Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಯೋಗದಿಂದ ಆರೋಗ್ಯ ವೃದ್ಧಿ :ಡಾ.ಪ್ರಭುಸಾರಂಗದೇವ ಶ್ರೀ
(ರಾಜ್ಯ ) ಜಿಲ್ಲೆ

ಯೋಗದಿಂದ ಆರೋಗ್ಯ ವೃದ್ಧಿ :ಡಾ.ಪ್ರಭುಸಾರಂಗದೇವ ಶ್ರೀ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸಿಂದಗಿ: ಯೋಗ ಮಾಡುವುದರ ಉದ್ದೇಶ ಆರೋಗ್ಯ ಪಡೆಯಬೇಕೆಂಬುದಲ್ಲ ಈ ಜೀವಿತ ಶರೀರ ಸಮಾಧಿಯನ್ನು ತಲುಪಬೇಕೆಂಬುವುದು. ಸಮಾಧಿ ತಲುಪುವ ಯೋಗ ನಾವು ಮಾಡಿದರೆ ಆರೋಗ್ಯ ತನ್ನಿಂತಾನೆ ಬರುತ್ತದೆ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ಅವರು ಪಟ್ಟಣದ ಎಚ್‌ಜಿ ಕಾಲೇಜಿನ ಆವರಣದಲ್ಲಿ ಯೋಗೋತ್ಸವ ಸಮಿತಿ ವತಿಯಿಂದ ನಿರಂತರ ೨೧ದಿನಗಳ ಕಾಲ ಹಮ್ಮಿಕೊಂಡಿರುವ ಯೋಗ, ಧ್ಯಾನ ಶಿಬಿರದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಪುರಾತನ ಕಾಲದಲ್ಲಿ ಋಷಿ ಮುನಿಗಳ ದೀರ್ಘಕಾಲದ ಆರೋಗ್ಯದ ಬದುಕಿನ ಗುಟ್ಟೆಂದರೆ ಅದು ಯೋಗ ಸಾಧನೆ. ಪ್ರಸ್ತುತ ದಿನಗಳಲ್ಲಿ ಯುವ ಜನತೆ ದೈಹಿಕ ಚಟುವಟಿಕೆಗಳಿಗೆ ಪೂರಕವಾದ ಆಟ ಪಾಠಗಳಿಲ್ಲದ ಆಲಸ್ಯಮಯ ಜೀವನಶೈಲಿ ಹಾಗೂ ಅಹಿತಕರ, ಇತಿಮಿತಿ ಇಲ್ಲದ ಆಹಾರ ಶೈಲಿಯೂ ಆರೋಗ್ಯಕ್ಕೆ ಮಾರಕವಾಗುತ್ತಿದೆ. ಇದನ್ನು ತಪ್ಪಿಸಲು ದಿನನಿತ್ಯ ಯೋಗ ಸಾಧನೆ ಮಾಡಬೇಕು ಎಂದ ಅವರು ಶಾಸಕ ಮನಗೂಳಿ ಹಾಗೂ ಯೋಗೋತ್ಸವ ಸಮಿತಿಯ ಸಂಗಡಿಗರು ಹಮ್ಮಿಕೊಂಡಿರುವ ಈ ಕಾರ್ಯ ಶ್ಲಾಘನೀಯ ಎಂದರು.
ಈ ವೇಳೆ ಶಾಸಕ ಅಶೋಕ ಮನಗೂಳಿ ಮಾತನಾಡಿ, ಆಧುನಿಕ ಒತ್ತಡದ ಜೀವನದಲ್ಲಿ ನಮಗರಿಯದಂತೆ ಸಾಕಷ್ಟು ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ನಾವು ತುತ್ತಾಗುತ್ತಿದ್ದೇವೆ. ಇವುಗಳಿಂದ ದೂರವಿರುವ ಇರಬೇಕಾದರೆ ನಾವು ಪ್ರತಿನಿತ್ಯ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಮತ್ತು ಧ್ಯಾನದಂತಹ ಸಾಧನೆಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡು ಆರೋಗ್ಯವಂತರಾಗಿರಬೇಕು. ೨೧ ದಿನಗಳ ಕಾಲ ನಡೆಯುವ ಧ್ಯಾನ ಯೋಗ ಮತ್ತು ಪ್ರವಚನ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಇದೇ ಸಂದರ್ಭದಲ್ಲಿ ಯೋಗ ಹಾಗೂ ಪ್ರವಚನಗಳನ್ನು ನಡೆಸಿಕೊಡುತ್ತಿರುವ ಹಿಮಾಲಯದ ಯೋಗ ಸಾಧಕ ಯೋಗ ಗುರು ನಿರಂಜನ ಶ್ರೀಗಳು ಮಾತನಾಡಿ, ಮೊಸಳೆ ಹಾವುಗಳಂತಹ ಪ್ರಾಣಿಗಳು ಶತಾಯುಶಿಗಳು. ದೀರ್ಘಾಯುಷ್ಯದ ಗುಟ್ಟೆಂದರೆ ದೀರ್ಘ ಶ್ವಾಸ. ಮನುಷ್ಯ ನಿಮಿಷಕ್ಕೆ ೭೨ ಬಾರಿ ಉಸಿರಾಡಿದರೆ ಈ ಪ್ರಾಣಿಗಳು ನಿಮಿಷಕ್ಕೆ ನಾಲ್ಕಾರು ಬಾರಿ ಮಾತ್ರ ಉಸಿರಾಡುತ್ತವೆ. ಒಟ್ಟಾರೆ ದೀರ್ಘ ಶ್ವಾಸ ಆರೋಗ್ಯ ಮತ್ತು ಆಯುಷ್ಯವನ್ನು ವೃದ್ಧಿಸುತ್ತವೆ ಎಂದು ಕಿವಿಮಾತು ಹೇಳಿದರು.
ಯೋಗಾದಲ್ಲಿ ರಾಂಪುರ ಆರೂಡಮಠದ ನಿತ್ಯಾನಂದ ಮಹಾಸ್ವಾಮಿಗಳು ಸಮಿತಿಯ ಗೌರವಾಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ, ಡಾ.ಅರವಿಂದ ಮನಗೂಳಿ, ಅಶೋಕ ಅಲ್ಲಾಪುರ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಮಲ್ಲಿಕಾರ್ಜುನ್ ಹಂಗರಗಿ, ಆನಂದ ಶಾಬಾದಿ, ಮಲ್ಲಿಕಾರ್ಜುನ ಅಲ್ಲಾಪುರ, ಡಾ.ಶ್ರೀಶೈಲ್ ಪಾಟೀಲ್, ಡಾ.ಮಹಾಂತೇಶ್ ಹಿರೇಮಠ, ಶಿವಾನಂದ ಕಲಬುರ್ಗಿ, ಎಂ.ಆರ್.ಹೆಗ್ಗಣದೊಡ್ಡಿ, ಸುರೇಶ್ ಪೂಜಾರಿ, ಸಂಗನಬಸವ ಬಿರಾದಾರ, ಅಂಬರೀಶ್ ಬಿರಾದರ್, ಸಾಯಬಣ್ಣ ಪುರದಾಳ, ರಾಜು ನರಗೋದಿ, ಮುತ್ತು ಪಟ್ಟಣಶೆಟ್ಟಿ, ಮಹಾನಂದ ಬಮ್ಮಣ್ಣಿ, ಶೈಲಶ್ರೀ ಪಟ್ಟಣಶೆಟ್ಟಿ, ಶೋಭಾ ಚಿಗರಿ, ಡಾ.ಸೀಮಾ ವಾರದ, ಸೇರಿದಂತೆ ಹಲವರಿದ್ದರು.
ದೈಹಿಕ ನಿರ್ದೇಶಕ ರವಿ ಗೋಲಾ, ಉಪನ್ಯಾಸಕ ಸಿದ್ದಲಿಂಗ ಕಿಣಗಿ ಕಾರ್ಯಕ್ರಮ ನಿರೂಪಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್
    In (ರಾಜ್ಯ ) ಜಿಲ್ಲೆ
  • ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ
    In (ರಾಜ್ಯ ) ಜಿಲ್ಲೆ
  • ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ
    In ವಿಶೇಷ ಲೇಖನ
  • ಸರಗೂರು ತಾಲೂಕಿನಲ್ಲಿ ನಿಲ್ಲದ ಕಾಡುಪ್ರಾಣಿ-ಮಾನವ ಸಂಘರ್ಷ
    In (ರಾಜ್ಯ ) ಜಿಲ್ಲೆ
  • ಕೇವಲ ಅಂಕ ಗಳಿಕೆ ಶಿಕ್ಷಣವಲ್ಲˌ ತಹಶೀಲ್ದಾರ ಅನೀಲ ಬಡಿಗೇರ
    In (ರಾಜ್ಯ ) ಜಿಲ್ಲೆ
  • ಸಾರ್ವಜನಿಕ ಬ್ಯಾಂಕುಗಳಿಂದ ಆರ್ಥಿಕ ಸಾಕ್ಷರತೆ ಸಪ್ತಾಹ
    In (ರಾಜ್ಯ ) ಜಿಲ್ಲೆ
  • ಶನಿವಾರ ವಿದ್ಯುತ್ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಆಂಧ್ರದಲ್ಲಿ ಕೆ.ಜಿ ತಂಬಾಕಿಗೆ 400, ಕರ್ನಾಟಕದಲ್ಲಿ ಕೇವಲ 292 ರೂ.ಹೆಚ್ ಡಿ ಕೋಟೆಯಲ್ಲಿ ಹರಾಜು ಮಾರುಕಟ್ಟೆ ಬಂದ್, ರೈತರ ಆಕ್ರೋಶ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ವಿತರಣೆಉದಯರಶ್ಮಿ ದಿನಪತ್ರಿಕೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.