ಆಲಮಟ್ಟಿ: ನಮ್ಮ ದೇಶದ ಇತಿಹಾಸ, ಪರಂಪರೆ, ಸಂಸ್ಕೃತಿಗಳು ದಿವ್ಯಾನು ದಿವ್ಯತೆಯುಳ್ಳ ಭವ್ಯಾನುಭೂತಿಯ ಪರದಿಯಲ್ಲಿ ಕೂಡಿವೆ. ಅವು ಅನ್ಯ ದೇಶಗಳ ಮೇಲೆ ಪ್ರಭಾವ ಬೀರಿವೆ. ವಿವಿಧೆತೆಯಲ್ಲಿ ಏಕತೆ ಸಾಧಿಸಿ ಜಗದೆಡೆಗಳಲ್ಲಿ ಭಾರತ ಮಿನುಗುತ್ತಿದೆ ಎಂದು ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಅಭಿಪ್ರಾಯಿಸಿದರು.
ಗುರುವಾರ ಸ್ಥಳೀಯ ಎಸ್.ವ್ಹಿ. ವ್ಹಿ. ಸಂಸ್ಥೆಯ ರಾವಬಹದ್ದೂರ ಡಾ,ಫ.ಗು.ಹಳಕಟ್ಟಿ (ಆರ್.ಬಿ.ಪಿ.ಜಿ) ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ೭೮ ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಶಿಕ್ಷಕ ಎನ್.ಎಸ್.ಬಿರಾದಾರ, ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎಚ್.ನಾಗಣಿ ಮಾತನಾಡಿದರು.
ಅತಿಥೇಯ ಶಾಲೆ ಹಾಗೂ ಅಂಗಸಂಸ್ಥೆಯ ಎಂಎಚ್‌ಎಂ ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಡಿಸ್ ಪ್ಲೇ ಚಟುವಟಿಕೆಗಳಲ್ಲಿ ಹಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಪ್ರೌಢಶಾಲಾ ಮಕ್ಕಳ ಶಿಸ್ತು ಬದ್ಧ ಪಥಸಂಚಲನ ಆಕರ್ಷಿಸಿತು.
ಮುಖ್ಯ ಗುರು ಗೌರವ ವಂದನೆ ಸ್ವೀಕರಿಸಿದರು. ದೇಶಭಕ್ತಿ ಗೀತ ಗಾಯನಗಳಿಗೆ ಎಂಎಚ್‌ಎಂ ಆಂಗ್ಲ ಶಾಲೆ ಪುಟಾಣಿ ಬಾಲೆಯರು, ಹಳಕಟ್ಟಿ ಹೈಸ್ಕೂಲ್ ವಿದ್ಯಾರ್ಥಿನಿಯರು ನೃತ್ಯ ಮಾಡಿ ಖುಷಿಪಟ್ಟರು. ಚುಟುಕು ಭಾಷಣ, ವೇಷಭೂಷಣದ ರೂಪಕಗಳಲ್ಲಿ ಪುಟ್ಟ ಮಕ್ಕಳು ಗಮನ ಸೆಳೆದರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಎಂಎಚ್‌ಎಂ ಆಂಗ್ಲ ಮಾದ್ಯಮ ಶಾಲೆ ಮುಖ್ಯ ಗುರುಮಾತೆ ತನುಜಾ ಪೂಜಾರಿ, ಸರೋಜಾ ಕಬ್ಬೂರ, ಕಾಂಚನಾ ಕುಂದರಗಿ, ಕವಿತಾ ಮರಡಿ, ಶಂಕ್ರಮ್ಮ ಗುಳೇದಗುಡ್ಡ, ಮಂಜುಳಾ ಸಂಗಾಪುರ,ಅಡುಗೆ ಮಾತೆಯರಾದ ವಿದ್ಯಾ ಮಹೇಂದ್ರಕರ, ರೇಣುಕಾ ಶಿವಣಗಿ, ದಾನಾಬಾಯಿ ಲಮಾಣಿ, ಶ್ರೀಧರ ಚಿಮ್ಮಲಗಿ, ಸಿಂಧೆ,ಸಚೀನ ಹೆಬ್ಬಾಳ, ಫಕ್ಕೀರಪ್ಪ ನಾಯ್ಕರ, ಶೇಖು ಲಮಾಣಿ, ಗೋಪಾಲ ಬಸಪ್ಪ ಒಡ್ಡರ ಇತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

