ವಿಜಯಪುರ: ರಬಿನಾಳ ಗ್ರಾಮದ ಕೆರೆ ತುಂಬುವ ಯೋಜನೆಯ ಅಡಿಯಲ್ಲಿ ಜಮೀನು ಸ್ವಾಧೀನ ಪಡಿಸಿಕೊಂಡಿದ್ದು ಪರಿಹಾರ ನೀಡಲು ಶೀಘ್ರದಲ್ಲಿ ಅವಾರ್ಡ ಘೋಷಿಸುವಂತೆ ಒತ್ತಾಯಿಸಿ ನ್ಯಾಯಮೂರ್ತಿ ಲೋಕಾಯುಕ್ತರಾದ ಬಿ.ಎಸ್. ಪಾಟೀಲ ಅವರಿಗೆ ರೈತರ ನಿಯೋಗ ಮನವಿ ಸಲ್ಲಿಸಿತು.
ಕ.ಸ.ನಂ ೬೭೦೧-೦೫ ಎ.ಗು ಶ್ರೀಮತಿ ಸರಸ್ವತಿ ಶಾಬಾದಿ, ಬಸವರಾಜ ಶ. ಶಾಬಾದಿ ಕ.ಸ.ನಂ. ೫೮ , ಚಂದ್ರಶೇಖರ ಬ. ಕಿರಸಾವಳಗಿ ಕ.ಸ.ನಂ.೫೭, ಜಯಶ್ರೀ ಆ. ಗೂಡೂರ ಕ.ಸ.ನಂ. ೬೦ ಹಾಗೂ ಇನ್ನಿತರರ ಗ್ರಾಮದ ಕೆರೆ ಭರ್ತಿಮಾಡಲು ನಮ್ಮ ಜಮೀನನನ್ನು ಸನ್ ೨೦೧೯ ರಲ್ಲಿ ಸ್ವಾಧಿನಪಡಿಸಿಕೊಂಡಿದ್ದು ಇಲ್ಲಿಯವರೆಗೂ ಅವಾರ್ಡ್ ಆಗಿರುವುದಿಲ್ಲ. ಇರುವ ಅಲ್ಪ ಸ್ವಲ್ಪ ಜಮೀನನ್ನು ಸನ್ ೨೦೧೯ ರಲ್ಲಿ ಸ್ವಾಧೀನ ಪಡಿಸಿಕೊಂಡ ಹಿನ್ನೆಲೆ ನಮ್ಮ ಕುಟುಂಬಗಳು ತೀರ್ವ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಆದ್ದರಿಂದ ಸಂಬಂಧಿಸಿದ ಇಲಾಖೆಯವರಿಗೆ ಸೂಚಿಸಿ ಶೀಘ್ರದಲ್ಲಿ ಅವಾರ್ಡ್ ಮಾಡಿ ಸೂಕ್ತ ಪರಿಹಾರ ನೀಡುವಂತೆ ನಿರ್ದೇಶನ ನೀಡಬೇಕೆಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ರಾಚನಗೌಡ ಶಿ ಪಾಟೀಲ, ಸರಸ್ವತಿ ಶಾಬಾದಿ, ಬಸವರಾಜ ಶ ಶಾಬಾದಿ, ಚಂದ್ರಶೇಖರ ಕಿರಸಾವಳಗಿ, ಜಯಶ್ರೀ ಗೂಡೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment
