Author: editor.udayarashmi@gmail.com

ಬಂಜಾರಾ ಸಂಘಟನಾ ಸಮಿತಿ ರಾಜ್ಯಾಧ್ಯಕ್ಷ ಪುಂಡಲೀಕ ಪವಾರ ಅಭಿಮತ ವಿಜಯಪುರ: ಪಂಜಾಬ್ ರಾಜ್ಯ ವಿರುದ್ಧ ದೇವಿಂದರ್ ಸಿಂಗ್ ಪ್ರಕರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಕೆನೆಪದರ (ಕ್ರಮಿಲೆಯರ್) ಜಾರಿಗೆ ತರಬೇಕು ಎಂದು ಹೇಳಿರುವ ಸುಪ್ರೀಂಕೋರ್ಟ್ ತೀರ್ಪು ಸಂವಿಧಾನದ ಸಾಮಾಜಿಕ ನ್ಯಾಯದ ಆಶಯಕ್ಕೆ ವಿರುದ್ಧವಾಗಿದೆ ಎಂದು ಬೆಂಗಳೂರಿನ ಭಾರತೀಯ ಬಂಜಾರಾ ಸಂಘಟನಾ ಸಮಿತಿ (ರಿ) ರಾಜ್ಯಾಧ್ಯಕ್ಷ ಪುಂಡಲೀಕ ಜ. ಪವಾರ ಖಂಡಿಸಿದ್ದಾರೆ.ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪಿನಲ್ಲಿರುವ ವಿವಾದಾತ್ಮಕ ಕೆನೆಪದರದ ಬಗೆಗಿನ ಅಂಶ ಸೇರಿದಂತೆ ಇತರ ವಿಷಯಗಳ ಬಗ್ಗೆ ಪರಿಶಿಷ್ಟ ಜಾತಿಯ ನಾಯಕರು ಮತ್ತು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಮುಖ್ಯಮಂತ್ರಿಗಳು ಈಗಾಗಲೇ ತಿರಸ್ಕಾರಗೊಂಡಿರುವ ನ್ಯಾ. ಎ. ಜೆ. ಸದಾಶಿವ ಆಯೋಗದ ವರದಿಯ ಕುರಿತು ಹೇಳಿಕೆ ನೀಡದೆ,ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿಂದುಳಿದಿರುವಿಕೆ, ಪ್ರಾತಿನಿಧ್ಯ ಕುರಿತು ಸರ್ಕಾರದ ಬಳಿ ಪ್ರಾಯೋಗಿಕ ದತ್ತಾಂಶ ಇಲ್ಲದಿರುವುದರಿಂದ ಈ ವಿಚಾರದಲ್ಲಿ…

Read More

ವಿಜಯಪುರ: ಲಯನ್ಸ್ ಕ್ಲಬ್ ಆಪ್ ಬಿಜಾಪುರ ಪರಿವಾರದ ೨೦೨೪-೨೫ನೇ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀಮತಿ ಶಶಿಕಲಾ ಇಜೇರಿ, ಕಾರ್ಯದರ್ಶಿಯಾಗಿ ಶ್ರೇಯಶ್ ಮಹೇಂದ್ರಕರ ಹಾಗೂ ಖಜಾಂಚಿಯಾಗಿ ಶ್ರೀಮತಿ ಪುಷ್ಪಾ ಮಹಾಂತಮಠ ಆಯ್ಕೆಯಾಗಿದ್ದಾರೆ ಎಂದು ಜೋನ್ ಚೇರ್‌ಮನರಾದ ಶ್ರೀ ಅಶೋಕಕುಮಾರ ಜಾಧವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ತುಂಗಭದ್ರಾ ಅಣೆಕಟ್ಟಿನ ಕ್ರೆಸ್ಟ್ ಗೇಟ್ ಪುನಃಸ್ಥಾಪಿಸಲು ಪ್ರಯತ್ನ | ಆತಂಕ ಬೇಡ | ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ಬೆಂಗಳೂರು: ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್‌ಗಳ ಪೈಕಿ ಒಂದು ಕೊಚ್ಚಿಹೋಗಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ರಾಜ್ಯದಲ್ಲಿನ ಎಲ್ಲಾ ಅಣೆಕಟ್ಟುಗಳ ಸ್ಥಿತಿಗತಿಯನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸಲಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೋಮವಾರ ಹೇಳಿದ್ದಾರೆ.ತುಂಗಭದ್ರಾ ಅಣೆಕಟ್ಟಿನ ಕ್ರೆಸ್ಟ್ ಗೇಟ್ ನ್ನು ಪುನಃಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಜಲಸಂಪನ್ಮೂಲ ಸಚಿವರು ಕೂಡ ಆಗಿರುವ ಡಿ ಕೆ ಶಿವಕುಮಾರ್ ಹೇಳಿದರು.ಕೊಪ್ಪಳ ಜಿಲ್ಲಾ ಕೇಂದ್ರ ಪಟ್ಟಣದ ಸಮೀಪವಿರುವ ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್‌ಗಳಲ್ಲಿ ಒಂದು (19 ನೇ ಗೇಟ್) ಮೊನ್ನೆ ಶುಕ್ರವಾರ ಮಧ್ಯರಾತ್ರಿ ಅದರ ಸರಪಳಿ ಸಂಪರ್ಕ ಕಡಿತಗೊಂಡ ನಂತರ ಕೊಚ್ಚಿಕೊಂಡು ಹೋಗಿದ್ದು, ಭಾರಿ ಪ್ರಮಾಣದಲ್ಲಿ ನೀರು ಬರುತ್ತಿದ್ದರಿಂದ ಸುತ್ತಲಿನ ತಗ್ಗು ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.ಬೆಂಗಳೂರಿನಲ್ಲಿ ಸೋಮವಾರ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 70…

Read More

ವಿಜಯಪುರ: ರಬಿನಾಳ ಗ್ರಾಮದ ಕೆರೆ ತುಂಬುವ ಯೋಜನೆಯ ಅಡಿಯಲ್ಲಿ ಜಮೀನು ಸ್ವಾಧೀನ ಪಡಿಸಿಕೊಂಡಿದ್ದು ಪರಿಹಾರ ನೀಡಲು ಶೀಘ್ರದಲ್ಲಿ ಅವಾರ್ಡ ಘೋಷಿಸುವಂತೆ ಒತ್ತಾಯಿಸಿ ನ್ಯಾಯಮೂರ್ತಿ ಲೋಕಾಯುಕ್ತರಾದ ಬಿ.ಎಸ್. ಪಾಟೀಲ ಅವರಿಗೆ ರೈತರ ನಿಯೋಗ ಮನವಿ ಸಲ್ಲಿಸಿತು.ಕ.ಸ.ನಂ ೬೭೦೧-೦೫ ಎ.ಗು ಶ್ರೀಮತಿ ಸರಸ್ವತಿ ಶಾಬಾದಿ, ಬಸವರಾಜ ಶ. ಶಾಬಾದಿ ಕ.ಸ.ನಂ. ೫೮ , ಚಂದ್ರಶೇಖರ ಬ. ಕಿರಸಾವಳಗಿ ಕ.ಸ.ನಂ.೫೭, ಜಯಶ್ರೀ ಆ. ಗೂಡೂರ ಕ.ಸ.ನಂ. ೬೦ ಹಾಗೂ ಇನ್ನಿತರರ ಗ್ರಾಮದ ಕೆರೆ ಭರ್ತಿಮಾಡಲು ನಮ್ಮ ಜಮೀನನನ್ನು ಸನ್ ೨೦೧೯ ರಲ್ಲಿ ಸ್ವಾಧಿನಪಡಿಸಿಕೊಂಡಿದ್ದು ಇಲ್ಲಿಯವರೆಗೂ ಅವಾರ್ಡ್ ಆಗಿರುವುದಿಲ್ಲ. ಇರುವ ಅಲ್ಪ ಸ್ವಲ್ಪ ಜಮೀನನ್ನು ಸನ್ ೨೦೧೯ ರಲ್ಲಿ ಸ್ವಾಧೀನ ಪಡಿಸಿಕೊಂಡ ಹಿನ್ನೆಲೆ ನಮ್ಮ ಕುಟುಂಬಗಳು ತೀರ್ವ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಆದ್ದರಿಂದ ಸಂಬಂಧಿಸಿದ ಇಲಾಖೆಯವರಿಗೆ ಸೂಚಿಸಿ ಶೀಘ್ರದಲ್ಲಿ ಅವಾರ್ಡ್ ಮಾಡಿ ಸೂಕ್ತ ಪರಿಹಾರ ನೀಡುವಂತೆ ನಿರ್ದೇಶನ ನೀಡಬೇಕೆಂದು ವಿನಂತಿಸಿಕೊಂಡರು.ಈ ಸಂದರ್ಭದಲ್ಲಿ ರಾಚನಗೌಡ ಶಿ ಪಾಟೀಲ, ಸರಸ್ವತಿ ಶಾಬಾದಿ, ಬಸವರಾಜ ಶ ಶಾಬಾದಿ, ಚಂದ್ರಶೇಖರ ಕಿರಸಾವಳಗಿ, ಜಯಶ್ರೀ…

Read More

ವಿಜಯಪುರ: ದೃಢ ಮನಸ್ಸು, ಕಠಿಣ ಪರಿಶ್ರಮ ಮತ್ತು ಶಿಸ್ತಿನಿಂದ ಮಾತ್ರ ಏನನ್ನಾದರೂ ಸಾಧಿಸಬಹುದು. ಶಿಸ್ತಿನ ಜೀವನಕ್ಕೆ ಒಳಪಡಿಸಿಕೊಂಡರೆ ಮಾತ್ರ ಜ್ಞಾನ ಸಂಪಾದನೆಯಾಗುತ್ತದೆ ಎಂದು ನಗರದ ಜ್ಞಾನ ಯೋಗಾಶ್ರಮದ ಬ್ರಹ್ಮಾನಂದ ಶ್ರೀಗಳು ಹೇಳಿದರು.ಸೋಮವಾರದಂದು ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ದಿ.ಪ್ರಭಾಕರ ಮೆಮೋರಿಯಲ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ವಿದ್ಯಾರ್ಥಿಗಳ ಸ್ವಾಗತ ಹಾಗೂ ಶಾಲಾ ಸಂಸತ್ತಿನ ಚುನಾಯಿತ ಪ್ರತಿನಿಧಿಗಳಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಜ್ಞಾನ ಸಂಪಾದನೆಗೆ ವಿಪುಲ ಅವಕಾಶವಿರುತ್ತದೆ. ಅದನ್ನು ಸಂಗ್ರಹಿಸಿಕೊಂಡಲ್ಲಿ ಮುಂದೆ ಅದು ಬದುಕಿನ ಉಪಯೋಗಕ್ಕೆ ಬರುತ್ತದೆ ಎಂದರು.ಇಸಿಓ ಎಲ್.ಎಸ್.ಬಿರಾದಾರರವರು ಶಾಲಾ ಸಂಸತ್ತಿನ ಚುನಾಯಿತ ಪ್ರತಿನಿಧಿಗಳಿಗೆ ಪ್ರಮಾಣ ವಚನ ಭೋಧಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ದಿನದಲ್ಲಿ ಉತ್ತಮ ಅಧ್ಯಯನ ಉತ್ತಮ ಹವ್ಯಾಸ ರೂಢಿಸಿಕೊಂಡು, ಪರಿಪೂರ್ಣ ವ್ಯಕ್ತಿತ್ವ ಪಡೆಯಬೇಕು. ಕಠಿಣ ಪರಿಶ್ರಮ ಮತ್ತು ನಿಗದಿತ ದಿನಚರಿ ವ್ಯವಸ್ಥಿತವಾಗಿ ನಿರ್ವಹಿಸಿ…

Read More

ಇಂಡಿ:ಇಂಡಿಯ ನಿಂಬೆ ದೆಹಲಿಯಲ್ಲಿ ಮೂರು ದಿನಗಳ ಕಾಲ ಬಯೋಟೆಕ್ ಇಂಡಿಯಾ ಪ್ರದರ್ಶನ ಮೇಳದಲ್ಲಿ ಪ್ರದರ್ಶನ ಗೊಂಡಿದೆ.ಭಾರತದ ಪ್ರಮುಖ ವ್ಯಾಪಾರ ಮೇಳವು ನ್ಯಾಚುರಲ್ ಎಕ್ಷಪೋ ಇಂಡಿಯಾ ಸಾವಯವ ಮತ್ತು ನೈಸರ್ಗಿಕ ಉತ್ಪನ್ನಗಳ ಪ್ರದರ್ಶನದಲ್ಲಿ ಇಂಡಿ ನಿಂಬೆಯನ್ನು ತಡವಲಗಾ ಗ್ರಾಮದ ರೈತ ಭೀಮರಾಯ ಹಿರಾಪುರ ಸಾವಯುವ ನಿಂಬೆ ಬೆಳೆದು ಪ್ರದರ್ಶಿಸಿದ್ದಾರೆ.ಇಂಡಿಯ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಸ್.ಪಾಟೀಲ ಮತ್ತು ರೈತ ಭೀಮರಾಯ ಹಿರಾಪುರ ಕರ್ನಾಟಕ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದರು.ರೈತರು,ಎಫ್‌ಪಿಒಗಳು, ಉತ್ಪಾದಕರು,ತಯಾರಕರು, ಖರೀದಿದಾರರು,ಆಮದುದಾರರು,ರಫ್ತುದಾರರು ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.

Read More

ವಿಜಯಪುರ:ಇಂದಿನ ಪೀಳಿಗೆಯು ಶಿಸ್ತು ಸಂಯಮದಿಂದ ಇದ್ದರೆ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ಧರ್ಮಗುರುಗಳಾದ ಮೌಲಾನಾ ಉಸಿಉಲ್ಲಾ ನುಡಿದರು.ವಿಜಯಪುರದ ಮೊಹಮ್ಮದಿಯ ನಾಥ್ ಕಮೀಟಿ ಶಾಖೆ ತಿಕೋಟಾ ಇವರ ವತಿಯಿಂದ ನಡೆದ ಜಿಲ್ಲಾ ಮಟ್ಟದ ನಾಥ್ ಹಾಗೂ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗದೆ, ದೇಶ ಕಟ್ಟುವ ಕೆಲಸದಲ್ಲಿ ಪ್ರತಿಯೊಬ್ಬರು ತೊಡಗಬೇಕಿದೆ. ಆದ್ದರಿಂದ ಯುವಕರು ಜನರಲ್ಲಿ ಜಾಗೃತಿ ಮೂಡಿಸುವುದು ಅತಿ ಅವಶ್ಯಕವಾಗಿದೆ ಎಂದರು. ಇಂತಹ ಕಾರ್ಯಕ್ರಮಗಳನ್ನು ಮೇಲಿಂದಮೇಲೆ ಹಮ್ಮಿಕೊಳ್ಳುವುದರಿಂದ ಮಕ್ಕಳಲ್ಲಿ ಶೈಕ್ಷಣಿಕವಾಗಿ ವ್ಯಕ್ತಿತ್ವ ವಿಕಸನಗೊಳಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು.ಈ ಸಂದರ್ಭದಲ್ಲಿ ನಾತ್ ಕಮಿಟಿ ಅಧ್ಯಕ್ಷರಾದ ಸೈಯ್ಯದ ಗಯ್ಯಾಸ ಪಾಷ್ಯಾ, ವಕ್ಫ ಮಂಡಳಿ ಅಧ್ಯಕ್ಷರಾದ ಡಾ.ಕೌಸರ ಅತ್ತಾರ, ಹಿರಿಯರಾದ ಹಾಜಿಲಾಲ್ ಕೊಟ್ಟಲಗಿ, ಯಾಕೂಬ ಜತ್ತಿ, ಪೀರಪಟೇಲ, ಜಹಾಂಗೀರ ಹಿಪ್ಪರಗಿ, ಜಾಕೀರ ಸುರ್ಕಿ, ಫಯಾಜ ಕಲಾದಗಿ, ಅಲ್ತಾಫ್ ಬಾಗವಾನ, ಇರ್ಫಾನ ಬಾಗವಾನ, ಮುಬಾರಕ ಜಮಖಂಡಿ, ಅಬ್ದುಲನಬಿ ಜಮಾದಾರ, ಸಾಧಿಕ ಜಾನ್ವೇಕರ, ಎ.ಜಿ. ಕೋಲಾರ, ಇಕ್ಬಾಲ್ ಖಾಜಿ, ಹಾಸೀಂ ಕಲಾದಗಿ, ಮುಜಮ್ಮಿಲ್ಲ…

Read More

ಚಡಚಣ: ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ಮಾದಕ ವಸ್ತು ಸೇವನೆ ವ್ಯಕ್ತಿಯ ಮೆದುಳು, ದೈಹಿಕ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಬದುಕಿಗೂ ಮಾರಕವಾಗಿದೆ ಎಂದು ರೇವತಗಾಂವ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರುಮಾತೆ ಎಂ.ಎಸ್.ಪಾಟೀಲ ಹೇಳಿದರು.ಸೋಮವಾರದಂದು ರೇವತಗಾಂವ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಮಾದಕ ದ್ರವ್ಯಗಳನ್ನು ವಿತರಿಸುವ ಜಾಲವನ್ನೂ ಮಟ್ಟಹಾಕಲು ಕಾನೂನಿನೊಂದಿಗೆ ಸಹಕರಿಸುವುದು, ಮಾದಕ ವಸ್ತುಗಳನ್ನು ಬಳಸುತ್ತಿರುವವರಿಗೆ ಅವುಗಳ ಮಾರಕ ಪರಿಣಾಮದ ಕುರಿತು ತಿಳುವಳಿಕೆ ನೀಡಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.ಈ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಗ್ರಾಮೀಣ ಪುರ್ನವಸತಿ ಕಾರ್ಯಕರ್ತ ಎಸ್.ಎಂ.ಮಾಳಿ ಮಾತನಾಡುತ್ತ. ಅಮಲು ಸೇವನೆ ಒಂದು ರೀತಿಯಲ್ಲಿ ಫ್ಯಾಷನ್ ಎಂಬುದಾಗಿ ತಿಳಿದ ಯುವಕರು ಮಾದಕ ವಸ್ತುಗಳತ್ತ ಆಕರ್ಷಿತರಾಗಿ ನಿರಂತರ ಉಪಯೋಗಕ್ಕೆ ತೊಡಗುತ್ತಾರೆ. ತಿಳುವಳಿಕಾ ತರಗತಿ ಆಯೋಜನೆಯಿಂದ ಜಾಗೃತಿ ಮೂಡಿಸಲು…

Read More

ಸಿಂದಗಿ: ಸಂಸಾರ ನೌಕೆಯ ನಾವಿಕನಾಗಿ, ಕುಟುಂಬದ ರಕ್ಷಕನಾಗಿ, ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕನಾಗಿ, ಕುಟುಂಬಕ್ಕಾಗಿ ತಮ್ಮವರಿಗಾಗಿ ಹಗಲು ರಾತ್ರಿ ದುಡಿಯುವ ಏಕೈಕ ಜೀವ ಎಂದರೆ ಅಪ್ಪ ಎಂದು ನಾದಬ್ರಹ್ಮ ಖ್ಯಾತಿಯ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಹಂಸಲೇಖ ಹೇಳಿದರು.ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೋರಗಿಯ ನಬಿರೋಶನ್ ಪ್ರಕಾಶನ ವತಿಯಿಂದ ದಿ.ಖತಾಲಸಾಬ ಆಲಗೂರ ಇವರ ೨ನೇ ವರ್ಷದ ಪುಣ್ಯ ಸ್ಮರಣೆಯ ನಿಮಿತ್ಯವಾಗಿ ಬೆಂಗಳೂರಿನ ಕೋರಮಂಗಲದ ಕೆ.ಎಸ್.ಆರ್.ಪಿ ೪ನೇ ಬೆಟಾಲಿಯನ್‌ನಲ್ಲಿ ಹಮ್ಮಿಕೊಂಡ ಅಪ್ಪ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಂದೆಯ ಹೆಸರಿನಲ್ಲಿ ಅವರ ಪುಣ್ಯ ಸ್ಮರಣೆ ದಿನದಂದು ಅಪ್ಪ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಶ್ಲಾಘನೀಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ.ಎಸ್.ಆರ್.ಪಿಯ ಕಮಾಂಡೆಂಟ್ ಹಮಜಾಹುಸೇನ್ ಮಾತನಾಡಿ, ಇಂದಿನ ಮಕ್ಕಳಿಗೆ ಪಾಲಕರ ಮೇಲೆ ಗೌರವ, ಭಯ, ಭಕ್ತಿ ಇಲ್ಲದಾಗಿದೆ. ಜನ್ಮ ಕೊಟ್ಟ ತಂದೆ-ತಾಯಿಗಳನ್ನು ಕೊನೆಯ ದಿವಸಗಳಲ್ಲಿ ವೃದ್ರಾಶ್ರಮಗಳಲ್ಲಿ ದಿನ ಕಳೆಯುವಂತೆ ಮಾಡುತ್ತಿರುವುದು ನಿಜಕ್ಕೂ ದುರಂತವೇ ಸರಿ ಎಂದು ವಿಷಾದ ವ್ಯಕ್ತಪಡಿಸಿದರು.ಕಾರ್ಯಕ್ರಮದ ಆಯೋಜಕ ಹೆಡ್‌ಕಾನ್ಸ್ಟೇಬಲ್ ಮೌಲಾಲಿ…

Read More

ತಾಳಿಕೋಟಿ: ತಾಲೂಕಿನ ಪಡೇಕನೂರ ಗ್ರಾಮದ ಚೆನ್ನಪ್ಪಗೌಡ ಪಾಟೀಲ ಅವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತಗಡಿನ ಶೆಡ್ಡಿನ ಮೇಲೆ ಮುಖ್ಯ ವಿದ್ಯುತ್‌ ತಂತಿ ಕತ್ತರಿಸಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದ ಭಾರತಿ ಮಾದರ ಹಾಗೂ ಮಗಳು ಭಾಗ್ಯಶ್ರೀ ಅವಳ ಕುಟುಂಬದವರಿಗೆ ಹೆಸ್ಕಾ ಇಲಾಖೆಯಿಂದ ಕೊಡಮಾಡಲಾದ ತಲಾ 5 ಲಕ್ಷ ರೂ. ಚೆಕ್‌ನ್ನು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ ಅವರು ಶನಿವಾರರಂದು ವಿತರಿಸಿದರು.5 ಲಕ್ಷ ರೂ.ದಂತೆ 10 ಲಕ್ಷ ರೂ. ಚೆಕ್‌ನ್ನು ಹಸ್ತಾಂತರಿಸಿದ ಲೋಕಾಯುಕ್ತ ನ್ಯಾಯಮೂರ್ತಿಗಳು ನಿನಗೆ ಇನ್ನೂ ಎರಡು ಗಂಡು ಮಕ್ಕಳಿವೆ ಅವರಿಗೆ ಉತ್ತಮ ಶಿಕ್ಷಣದ ಅವಶ್ಯಕತೆ ಇದೆ ಮತ್ತು ಅವರ ಭವಿಷ್ಯ ರೂಪಿಸುವ ಜವಾಬ್ದಾರಿಯು ನಿನ್ನ ಮೇಲೆ ಇದೆ.ಈ ಹಣವನ್ನು ಕೈಯಲ್ಲಿದ್ದರೆ ಖರ್ಚು ಆಗುತ್ತದೆ ಆ ಹಣವನ್ನು ಇಬ್ಬರ ಮಕ್ಕಳ ಹೆಸರಿನಲ್ಲಿ ಬ್ಯಾಂಕಿನಲ್ಲಿ ಡಿಫಾಸಿಟ್ ಮಾಡು ಮುಂದೆ ಮಕ್ಕಳು ದೊಡ್ಡವರಾದ ಮೇಲೆ ಅವರ ಭವಿಷ್ಯದ ಸಂದರ್ಭದಲ್ಲಿ ಅವಶ್ಯಕತೆ ಬಿದ್ದಾಗ ಬಳಕೆಗೆ ಬರುತ್ತದೆ ಎಂದು ತಿಳಿ ಹೇಳಿದ ಅವರು ಈ ವಿದ್ಯುತ್ಅವಘಡದಿಂದ…

Read More