ತಾಳಿಕೋಟಿ: ಪಶ್ಚಿಮ ಬಂಗಾಳದ ಕೊಲ್ಕತ್ತಾದ ಆರ್.ಜಿ.ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯ ನಿರತ ಯುವ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಅಮಾನುಷ ಹತ್ಯೆಯನ್ನು ಖಂಡಿಸಿ ಪಟ್ಟಣದ ವೈದ್ಯರ ಸಂಘ,ಭಾರತೀಯ ವೈದ್ಯರ ಸಂಘ ತಾಳಿಕೋಟಿ,ಆಯುಷ್ ಫೆಡರೇಷನ್ ಹಾಗೂ ಕೆಜಿಎಂಓಎದ ಪದಾಧಿಕಾರಿಗಳು ಐಎಂಎ ಕರೆದ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಶನಿವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಪಟ್ಟಣದ ಶಿವಾಜಿ ಸರ್ಕಲ್ ದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ವೈದ್ಯರು ಮಹಾರಾಣಾ ಪ್ರತಾಪ್ ಸಿಂಹ ಸರ್ಕಲ್ ಬಸ್ ನಿಲ್ದಾಣದ ಮಾರ್ಗವಾಗಿ ಸಂಚರಿಸಿ ತಹಶೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ತಹಶೀಲ್ದಾರ್ ಕೀರ್ತಿ ಚಾಲಕ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಳಿಕೋಟಿ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಆರ್.ಪಿ.ಅಗರವಾಲ ಮಾತನಾಡಿ, ಧರ್ಮಶಾಸ್ತ್ರಗಳು ವೈದ್ಯರನ್ನು ನಾರಾಯಣೋ ಹರಿ ಎಂದು ಹೇಳುತ್ತವೆ. ಆದರೆ ದೇವರ ಸಮಾನರಾದ ವೈದ್ಯರಿಗೆ ಇಲ್ಲಿ ಮನುಷ್ಯರೆಂದು ಭಾವಿಸುತ್ತಿಲ್ಲ. ಅಷ್ಟು ಕೆಟ್ಟದಾಗಿ ಅವರೊಂದಿಗೆ ವರ್ತಿಸಲಾಗುತ್ತಿದೆ. ಕಳೆದ ಕೆಲವು ತಿಂಗಳುಗಳ ಹಿಂದೆ ಪಟ್ಟಣದಲ್ಲಿ ವೈದ್ಯರ ಮೇಲೆ ಹಲ್ಲೆಯ ಘಟನೆ ನಡೆಯಿತು ಆಗಲು ನಾವು ಇದೇ ರೀತಿಯಾಗಿ ಪ್ರತಿಭಟನೆ ಮಾಡಿ ಮನವಿ ನೀಡಿದೆವು ಆದರೆ ಯಾವುದೇ ಕ್ರಮ ಜರುಗಲಿಲ್ಲ ಇದೀಗ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಅಮಾನುಷವಾದ ಘಟನೆ ನಡೆದಿದೆ. ಕರ್ತವ್ಯ ನಿರತ ಕೊಲ್ಕತ್ತಾದ ಯುವ ವೈದ್ಯೆಯ ಅತ್ಯಾಚಾರ ನಡೆಸಿ ಅವಳನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಜನರ ಸೇವೆಯಲ್ಲಿ ತೊಡಗಿದಂತಹ ವೈದ್ಯರ ಮೇಲೆ ಈ ರೀತಿಯಾದಂತಹ ದೌರ್ಜನ್ಯಗಳಿಂದ ಭಯದ ವಾತಾವರಣ ನಿರ್ಮಾಣವಾಗಿ ಸೇವೆ ಮಾಡುವುದನ್ನೇ ನಿಲ್ಲಿಸಿ ಬಿಡುವ ಸ್ಥಿತಿ ನಿರ್ಮಾಣವಾಗಿದೆ. ಅವರ ಪ್ರಾಣ ಹಾಗೂ ಗೌರವಕ್ಕೆ ಯಾವುದೇ ರೀತಿಯಾದಂತಹ ಸುರಕ್ಷತೆ ಇವತ್ತು ಇಲ್ಲ. ಇದು ನಮ್ಮ ಕಾನೂನು ಸುವ್ಯವಸ್ಥೆಯ ದುರ್ಬಲತೆಯನ್ನು ತೋರಿಸುತ್ತದೆ. ನಮ್ಮ ಜನಪ್ರತಿನಿಧಿ ಹಾಗೂ ಸರ್ಕಾರಗಳು ಇದರ ಕುರಿತು ಗಂಭೀರವಾಗಿ ಯೋಚಿಸಬೇಕಾಗಿದೆ. ಇಂಥಹ ಘಟನೆಗಳಿಂದ ವೈದ್ಯರ ಮನೋಬಲ ಕುಗುತ್ತದೆ.ವೈದ್ಯರು ನಿರ್ಭೀತಿಯಿಂದ ಸಾರ್ವಜನಿಕರ ಸೇವೆಯನ್ನು ನೀಡುವ ಅವಕಾಶ ಕಲ್ಪಿಸಬೇಕಾಗಿದೆ.ಯುವ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಇಂದು ಭಾರತೀಯ ಸಂಘವು ತುರ್ತು ಸೇವೆ ಹೊರತುಪಡಿಸಿ ಇತರೆ ಎಲ್ಲಾ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಇಂದು ಪ್ರತಿಭಟನೆಗೆ ಕರೆ ನೀಡಿದೆ.ಇದಕ್ಕೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದೇವೆ. ಇಂಥಹ ಘಟನೆಗಳು ಮತ್ತೆ ಮರುಕಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದರು. ಪ್ರತಿಭಟನೆಯಲ್ಲಿ ಡಾ.ವಿ.ಎಸ್. ಕಾರ್ಚಿ.ಡಾ.ಎನ್. ಎಲ್. ಶೆಟ್ಟಿ.ಡಾ.ಐ.ಬಿ.ತಳ್ಳೊಳ್ಳಿ.ಡಾ. ಸರೋಜಿನಿ ತೊನಶ್ಯಾಳ.ಡಾ.ಶ್ರೀಮತಿ ಕೆ.ಎಸ್.ಸಜ್ಜನ.ಡಾ.ಗಂಗಾಂಬಿಕಾ ಪಾಟೀಲ.ಡಾ. ಶ್ರೀಮತಿ ಹಜೇರಿ. ಶ್ರೀಮತಿ ಡಾ.ಪಿ.ಎ.ಭಟ್. ಡಾ.ಆರ್.ಎಂ.ಕೊಳ್ಯಾಳ.ಡಾ. ವಿಜಯಕುಮಾರ ಅಮಲ್ಯಾಳ.ಡಾ.ಎ.ಎ.ನಾಲಬಂದ.ಡಾ.ಪ್ರಭುಗೌಡ ಅಸ್ಕಿ.ಡಾ.ಜಿ.ಎ.ಚಿತ್ತರಗಿ.ಡಾ.ನಜೀರ ಕೊಳ್ಯಾಳ.ಡಾ.ಸಂತೋಷ ಕೊಂಗಂಡಿ.ಡಾ.ಎಂ.ಎಸ್.ಪಾಟೀಲ.ಡಾ.ಡೋಣಿ.ಡಾ.ನಾಗೂರ.ಡಾ.ಇಲಿಯ್ಯಾಸ ಬೇಪಾರಿ.ಡಾ.ಸುರೇಶ ಹಂಚಾಟೆ. ಪ್ಯಾರಾ ಮೆಡಿಕಲ್ಸ್. ಲ್ಯಾಬ್ ಟೆಕ್ನಿಷಿಯನ್ಸ್ ಹಾಗೂ ನರ್ಸ್ ಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

