ವಿಜಯಪುರ: ನಗರದ ಬಿಡಿಇ ಸೂಸೈಟಿಯ ಸಭಾಭವನದಲ್ಲಿ ರವಿವಾರ ಆ.೧೧ ರ ಬೆಳಿಗ್ಗೆ ೧೦.೩೦ ಕ್ಕೆ “ಕುಮಾರವ್ಯಾಸ ಭಾರತ” ಗಮಕ ಕಾರ್ಯಕ್ರಮ ಜರುಗಲಿದೆ.
ಗುರುಪೂರ್ಣಿಮಾ ಅಂಗವಾಗಿ “ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ವಿಜಯಪುರ ” ಈ ಕಾರ್ಯಕ್ರಮವನ್ನು ಆಯೋಜಿಸಿದ್ದು , ೯೩ ವರ್ಷ ಹಿರಿಯ ಸುಗಮಸಂಗೀತಗಾರರು ಹಾಗೂ ಗಮಕಿಗಳಾದ ಶ್ರೀಮತಿ ಶಾಂತಾಬಾಯಿ ಕೌತಾಳ ಮತ್ತು ವಿಜಯಪುರ ಗಮಕ ಪರಿಷತ್ತಿನ ಉಪಾಧ್ಯಕ್ಷರಾದ ಕಲ್ಯಾಣರಾವ್ ದೇಶಪಾಂಡೆ ಕುಮಾರವ್ಯಾಸ ಭಾರತ ಗಮಕ ಕಾರ್ಯಕ್ರವನ್ನು ನಡೆಸಿಕೊಡಲಿದ್ದಾರೆ. ಶರಣ ಸಾಹಿತ್ಯ ಪರಿಷತ್ ಯುವವೇದಿಕೆಯ ಅಧ್ಯಕ್ಷ ಅಮರೇಶ ಸಾಲಕ್ಕಿ ಉಪಸ್ಥಿತಿ ಇರಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ್ ಭಾರತೀಯ ಸಾಹಿತ್ಯ ಪರಿಷದ್ (ರಿ) ವಿಜಯಪುರ ಜಿಲ್ಲಾಧ್ಯಕ್ಷರಾದ ನಾರಾಯಣ ಬಾಬಾನಗರ ವಹಿಸಿಕೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – ೯೬೬೩೮೭೨೦೩೭ , ೯೭೩೯೦೬೧೩೩೯ ಕೋರಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

