ಹೊನವಾಡ: ದೇಶದಲ್ಲಿ ಅನೇಕ ಶರಣರು, ಸಂತರು ಬಂದು ಹೋಗಿದ್ದಾರೆ ಅಂಥವರಲ್ಲಿ ಸಿದ್ಧಾರೂಢರು ಒಬ್ಬರಾಗಿದ್ದು, ಆಧ್ಯಾತ್ಮಿಕ ಭದ್ರ ಬುನಾದಿ ಹಾಕಿದ್ದಾರೆ. ಸಿದ್ಧಾರೂಢರು ಎಲ್ಲ ಕಡೆ ಕಾಲ್ನಡಿಗೆಯಲ್ಲಿ ಸಂಚರಿಸಿ ಜನರಿಗೆ ಆಧ್ಯಾತ್ಮಿಕ ಜ್ಞಾನ ನೀಡಿದರು ಎಂದು ಅಧ್ಯಕ್ಷತೆ ವಹಿಸಿ ನಿವೃತ್ತ ಶಿಕ್ಷಕ ಎಸ್ ಎನ್ ಮಂಗೊಂಡ ಹೇಳಿದರು.
ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ಮಾತಾ ಬನಶಂಕರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತವಾಗಿ ಬನಶಂಕರಿದೇವಿ ಸೇವಾ ಕಮಿಟಿ ವತಿಯಿಂದ ಶ್ರೀ ಸಿದ್ದಾರೂಢರ ಕಥಾಮೃತ ಪ್ರವಚನ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಂಕರ ತಿಪ್ಪಾರ ಶಾಸ್ತಿಗಳು ಮಾತನಾಡಿ, ಮನುಷ್ಯ ಸಂತರ ದರ್ಶನ ಪಡೆದು ಜೀವನ ಪಾವನ ಪಡೆಯಬೇಕು ಎಂದರು. ಐದು ವರ್ಷ ಇದ್ದಾಗಲೇ ಓಂಕಾರ ಪದವನ್ನು ಅರ್ಥವನ್ನು ಹೇಳುವ ಮೂಲಕ ಅವರು ಭಗವಂತನ ಸ್ವರೂಪ ಎಂಬುದನ್ನು ಸಾರಿದರು.
ಈ ಕಾರ್ಯಕ್ರಮದಲ್ಲಿ ಕೃಷ್ಣಾಜಿ ಭೂಯಿನ ಗುಬ್ಬು ಹತ್ತಿಕಾಳ ನೀಲಯ್ಯ ಗೂಗವಾಡ ಶರಣು ಕುಂಬಾರ ಮತ್ತಿತರರು ಇದ್ದರು.
ಶ್ರೀಕಾಂತ ಹಡಪದ ನಿರೂಪಿಸಿದರು, ಶ್ರಿಕಾಂತ ಕುಂಬಾರ ಸ್ವಾಗತಿಸಿದರು, ಚಂದ್ರಶೇಖರ ಕೊಣ್ಣೂರ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

