Author: editor.udayarashmi@gmail.com

ಇಂಡಿ: ಕೊಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಸ್ನಾತಕೋತ್ತರ ತರಬೇತಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಕೊಲೆ ಪ್ರಕರಣ ಖಂಡಿಸಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಶೀಲ್ದಾರ್ ಧನಪಾಲಶೆಟ್ಟಿ ದೇವೂರ ಅವರಿಗೆ ಎಬಿವಿಪಿ ಕಾರ್ಯಕರ್ತರು ಶನಿವಾರ ಮನವಿ ಸಲ್ಲಿಸಿದರು.ಪ್ರತಿಭಟನಾಕಾರರು ಪ್ರಮುಖ ಬೀದಿಯಲ್ಲಿ ಪ್ರತಿಭಟಿಸಿ ತದನಂತರ, ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿ ನಿರ್ಲಕ್ಷ್ಯ ವಹಿಸಿರುವ ಸರಕಾರದ ವಿರುದ್ಧ ದಿಕ್ಕಾರ ಕೂಗಿದರು.ಈ ಸಂದರ್ಭದಲ್ಲಿ ಎಬಿವಿಪಿ ನಗರ ಕಾರ್ಯದರ್ಶಿ ಸಚಿನ ದಾನಗೊಂಡ ಮಾತನಾಡಿ, ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿನಂತೆ ವೈದ್ಯನಾದವನು ದೇವರಿಗೆ ಸಮನಾದವನು ಎಂಬ ಮಾತಿದೆ. ಆದರೆ ಪಶ್ಚಿಮ ಬಂಗಾಳದ ಕೊಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜಿನ ಹಾಲ್ ನಲ್ಲಿ ಸ್ನಾತಕೋತ್ತರ ತರಬೇತಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಕೊಲೆ ಪ್ರಕರಣ ಮಾನವೀಯ ಸಮಾಜ ತಲೆತಗ್ಗಿಸುವಂತೆ ಆಗಿದೆ. ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಅತ್ಯಾಚಾರದಂತಹ ಘಟನೆ ನಡೆಯಲು ಮೂಲ ಕಾರಣ ಅಲ್ಲಿನ…

Read More

ಮುದ್ದೇಬಿಹಾಳ: ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ ಪಶ್ಚಿಮ ಬಂಗಾಳದ ಮಹಿಳಾ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಶನಿವಾರ ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಳ ಸಂಘ ಹಾಗೂ ಭಾರತೀಯ ವೈದ್ಯಾಧಿಕಾರಿಗಳ ಸಂಘದ ವತಿಯಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಒಂದು ದಿನದ ಹೊರ ರೋಗಿಗಳ ಸೇವೆ (ಓಪಿಡಿ) ಸ್ಥಗಿತಗೊಳಿಸಿ ಆಕ್ರೋಶ ಹೊರಹಾಕಿದ್ದಾರೆ.ಅಗತ್ಯ ತುರ್ತು ಸೇವೆಗಳನ್ನು ಒದಗಿಸುವ ಮೂಲಕ ಇನ್ನುಳಿದ ಸೇವೆಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಎಲ್ಲ ವೈದ್ಯಾಧಿಕಾರಿಗಳು ಹಾಗೂ ಆಸ್ಪತ್ರೆಯಲ್ಲಿನ ಎಲ್ಲ ಸಿಬ್ಬಂದಿ ವರ್ಗದವರು ಸಾಥ್ ನೀಡಿದರು. ಸಾರ್ವಜನಿಕರಿಗೆ ಅಗತ್ಯ ಸೇವೆಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು.ಈ ವೇಳೆ ತಾಲೂಕು ಆಡಳಿತ ವೈದ್ಯಾಧಿಕಾರಿ ಅನೀಲಕುಮಾರ ಶೇಗುಣಸಿ ಮಾತನಾಡಿ, ಘಟನೆಯನ್ನು ಅತ್ಯಂತ ಗಂಭೀರವಾಗಿ ಖಂಡಿಸುತ್ತೇವೆ. ಸಾರ್ವಜನಿಕರ ತಿಳಿವಳಿಕೆಗೋಸ್ಕರ ಓಪಿಡಿಯನ್ನು ಸ್ಥಗಿತಗೊಳಿಸಿ ಪ್ರತಿಭಟಿಸಲಾಗುತ್ತಿದೆ. ದೇಶದಲ್ಲಿ ವೈದ್ಯರಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ. ಕಠಿಣ ಕಾನೂನುಗಳು ಜಾರಿಗೆ ಬರಬೇಕಾಗಿದೆ. ತಪ್ಪಿತಸ್ಥರಿಗೆ ಅತ್ಯಂತ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದರು.ಡಾ. ಹಸನಡೊಂಗ್ರಿ ಬೀಳಗಿ ಮಾತನಾಡಿ, ತುರ್ತು ಸೇವೆಗಳನ್ನು ಒದಗಿಸುವ…

Read More

ತಾಳಿಕೋಟಿ: ಪಶ್ಚಿಮ ಬಂಗಾಳದ ಕೊಲ್ಕತ್ತಾದ ಆರ್.ಜಿ.ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯ ನಿರತ ಯುವ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಅಮಾನುಷ ಹತ್ಯೆಯನ್ನು ಖಂಡಿಸಿ ಪಟ್ಟಣದ ವೈದ್ಯರ ಸಂಘ,ಭಾರತೀಯ ವೈದ್ಯರ ಸಂಘ ತಾಳಿಕೋಟಿ,ಆಯುಷ್ ಫೆಡರೇಷನ್ ಹಾಗೂ ಕೆಜಿಎಂಓಎದ ಪದಾಧಿಕಾರಿಗಳು ಐಎಂಎ ಕರೆದ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಶನಿವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಪಟ್ಟಣದ ಶಿವಾಜಿ ಸರ್ಕಲ್ ದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ವೈದ್ಯರು ಮಹಾರಾಣಾ ಪ್ರತಾಪ್ ಸಿಂಹ ಸರ್ಕಲ್ ಬಸ್ ನಿಲ್ದಾಣದ ಮಾರ್ಗವಾಗಿ ಸಂಚರಿಸಿ ತಹಶೀಲ್ದಾರ್ ಕಾರ್ಯಾಲಯಕ್ಕೆ ತೆರಳಿ‌ ತಹಶೀಲ್ದಾರ್ ಕೀರ್ತಿ ಚಾಲಕ್ ಅವರ ಮೂಲಕ‌ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಳಿಕೋಟಿ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಆರ್.ಪಿ.ಅಗರವಾಲ ಮಾತನಾಡಿ, ಧರ್ಮಶಾಸ್ತ್ರಗಳು ವೈದ್ಯರನ್ನು ನಾರಾಯಣೋ ಹರಿ ಎಂದು ಹೇಳುತ್ತವೆ. ಆದರೆ ದೇವರ ಸಮಾನರಾದ ವೈದ್ಯರಿಗೆ ಇಲ್ಲಿ ಮನುಷ್ಯರೆಂದು ಭಾವಿಸುತ್ತಿಲ್ಲ. ಅಷ್ಟು ಕೆಟ್ಟದಾಗಿ ಅವರೊಂದಿಗೆ ವರ್ತಿಸಲಾಗುತ್ತಿದೆ. ಕಳೆದ ಕೆಲವು ತಿಂಗಳುಗಳ ಹಿಂದೆ ಪಟ್ಟಣದಲ್ಲಿ ವೈದ್ಯರ ಮೇಲೆ ಹಲ್ಲೆಯ ಘಟನೆ…

Read More

ಮುದ್ದೇಬಿಹಾಳ: ಅ.೨೦ ರಿಂದ ೨೨ ರವರೆಗೆ ಪಟ್ಟಣದ ಮಹಾಂತೇಶ ನಗರದಲ್ಲಿರುವ ಶ್ರೀ ಗುರು ರಾಘವೇಂದ್ರ ಮಹಾಸ್ವಾಮಿಗಳ ಬೃಂದಾವನ ಸನ್ನಿಧಿಯಲ್ಲಿ ಗುರು ರಾಯರ ೩೫೩ನೇ ಆರಾಧನಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಅ.೨೦ ರಂದು ಬೆಳಿಗ್ಗೆ ೬ಗಂಟೆಗೆ ಸುಪ್ರಭಾತ, ೭ಕ್ಕೆ ಗೋ-ಪೂಜೆ, ಧ್ವಜಾರೋಹಣ, ೮ಕ್ಕೆ ವಾಯುಸ್ತುತಿ, ಅಷ್ಟೋತ್ತರ, ಪಂಚಾಮೃತ ಅಭಿಷೇಕ ಅಲಂಕಾರ, ೧೦ಕ್ಕೆ ರುದ್ರಾಭಿಷೇಕ, ೧೧ಕ್ಕೆ ಪ್ರವಚನ, ೧೨ಕ್ಕೆ ಸುಮಂಗಲೆಯರಿಂದ ಶ್ರೀ ಲಕ್ಷ್ಮೀ ಶೋಬಾನೆಯೊಂದಿಗೆ ಕುಂಕುಮಾರ್ಚನೆ, ಮಧ್ಯಾಹ್ನ ೧ರಿಂದ೩ ರವರೆಗೆ ತೀರ್ಥ ಪ್ರಸಾದ, ಸಂಜೆ ೭-೩೦ ಕ್ಕೆ ಶಿರಸಿಯ ಗಾಯತ್ರಿ ಭಟ್ ಇವರಿಂದ ಕೀರ್ತನೆ, ೧೦ಕ್ಕೆ ಮಹಾ ಮಂಗಳಾರುತಿ.ಅ.೨೧ ರಂದು ೬ಗಂಟೆಗೆ ಸುಪ್ರಭಾತ, ೮ಕ್ಕೆ ವಾಯುಸ್ತುತಿ, ಅಷ್ಟೋತ್ತರ, ಪಂಚಾಮೃತ ಅಭಿಷೇಕ ಅಲಂಕಾರ, ೧೦ಕ್ಕೆ ಮನ್ಯುಸೂಕ್ತ ಹೋಮ, ೧೧ಕ್ಕೆ ಲಕ್ಷ ಪುಷ್ಪಾರ್ಚನೆ, ಮದ್ಯಾಹ್ನ ೧ರಿಂದ೩ ರವರೆಗೆ ತೀರ್ಥ ಪ್ರಸಾದ, ಸಂಜೆ ೭-೩೦ ಕ್ಕೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ವಿಜ್ ಕಾರ್ಯಕ್ರಮ, ೧೦ಕ್ಕೆ ಮಹಾ ಮಂಗಳಾರುತಿ.ಅ.೨೨ ರಂದು ೬ಗಂಟೆಗೆ ಸುಪ್ರಭಾತ, ೮ಕ್ಕೆ ವಾಯುಸ್ತುತಿ, ಅಷ್ಟೋತ್ತರ, ಪಂಚಾಮೃತ…

Read More

70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ | ಕಾಂತಾರ ಸಿನಿಮಾ ಅಭಿನಯಕ್ಕಾಗಿ ರಿಷಭ್ ಶೆಟ್ಟಿಗೆ ಪ್ರಶಸ್ತಿ | KGF-2 ಗೆ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ ನವದೆಹಲಿ: 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ವಿಜೇತರನ್ನು ಶುಕ್ರವಾರ ಪ್ರಕಟಿಸಲಾಗಿದೆ. ಕನ್ನಡದ ಕಾಂತಾರ ಸಿನಿಮಾದಲ್ಲಿ ಅತ್ಯುತ್ತಮ ಅಭಿನಯಕ್ಕಾಗಿ ನಟ ರಿಷಭ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅತ್ಯುತ್ತಮ ಜನಪ್ರಿಯ ಹಾಗೂ ಮನರಂಜನಾ ಚಿತ್ರವಾಗಿ ಎರಡು ವಿಭಾಗದಲ್ಲಿ ‘ಕಾಂತಾರ’ ಪ್ರಶಸ್ತಿ ಬಾಚಿಕೊಂಡಿದೆ.2022ನೇ ಸಾಲಿನಲ್ಲಿ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆಗೈದ ಚಿತ್ರಗಳ ಪಟ್ಟಿಯನ್ನು ಕೇಂದ್ರ ವಾರ್ತಾ ಪ್ರಸಾರ ಮತ್ತು ಮಾಹಿತಿ ಸಚಿವಾಲಯ ಘೋಷಿಸಿದೆ. ಅತ್ಯುತ್ತಮ ನಟರ ರೇಸ್ ನಲ್ಲಿ ರಿಷಬ್ ಶೆಟ್ಟಿ ಹಾಗೂ ಮಲೆಯಾಳಂ ನಟ ಮಮ್ಮುಟ್ಟಿ ನಡುವೆ ಭಾರಿ ಸ್ಪರ್ಧೆ ಎರ್ಪಟ್ಟಿತ್ತು. ಕೊನೆಗೆ ರಿಷಭ್ ಶೆಟ್ಟಿಗೆ ಪ್ರಶಸ್ತಿ ಒಲಿದುಬಂದಿದೆ.ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಅತ್ಯುತ್ತಮ ಕನ್ನಡ ಚಿತ್ರವಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ. ಸಾಹಸ ನಿರ್ದೇಶನ ವಿಭಾಗದಲ್ಲೂ ಕೆಜಿಎಫ್-2 ಪ್ರಶಸ್ತಿ ಗೆದ್ದಿದೆ.ಜನವರಿ 1, 2022 ರಿಂದ ಡಿಸೆಂಬರ್…

Read More

ಆಲಮಟ್ಟಿ: ನಮ್ಮ ದೇಶದ ಇತಿಹಾಸ, ಪರಂಪರೆ, ಸಂಸ್ಕೃತಿಗಳು ದಿವ್ಯಾನು ದಿವ್ಯತೆಯುಳ್ಳ ಭವ್ಯಾನುಭೂತಿಯ ಪರದಿಯಲ್ಲಿ ಕೂಡಿವೆ. ಅವು ಅನ್ಯ ದೇಶಗಳ ಮೇಲೆ ಪ್ರಭಾವ ಬೀರಿವೆ. ವಿವಿಧೆತೆಯಲ್ಲಿ ಏಕತೆ ಸಾಧಿಸಿ ಜಗದೆಡೆಗಳಲ್ಲಿ ಭಾರತ ಮಿನುಗುತ್ತಿದೆ ಎಂದು ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಅಭಿಪ್ರಾಯಿಸಿದರು.   ಗುರುವಾರ ಸ್ಥಳೀಯ ಎಸ್.ವ್ಹಿ. ವ್ಹಿ. ಸಂಸ್ಥೆಯ ರಾವಬಹದ್ದೂರ ಡಾ,ಫ.ಗು.ಹಳಕಟ್ಟಿ (ಆರ್.ಬಿ.ಪಿ.ಜಿ) ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ೭೮ ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಶಿಕ್ಷಕ ಎನ್.ಎಸ್.ಬಿರಾದಾರ, ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎಚ್.ನಾಗಣಿ ಮಾತನಾಡಿದರು.        ಅತಿಥೇಯ ಶಾಲೆ ಹಾಗೂ ಅಂಗಸಂಸ್ಥೆಯ ಎಂಎಚ್‌ಎಂ ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಡಿಸ್ ಪ್ಲೇ ಚಟುವಟಿಕೆಗಳಲ್ಲಿ ಹಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಪ್ರೌಢಶಾಲಾ ಮಕ್ಕಳ ಶಿಸ್ತು ಬದ್ಧ ಪಥಸಂಚಲನ ಆಕರ್ಷಿಸಿತು.ಮುಖ್ಯ ಗುರು ಗೌರವ ವಂದನೆ ಸ್ವೀಕರಿಸಿದರು. ದೇಶಭಕ್ತಿ ಗೀತ ಗಾಯನಗಳಿಗೆ ಎಂಎಚ್‌ಎಂ ಆಂಗ್ಲ ಶಾಲೆ ಪುಟಾಣಿ ಬಾಲೆಯರು, ಹಳಕಟ್ಟಿ ಹೈಸ್ಕೂಲ್ ವಿದ್ಯಾರ್ಥಿನಿಯರು ನೃತ್ಯ ಮಾಡಿ ಖುಷಿಪಟ್ಟರು. ಚುಟುಕು ಭಾಷಣ,…

Read More

– ಚೇತನ ಶಿವಶಿಂಪಿಮುದ್ದೇಬಿಹಾಳ: ವಿದ್ಯಾರ್ಥಿಗಳಿಬ್ಬರಿಗೆ ೭೮ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ನೆರವೇರಿಸುವ ಸೌಭಾಗ್ಯ ಲಭಿಸಿದೆ.ಪಟ್ಟಣದ ಹುಡ್ಕೋ ಬಡಾವಣೆಯ ಶಿರವಾಳ ಲೇಔಟ್ ನಲ್ಲಿರುವ ವೀರಭದ್ರೇಶ್ವರ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ವಿದ್ಯಾ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಧ್ವಜಾರೋಹಣ ನೆರವೇರಿಸುವ ಸೌಭಾಗ್ಯ ಕಲ್ಪಿಸಿಕೊಡಲಾಗಿದೆ.ವಿಧ್ಯಾರ್ಥಿಗಳಾದ ಅಕುಲ ನಾಟೆಕಾರ ಮತ್ತು ಶರತ ಹಡಪದ ಧ್ವಜಾರೋಹಣ ನೆರವೇರಿಸಿದ ಭಾಗ್ಯಶಾಲಿ ವಿದ್ಯಾರ್ಥಿಗಳು.ಕಳೆದ ಮೂರು ವರ್ಷಗಳಿಂದ ವಲಯ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದ ಕಾರಣ ಈ ಅವಕಾಶ ಕಲ್ಪಿಸಿರುವದಾಗಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎನ್.ಎಸ್.ಹಿರೇಮಠ ತಿಳಿಸಿದ್ದಾರೆ.ಅದೆಷ್ಟೋ ದೇಶಪ್ರೇಮಿಗಳು ತಮ್ಮ ಜೀವಿತಕಾಲದಲ್ಲಿ ಒಮ್ಮೆಯಾದರೂ ಧ್ವಜಾರೋಹಣವನ್ನು ನೆರವೇರಿಸಬೇಕು ಎಂದುಕೊಂಡಿದ್ದರೂ ಲಭಿಸದ ಭಾಗ್ಯ ವಿದ್ಯಾರ್ಥಿಗಳಿಗೆ ಲಭಿಸಿದ್ದು ಹೆಮ್ಮೆಯ ವಿಷಯ.

Read More

ಸಿಂದಗಿ: ಪಟ್ಟಣದ ವಿರಕ್ತಮಠದ ಲಿಂ.ಸಿದ್ದಲಿಂಗ ಮಹಾಸ್ವಾಮಿಗಳ ೩ನೇ ಪುಣ್ಯಸ್ಮರಣೆ ಅಂಗವಾಗಿ ಅವರ ಕರ್ತೃ ಗದ್ದುಗೆಗೆ ಮಹಾ ಅಭಿಷೇಕ ಪೂಜಾ ಕಾರ್ಯಕ್ರಮವನ್ನು ಮಾಡಲಾಯಿತು.ಮಹಾ ಅಭಿಷೇಕ ನೇರವರಿಸಿ ಮಾತನಾಡಿದ ಗುರುರಾಜ ಮಠ, ಶ್ರೀಗಳು ಮಠವನ್ನಷ್ಟೇ ಅಗಲಿಲ್ಲ. ಇಡೀ ಸಿಂದಗಿ ಜನರನ್ನು ಅಗಲಿದ್ದಾರೆ. ದೈಹಿಕವಾಗಿ ಅವರು ನಮ್ಮ ಜತೆ ಇಲ್ಲವಾದರೂ ಮಾನಸಿಕವಾಗಿ ನಮ್ಮೊಡನೆ ಇದ್ದಾರೆ. ಶ್ರೀಗಳು ಹಾಕಿ ಕೊಟ್ಟ ದಾರಿಯಲ್ಲಿ ನಾವು ನಡೆಯುತ್ತಿದ್ದೇವೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರಿಗೆ ಅವರ ತಾಯತ ಪ್ರಸಾದದ ಪವಾಡ ಗೊತ್ತಿತ್ತು ಎಂದು ಹೇಳಿದರು.

Read More

ಸಿಂದಗಿ: ಯೋಗ ಮಾಡುವುದರ ಉದ್ದೇಶ ಆರೋಗ್ಯ ಪಡೆಯಬೇಕೆಂಬುದಲ್ಲ ಈ ಜೀವಿತ ಶರೀರ ಸಮಾಧಿಯನ್ನು ತಲುಪಬೇಕೆಂಬುವುದು. ಸಮಾಧಿ ತಲುಪುವ ಯೋಗ ನಾವು ಮಾಡಿದರೆ ಆರೋಗ್ಯ ತನ್ನಿಂತಾನೆ ಬರುತ್ತದೆ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.ಅವರು ಪಟ್ಟಣದ ಎಚ್‌ಜಿ ಕಾಲೇಜಿನ ಆವರಣದಲ್ಲಿ ಯೋಗೋತ್ಸವ ಸಮಿತಿ ವತಿಯಿಂದ ನಿರಂತರ ೨೧ದಿನಗಳ ಕಾಲ ಹಮ್ಮಿಕೊಂಡಿರುವ ಯೋಗ, ಧ್ಯಾನ ಶಿಬಿರದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಪುರಾತನ ಕಾಲದಲ್ಲಿ ಋಷಿ ಮುನಿಗಳ ದೀರ್ಘಕಾಲದ ಆರೋಗ್ಯದ ಬದುಕಿನ ಗುಟ್ಟೆಂದರೆ ಅದು ಯೋಗ ಸಾಧನೆ. ಪ್ರಸ್ತುತ ದಿನಗಳಲ್ಲಿ ಯುವ ಜನತೆ ದೈಹಿಕ ಚಟುವಟಿಕೆಗಳಿಗೆ ಪೂರಕವಾದ ಆಟ ಪಾಠಗಳಿಲ್ಲದ ಆಲಸ್ಯಮಯ ಜೀವನಶೈಲಿ ಹಾಗೂ ಅಹಿತಕರ, ಇತಿಮಿತಿ ಇಲ್ಲದ ಆಹಾರ ಶೈಲಿಯೂ ಆರೋಗ್ಯಕ್ಕೆ ಮಾರಕವಾಗುತ್ತಿದೆ. ಇದನ್ನು ತಪ್ಪಿಸಲು ದಿನನಿತ್ಯ ಯೋಗ ಸಾಧನೆ ಮಾಡಬೇಕು ಎಂದ ಅವರು ಶಾಸಕ ಮನಗೂಳಿ ಹಾಗೂ ಯೋಗೋತ್ಸವ ಸಮಿತಿಯ ಸಂಗಡಿಗರು ಹಮ್ಮಿಕೊಂಡಿರುವ ಈ ಕಾರ್ಯ ಶ್ಲಾಘನೀಯ ಎಂದರು.ಈ ವೇಳೆ ಶಾಸಕ ಅಶೋಕ ಮನಗೂಳಿ ಮಾತನಾಡಿ, ಆಧುನಿಕ ಒತ್ತಡದ ಜೀವನದಲ್ಲಿ…

Read More