂಕಾಧ್ಯಕ್ಷ ಸುರೇಶ ಬಿರಾದಾರ, ಕಾರ್ಯದರ್ಶಿ ಕೆ ಎಸ್ ಬಾಲಗೊಂಡ, ಹೇಮ ವೇಮ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ರುದ್ರಗಣಿ, ತಾಲೂಕಾಧ್ಯಕ್ಷ ಮಲ್ಲಪ್ಪ ಗಣಿ, ಕಾರ್ಯದರ್ಶಿ ಭೀಮಶಿ ಬೀಳಗಿ ಮತ್ತು ಮೌಲಾಸಾಹೇಬ ಜಹಾಗೀರದಾರ ಇರುವರು.ಬುಡಕಟ್ಟು ಜಾನಪದ ಕಲಾಪ್ರದರ್ಶನ ಮತ್ತು ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Read More

ವಿಜಯಪುರ: ಜಮಖಂಡಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿಯವರ ಸುಪುತ್ರ ಭರತ ಎಸ್. ಕುಲಕರ್ಣಿ ಅವರನ್ನು ಭಾರತೀಯ ಜನತಾ ಪಾರ್ಟಿ ವಿಜಯಪುರ ವಾಣಿಜ್ಯ ಮತ್ತು ವ್ಯಾಪಾರಿಗಳ ಪ್ರಕೋಷ್ಠ ಜಿಲ್ಲಾ ಸಂಚಾಲಕರನ್ನಾಗಿ ನೇಮಕ ಮಾಡಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಅವರು ನಿಯುಕ್ತಿ ಹೊರಡಿಸಿದ್ದಾರೆ.ಈ ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುತಾ, ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಸದೃಢಗೊಳಿಸುತ್ತಾ, ಮುಂಬರುವ ಎಲ್ಲ ರೀತಿಯ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತಾ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಸತತ ಶ್ರಮಿಸಲು ತಿಳಿಸಿದ್ದಾರೆ.

Read More

ವಿಜಯಪುರ: ನಗರದ ಬಿಡಿಇ ಸೂಸೈಟಿಯ ಸಭಾಭವನದಲ್ಲಿ ರವಿವಾರ ಆ.೧೧ ರ ಬೆಳಿಗ್ಗೆ ೧೦.೩೦ ಕ್ಕೆ “ಕುಮಾರವ್ಯಾಸ ಭಾರತ” ಗಮಕ ಕಾರ್ಯಕ್ರಮ ಜರುಗಲಿದೆ.ಗುರುಪೂರ್ಣಿಮಾ ಅಂಗವಾಗಿ “ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ವಿಜಯಪುರ ” ಈ ಕಾರ್ಯಕ್ರಮವನ್ನು ಆಯೋಜಿಸಿದ್ದು , ೯೩ ವರ್ಷ ಹಿರಿಯ ಸುಗಮಸಂಗೀತಗಾರರು ಹಾಗೂ ಗಮಕಿಗಳಾದ ಶ್ರೀಮತಿ ಶಾಂತಾಬಾಯಿ ಕೌತಾಳ ಮತ್ತು ವಿಜಯಪುರ ಗಮಕ ಪರಿಷತ್ತಿನ ಉಪಾಧ್ಯಕ್ಷರಾದ ಕಲ್ಯಾಣರಾವ್ ದೇಶಪಾಂಡೆ ಕುಮಾರವ್ಯಾಸ ಭಾರತ ಗಮಕ ಕಾರ್ಯಕ್ರವನ್ನು ನಡೆಸಿಕೊಡಲಿದ್ದಾರೆ. ಶರಣ ಸಾಹಿತ್ಯ ಪರಿಷತ್ ಯುವವೇದಿಕೆಯ ಅಧ್ಯಕ್ಷ ಅಮರೇಶ ಸಾಲಕ್ಕಿ ಉಪಸ್ಥಿತಿ ಇರಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ್ ಭಾರತೀಯ ಸಾಹಿತ್ಯ ಪರಿಷದ್ (ರಿ) ವಿಜಯಪುರ ಜಿಲ್ಲಾಧ್ಯಕ್ಷರಾದ ನಾರಾಯಣ ಬಾಬಾನಗರ ವಹಿಸಿಕೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – ೯೬೬೩೮೭೨೦೩೭ , ೯೭೩೯೦೬೧೩೩೯ ಕೋರಲಾಗಿದೆ.

Read More

ಚಡಚಣ: ತಾಲೂಕಿನ ಬಸವ ಸಮಿತಿ ಮತ್ತು ಮಾನವ ಬಂಧುತ್ವ ವೇದಿಕೆ ಅಡಿಯಲ್ಲಿ ೮೨೯ ಬಸವ ಪಂಚಮಿಯನ್ನು ಪಟ್ಟಣದ ಎಂಇಎಸ್ ಶಿಕ್ಷಣ ವಿದ್ಯಾಲಯದಲ್ಲಿ ನೂರಾರು ಮಕ್ಕಳಿಗೆ ಬದಾಮಿ ಹಾಲು ಕುಡಿಸುವ ಮೂಲಕ ಆಚರಣೆ ಮಾಡಲಾಯಿತು.ಈ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಬಸವಕಲ್ಯಾಣದ ಡಾ. ಬಸವಪ್ರಭು ಮಹಾಸ್ವಾಮಿಗಳು ಮಾತನಾಡಿ. ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ನಾಗರ ಪಂಚಮಿಯಂದು ಕಲ್ಲು ನಾಗರಕ್ಕೆ ಹಾಲನ್ನು ಎರೆಯುವ ಮೂಲಕ ಅಮೂಲ್ಯವಾದ ಹಾಲನ್ನು ವ್ಯರ್ಥಮಾಡುವ ಮಾನವನ ಮೂರ್ಖತನವನ್ನು ನಿವಾರಿಸಿ ಪಂಚಮಿ ಹಬ್ಬವನ್ನು ವೈಜ್ಞಾನಿಕ ಹಾಗೂ ವೈಚಾರಿಕ ಹಿನ್ನಲೆಯಲ್ಲಿ ಬಸವ ಪಂಚಮಿ ಎಂದು ಆಚರಿಸುವ ಅಭಿಯಾನ ಪ್ರತಿವರ್ಷ ಮಾಡುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪಟ್ಟಣದ ಬಸವ ಸಮಿತಿಯ ಮುರಗೇಶ ಸಿಂಪಿ, ಶಾಲೆಯ ಅಧ್ಯಕ್ಷರಾದ ಮೋಹನ ಚೋಳಕೆ, ಶಿಕ್ಷಕ ಸಿಬ್ಬಂದಿ ವರ್ಗ, ಸುರೇಶ ಭಂಡರಕವಟೆ, ಶ್ರೀಶೈಲ ಕೋಳಿ, ಸೈದು ಕೂಡವನ, ವಿಜಯ ವಾಘಮೋರೆ, ಜಕರಾಯ ಭಾಮನೆ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Read More

ಮುದ್ದೇಬಿಹಾಳ: ತಾಲೂಕಿನ ಗಡಿ ಭಾಗ ನಾಲತವಾಡ-ನಾರಾಯಣಪುರ ರಸ್ತೆಯಲ್ಲಿರುವ ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ಯುವಕನೋರ್ವ ಕೊಚ್ಚಿ ಹೋಗಿರುವ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರಾಯಚೂರು ಜಿಲ್ಲೆ ಲಿಂಗಸೂರಿನ ಯುವಕ ತೇಜಸ್ ಅಲ್ಕಾವಟಗಿ ಕಾಣೆಯಾದ ಯುವಕ. ಕಾಲುವೆ ಬಳಿಯ ಚೆಕ್ ಪೋಸ್ಟ್ ಹತ್ತಿರ ತನ್ನ ಬಟ್ಟೆಯನ್ನು ಬಿಚ್ಚಿ ಬೈಕ್ ಮೇಲಿಟ್ಟು ನೀರಿಗೆ ಇಳಿದಿದ್ದು ನೀರಿನ ರಬಸಕ್ಕೆ ಕೊಚ್ಚಿ ಹೋಗಿರಬಹುದು, ಇಲ್ಲವೋ ಈಜಿಕೊಂಡು ಹೋಗಿ ಮುಂದೆ ಎಲ್ಲಿಯೋ ಹೋಗಿ ಕಾಣೆಯಾಗಿರಬಹುದು ಎಂದು ಯುವಕನ ತಂದೆ ರಾಚನಗೌಡ ಅಲ್ಕಾವಟಿಗಿ ದೂರು ನೀಡಿದ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

Read More

ತಿಕೋಟಾ: ಕರ್ನಾಟಕ ಹೈಕೊರ್ಟಿನ ರೀಟ್ ಆದೇಶದನ್ವಯ ಅನುದಾನಿತ ಪ್ರೌಢ ಶಾಲೆಗಳಲ್ಲಿರುವ ಮೂಲಭೂತ ಸೌಕರ್ಯಗಳ ಪರಿಶೀಲನೆ ಮಾಡಲು ವಿಜಯಪುರ ಜಿಲ್ಲಾ ಕಾನೂನು ಸೇವೆಗಳ ಉಪಪ್ರಧಾನ ಕಾನೂನು ಅಭಿರಕ್ಷಕ ರೂಪಚಂದ ಧನವಂತ ಅವರ ತಂಡ ಅನುದಾನಿತ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ಪಡೆದುಕೊಂಡಿತು.ತಾಲ್ಲೂಕಿನ ಹೊನವಾಡ, ತಾಜಪುರ(ಎಚ್) ಗ್ರಾಮದ ಹಾಗೂ ತಿಕೋಟಾ ಪಟ್ಟಣದಲ್ಲಿರುವ ಎ.ಬಿ.ಜತ್ತಿ ಹಾಗೂ ಮಲ್ಲಿಕಸಂದಲ್ ಅನುದಾನಿತ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ ಮಾತನಾಡಿದ ಅವರು ಶಾಲಾ ವಿದ್ಯಾರ್ಥಿಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸುವುದು ಭೇಟಿಯ ಮಹತ್ವವಾಗಿದೆ. ಏಕೆಂದರೆ ಅವರು ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸುವವರಾಗಿದ್ದಾರೆ. ಮುಖ್ಯವಾಗಿ ಸ್ವಚ್ಛತೆಗೆ ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆ ಮತ್ತು ಮೋಜಿನ ಕಲಿಕೆಯ ಮೇಲೆ ಕೇಂದ್ರೀಕರಿಸಿದೆ ಎಂದು ಹೇಳಿ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಸಂಪೂರ್ಣವಾಗಿ ವೀಕ್ಷಣೆ ಮಾಡಿ ಇರುವ ಸ್ಥಿತಿಗತಿ ಅವಲೋಕನ ಮಾಡಿ ವರದಿ ಪಡೆದುಕೊಂಡರು.ಈ ಸಂದರ್ಭದಲ್ಲಿ ಜಾಲಗೇರಿ ಸಿಆರ್ಪಿ ಶರಣಬಸಪ್ಪ ರೆಡ್ಡಿ ತಿಕೋಟಾ ವಲಯ ಬಿಆರ್ಪಿ ಪಿ. ಡಿ. ಕಾಂಬಳೆ, ಶಿಕ್ಷಣ ಸಂಯೋಜಕ ಜಿ.ಟಿ. ಕಾಗವಾಡ, ಎಂ. ಎ.ಹಿರೇಮಠ,…

Read More

ಮುದ್ದೇಬಿಹಾಳ: ತಾಲೂಕಿನ ನಾಲತವಾಡದಲ್ಲಿ ಓಸಿ ಮಡಗಾ ಜೂಜಾಟವಾಡುತ್ತಿದ್ದ ಆರೋಪದ ಮೇಲೆ ಇಲ್ಲಿನ ಪಿಎಸ್‌ಐ ಸಂಜೀವ ತಿಪರೆಡ್ಡಿ ಪ್ರಕರಣ ದಾಖಲಿಸಿದ್ದಾರೆ.ನಾಲತವಾಡ ಪಟ್ಟಣದ ಮಲ್ಲಿಕಾರ್ಜುನ ಗುಬ್ಬಿ ಮೇಲೆ ಪ್ರಕರಣ ದಾಖಲಾಗಿದ್ದು ೧ರೂಪಾಯಿಗೆ ೮೦ ರೂಪಾಯಿ ಕೊಡುವ ಕರಾರಿನ ಮೇಲೆ ಜೂಜಾಟದಲ್ಲಿ ತೊಡಗಿದ್ದ ಎನ್ನಲಾಗಿದೆ. ಈತನಿಂದ ಓಸಿ ಚೀಟಿ, ಬಾಲ್ ಪೆನ್ನು ಮತ್ತು ಕೆಲ ಹಣವನ್ನು ವಶಕ್ಕೆ ಪಡೆಯಲಾಗಿದೆ.

Read More