ಮುದ್ದೇಬಿಹಾಳ: ಅ.೨೦ ರಿಂದ ೨೨ ರವರೆಗೆ ಪಟ್ಟಣದ ಮಹಾಂತೇಶ ನಗರದಲ್ಲಿರುವ ಶ್ರೀ ಗುರು ರಾಘವೇಂದ್ರ ಮಹಾಸ್ವಾಮಿಗಳ ಬೃಂದಾವನ ಸನ್ನಿಧಿಯಲ್ಲಿ ಗುರು ರಾಯರ ೩೫೩ನೇ ಆರಾಧನಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅ.೨೦ ರಂದು ಬೆಳಿಗ್ಗೆ ೬ಗಂಟೆಗೆ ಸುಪ್ರಭಾತ, ೭ಕ್ಕೆ ಗೋ-ಪೂಜೆ, ಧ್ವಜಾರೋಹಣ, ೮ಕ್ಕೆ ವಾಯುಸ್ತುತಿ, ಅಷ್ಟೋತ್ತರ, ಪಂಚಾಮೃತ ಅಭಿಷೇಕ ಅಲಂಕಾರ, ೧೦ಕ್ಕೆ ರುದ್ರಾಭಿಷೇಕ, ೧೧ಕ್ಕೆ ಪ್ರವಚನ, ೧೨ಕ್ಕೆ ಸುಮಂಗಲೆಯರಿಂದ ಶ್ರೀ ಲಕ್ಷ್ಮೀ ಶೋಬಾನೆಯೊಂದಿಗೆ ಕುಂಕುಮಾರ್ಚನೆ, ಮಧ್ಯಾಹ್ನ ೧ರಿಂದ೩ ರವರೆಗೆ ತೀರ್ಥ ಪ್ರಸಾದ, ಸಂಜೆ ೭-೩೦ ಕ್ಕೆ ಶಿರಸಿಯ ಗಾಯತ್ರಿ ಭಟ್ ಇವರಿಂದ ಕೀರ್ತನೆ, ೧೦ಕ್ಕೆ ಮಹಾ ಮಂಗಳಾರುತಿ.
ಅ.೨೧ ರಂದು ೬ಗಂಟೆಗೆ ಸುಪ್ರಭಾತ, ೮ಕ್ಕೆ ವಾಯುಸ್ತುತಿ, ಅಷ್ಟೋತ್ತರ, ಪಂಚಾಮೃತ ಅಭಿಷೇಕ ಅಲಂಕಾರ, ೧೦ಕ್ಕೆ ಮನ್ಯುಸೂಕ್ತ ಹೋಮ, ೧೧ಕ್ಕೆ ಲಕ್ಷ ಪುಷ್ಪಾರ್ಚನೆ, ಮದ್ಯಾಹ್ನ ೧ರಿಂದ೩ ರವರೆಗೆ ತೀರ್ಥ ಪ್ರಸಾದ, ಸಂಜೆ ೭-೩೦ ಕ್ಕೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ವಿಜ್ ಕಾರ್ಯಕ್ರಮ, ೧೦ಕ್ಕೆ ಮಹಾ ಮಂಗಳಾರುತಿ.
ಅ.೨೨ ರಂದು ೬ಗಂಟೆಗೆ ಸುಪ್ರಭಾತ, ೮ಕ್ಕೆ ವಾಯುಸ್ತುತಿ, ಅಷ್ಟೋತ್ತರ, ಪಂಚಾಮೃತ ಅಭಿಷೇಕ ಅಲಂಕಾರ, ೧೦ಕ್ಕೆ ಮನ್ಯುಸೂಕ್ತ ಹೋಮ, ೧೧ಕ್ಕೆ ಲಕ್ಷ ಪುಷ್ಪಾರ್ಚನೆ, ೧೦ರಿಂದ ರಥೋತ್ಸವ, ಭಜನೆ, ನೃತ್ಯ ಸೇವೆ. ಮದ್ಯಾಹ್ನ ೧ರಿಂದ೩ ರವರೆಗೆ ತೀರ್ಥ ಪ್ರಸಾದ, ಸಂಜೆ ೭ ಕ್ಕೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ೯ಕ್ಕೆ ಬಹುಮಾನ ವಿತರಣೆ, ವಂದಾನಾರ್ಪಣೆ, ೧೦ಕ್ಕೆ ಮಹಾ ಮಂಗಳಾರುತಿ ಹೀಗೆ ವಿವಿಧ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ಜೊತೆಗೆ ಅ.೧೭ ರಿಂದ ೨೨ ರವೆರೆಗೆ ಪ್ರತಿದಿನ ಸಂಜೆ ೭ರಿಂದ ೮ರವರೆಗೆ ಸತ್ಸಂಗ ಸದಸ್ಯರಿಂದ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಲಿದ್ದು ಸಕಲ ಸದ್ಭಕ್ತರು ಆಗಮಿಸಿ ಶ್ರೀ ರಾಯರ ಕೃಪೆಗೆ ಪಾತ್ರರಾಗುವಂತೆ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
