ಕೊಲ್ಹಾರ: ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ಹಾಗೂ ತಾಲೂಕ ಘಟಕ ಕೊಲ್ಹಾರ ವತಿಯಿಂದ ಕೊಲ್ಹಾರ ಪಟ್ಟಣದ ಸಂಗಮೇಶ್ವರ ಪ ಪೂ ಮಹಾವಿದ್ಯಾಲಯದಲ್ಲಿ ಆ.೧೦ರಂದು “ವಿಶ್ಟ ಬುಡಕಟ್ಟು” ದಿನಾಚರಣೆ ಆಚರಿಸಲಾಗುವುದು.
ಕ ಜಾ ಪ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಪ್ರಾಚಾರ್ಯ ಡಾ ಎ ಡಿ ಚವ್ಹಾಣ ಉದ್ಘಾಟಿಸುವರು, ಮೋಹನ ಕಟ್ಟಿಮನಿ ಉಪನ್ಯಾಸ ನೀಡುವರು, ಮುಖ್ಯ ಅತಿಥಿಗಳಾಗಿ ಚು ಸಾ ಪ ಜಿಲ್ಲಾಧ್ಯಕ್ಷ ಜಗದೀಶ ಸಾಲಳ್ಳಿ, ಪ್ರಾ ಶಾ ಶಿ ಸಂಘದ ತಾಲೂಕಾಧ್ಯಕ್ಷ ಸುರೇಶ ಬಿರಾದಾರ, ಕಾರ್ಯದರ್ಶಿ ಕೆ ಎಸ್ ಬಾಲಗೊಂಡ, ಹೇಮ ವೇಮ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ರುದ್ರಗಣಿ, ತಾಲೂಕಾಧ್ಯಕ್ಷ ಮಲ್ಲಪ್ಪ ಗಣಿ, ಕಾರ್ಯದರ್ಶಿ ಭೀಮಶಿ ಬೀಳಗಿ ಮತ್ತು ಮೌಲಾಸಾಹೇಬ ಜಹಾಗೀರದಾರ ಇರುವರು.
ಬುಡಕಟ್ಟು ಜಾನಪದ ಕಲಾಪ್ರದರ್ಶನ ಮತ್ತು ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
