Subscribe to Updates
Get the latest creative news from FooBar about art, design and business.
Author: editor.udayarashmi@gmail.com
ತಿಕೋಟಾ: ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾಗಿ ಶೇಖಸಾಬ ಮುಲ್ಲಾ ಹಾಗೂ ಉಪಾಧ್ಯಕ್ಷರಾಗಿ ಭೀಮವ್ವಾ ದೊಡಮನಿ ಆಯ್ಕೆಯಾಗಿದ್ದಾರೆ.
ಯಡ್ರಾಮಿ: ಕೊಲ್ಕಾತ್ತಾದಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಹಾಗೂ ಬರ್ಬರ ಹತ್ಯೆ ನಡೆದಿರುವುದು ಅಮಾನುಷ ಕೃತ್ಯವಾಗಿದೆ. ಈ ಪ್ರಕರಣದಲ್ಲಿ ನಿಷ್ಪಕ್ಷವಾಗಿ ತನಿಖೆ ನಡೆಸಿ ವಿದ್ಯಾರ್ಥಿನಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಖಾಸಗಿ ವೈದ್ಯಾಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಡಾ.ವ್ಹಾಯ್.ಎ.ಛಾಯಗೋಳ ಆಗ್ರಹಿಸಿದರು.ಯಡ್ರಾಮಿ ಪಟ್ಟಣದ ತಹಸೀಲ್ ಕಛೇರಿಯಲ್ಲಿ ಶನಿವಾರ ಐಎಮ್ಎ (ಭಾರತೀಯ ವೈದ್ಯಕೀಯ ಸಂಘ) ನೀಡಿರುವ ಮುಷ್ಕರಕ್ಕೆ ಬೆಂಬಲ ಸೂಚಿಸಿ ಖಾಸಗಿ ವೈದ್ಯಾಧಿಕಾರಿಗಳ ಸಂಘದಿಂದ ಗ್ರೇಡ್-2 ತಹಸೀಲ್ದಾರ್ ಸತ್ಯಪ್ರಸಾದ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಸಾರ್ವಜನಿಕರಿಗಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ವೈದ್ಯರ ಮೇಲೆ ಹಲ್ಯೆಯಂತಹ ಪ್ರಕರಣಗಳು ನಡೆಯುತ್ತಿವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಹಾಗೂ ಕಠಿಣ ಕಾನೂನು ಜಾರಿಗೆ ತರಬೇಕು ಎಂದರು.ಈ ವೇಳೆ ವೈದ್ಯರಾದ ಡಾ.ಎಮ್.ಎಮ್. ಬಿರಾದಾರ, ಡಾ.ರವೀಂದ್ರ, ಡಾ.ಶಿವಪ್ರಸಾದ ಪಾಟೀಲ, ಡಾ.ಪ್ರಕಾಶ ಹವಲ್ದಾರ, ಡಾ.ಉಮೇಶ ಬದ್ರಶೆಟ್ಟಿ, ಡಾ.ಪ್ರಭು ಪೊಲೀಸಪಾಟೀಲ, ಡಾ.ಎಮ್.ಎಮ್.ಗುಡ್ನಾಳ, ಡಾ.ರಾಹುಲಗೌಡ ಬಿರಾದಾರ, ಡಾ.ವಿನೋದ ರಾಠೋಡ, ಡಾ.ಶರಣು ನೂಲಾ, ಡಾ.ಲಂಕೇಶ, ಡಾ.ಅನೀಲಕುಮಾರ, ಡಾ.ಮಹಾಂತೇಶ ಹಾಗೂ ಪ್ರಮುಖರಾದ…
ಬಸವನಬಾಗೇವಾಡಿ: ಪಟ್ಟಣದಲ್ಲಿರುವ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಎರಡು ಸ್ಥಾನಗಳು ರಾಜೀನಾಮೆಯಿಂದ ತೆರುವಾದ ಹಿನ್ನೆಲೆಯಲ್ಲಿ ಶನಿವಾರ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅಮರೇಶ ಹಣಮಂತ್ರಾಯ ನಾಡಗೌಡ, ಉಪಾಧ್ಯಕ್ಷರಾಗಿ ಬಿ.ಎಸ್.ಇಜೇರಿ ಅವರು ಅವಿರೋಧ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ನಜೀರಅಹ್ಮದ ಅವಟಿ ಘೋಷಿಸಿದರು.ಈ ಎರಡು ಸ್ಥಾನಗಳಿಗೆ ತಲಾ ಒಬ್ಬೊಬ್ಬರೇ ನಾಮಪತ್ರ ಸಲ್ಲಿಕೆ ಮಾಡಿದ್ದರು. ೨೦೨೪-೨೫ ನೇ ಸಾಲಿಗೆ ಅಧ್ಯಕ್ಷರಾಗಿ,ಉಪಾಧ್ಯಕ್ಷರಾಗಿ ಆಯ್ಕೆಯಾದ ಅಮರೇಶ ಹಣಮಂತ್ರಾಯ ನಾಡಗೌಡ, ಬಿ.ಎಸ್.ಇಜೇರಿ ಅವರನ್ನು ಸೊಸಾಯಿಟಿಯ ನಿರ್ದೇಶಕರು, ನಿವೃತ್ತ ಶಿಕ್ಷಕರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯಶಿಕ್ಷಕರಾದ ಎಸ್.ಜಿ.ಮೊಕಾಶಿ, ಎಸ್.ಜಿ.ಪಾಟೀಲ ಮಾತನಾಡಿ, ನಮ್ಮ ಕಾಲಾವಧಿಯಲ್ಲಿ ಅಮರೇಶ ನಾಡಗೌಡ ಅವರ ತಂದೆ ನಿವೃತ್ತ ಶಿಕ್ಷಕ ದಿ.ಎಚ್.ಎ.ನಾಡಗೌಡ ಸೇರಿದಂತೆ ನಾವು ಹಾಗೂ ಅನೇಕರು ಸೊಸಾಯಿಟಿಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ದಿ.ಎಚ್.ಎ.ನಾಡಗೌಡ ಅವರು ಸೊಸಾಯಿಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಜೊತೆಗೆ ಸಮಸ್ತ ಶಿಕ್ಷಕರ ಬಾಂಧವರ ಸಹಕಾರದೊಂದಿಗೆ ಸೊಸಾಯಿಟಿಗೆ ಪ್ರಗತಿಗೆ ಸೇವೆ ಸಲ್ಲಿಸುವ ಮೂಲಕ ಸೊಸಾಯಿಟಿಯ ಪ್ರಗತಿಗೆ ನಾಂದಿ ಹಾಡಿದ್ದಾರೆ. ಇದೀಗ ಅವರ ಪುತ್ರ ಸೊಸಾಯಿಟಿಯ…
ಬಸವನಬಾಗೇವಾಡಿ: ೨೦೨೩-೨೪ ನೇ ಸಾಲಿನಲ್ಲಿ ಸಂಘವು ರೂ. ೫೯.೩೮ ಲಕ್ಷಗಳ ಆದಾಯವನ್ನು ಹೊಂದಿದ್ದು. ಒಟ್ಟು ರೂ. ೫೧೩.೭೬ ವೆಚ್ಚವಾಗಿದೆ. ಗರಿಷ್ಠ ಆದಾಯದಲ್ಲಿ ವೆಚ್ಚವನ್ನು ತೆಗೆದು ಒಟ್ಟು ರೂ.೭೬.೬೨ ಲಕ್ಷ ನಿವ್ವಳ ಲಾಭ ಹೊಂದಿದೆ ಎಂದು ಸ್ಥಳೀಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಹೇಳಿದರು.ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆವರಣದಲ್ಲಿ ಶನಿವಾರ ಜರುಗಿದ ೨೦೨೩-೨೪ ನೇ ಸಾಲಿನ ೮೦ ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಸಂಘವು ಬಸವನಬಾಗೇವಾಡಿ ಪುರಸಭೆ ವ್ಯಾಪ್ತಿ ಒಳಪಟ್ಟಿರುತ್ತದೆ. ಮಾ.೩೧ ರವರೆಗೆ ೬,೮೧೮ ಸದಸ್ಯರನ್ನು ಹೊಂದಿದೆ. ಒಟ್ಟು ಶೇರು ಬಂಡವಾಳ ರೂ. ೪೬೨.೩೦ ಲಕ್ಷ ಇದೆ. ದುಡಿಯುವ ಬಂಡವಾಳಕ್ಕೆ ಶೇ.೬.೫೬ ಇರುವುದು. ಒಟ್ಟು ನಿಽಗಳು ರೂ. ೮೬೧.೭೦ ಲಕ್ಷ ಇದೆ. ಇದು ದುಡಿಯುವ ಬಂಡವಾಳಕ್ಕೆ ಶೇ.೧೨.೨೨ ರಷ್ಟು ಇದೆ. ಒಟ್ಟು ಠೇವಣಿ ರೂ. ೪,೩೭೪.೦೪ ಲಕ್ಷ ಇದೆ. ಪ್ರತಿವರ್ಷವೂ ಠೇವಣಿ ಹೆಚ್ಚಳವಾಗಿರುವುದು ಠೇವುದಾರರು…
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಾಲಾ-ಕಾಲೇಜುಗಳ ನೌಕರರ ಸಂಘ ಮನವಿ ವಿಜಯಪುರ: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ (ರಿ) ಅನುದಾನಿತ ಶಾಲಾ ಕಾಲೇಜುಗಳ ನೌಕರರ ಪ್ರಮುಖ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ಖಾಸಗಿ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ (ವೇತನ, ನಿವೃತ್ತಿ ವೇತನ ಮತ್ತು ಇತರೆ ಸೌಲಭ್ಯಗಳ ನಿಯಂತ್ರಣ) ವಿಧೇಯಕ ೨೦೧೪ ಕ್ಕೆ ತಿದ್ದುಪಡಿ ತಂದು ಅಥವಾ ರದ್ದುಪಡಿಸಿ ಭವಿಷ್ಯವರ್ತಿಯಾಗಿ ಜಾರಿಗೆ ಬರುವಂತೆ ಕ್ರಮವಹಿಸುವ ಮೂಲಕ ದಿನಾಂಕ: ೦೧-೦೪-೨೦೦೬ರ ಪೂರ್ವದಲ್ಲಿ ನೇಮಕವಾಗಿ ನಂತರ ಅನುದಾನಕ್ಕೆ ಒಳಪಟ್ಟ ನೌಕರರ ಅನುದಾನಕ್ಕೂ ಪೂರ್ವದ ಸೇವೆಯನ್ನು ಕೇವಲ ಪಿಂಚಣಿ ಸೌಲಭ್ಯಕ್ಕೆ ಮಾತ್ರ ಪರಿಗಣಿಸಿ “ಹಳೆಯ ನಿಶ್ಚಿತ ಪಿಂಚಣಿ” ಸೌಲಭ್ಯ ನೀಡುವುದು. ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ (ಓಪಿಎಸ್) ವನ್ನು ಜಾರಿಗೊಳಿಸುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.ಒಂದು ವೇಳೆ ಸೆ.೫ ರ ಶಿಕ್ಷಕರ ದಿನಾಚರಣೆಯ ಒಳಗಾಗಿ…
ವಿಜಯಪುರ:ನಗರದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವಿಜಯಪುರ ಹಾಗೂ ಅಲ್ ಹಸ್ನಾತ ಪದವಿ ಪೂರ್ವ ಕಾಲೇಜು ವಿಜಯಪುರ ಸಂಯುಕ್ತ ಆಶ್ರಯದಲ್ಲಿ ನಡೆದ ೨೦೨೪-೨೫ ನೇ ಸಾಲಿನ ವಿಜಯಪುರ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಪ್ರಾಚಾರ್ಯ ಎಲ್ ಆರ್ ಹಳ್ಳದಮನಿ ಉದ್ಘಾಟಿಸಿ ಮಾತನಾಡಿ, ಕ್ರೀಡೆ ಮಕ್ಕಳ ಮನಸ್ಸಿಗೆ ಮುದ ನೀಡುತ್ತದೆ. ವಿದ್ಯಾರ್ಥಿಗಳನ್ನು ದೈಹಿಕ ಹಾಗೂ ಮಾನಸಿಕವಾಗಿ ವಿಶಾಲಗೊಳಿಸುತ್ತದೆ ಎಂದು ಹೇಳಿದರು.ಮಕ್ಕಳ ಮನಸ್ಸು ಕಲಿಕೆಯತ್ತ ಸಾಗಿಸಲು ದೈಹಿಕ ಶಿಕ್ಷಣದ ಅವಶ್ಯಕತೆ ಇದೆ. ಮಕ್ಕಳು ದೈನಂದಿನ ಕೆಲಸ ಕಾರ್ಯಗಳ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸಿ ಎಂದು ಅಲ್ ಹಸ್ನಾತ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎ ಎ ಬಿಜಾಪುರ ಹೇಳಿದರು.ಅಲ್ ಹಸ್ನಾತ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ ಡಿ ರೂಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎ ಎ ಶಟಗಾರ, ಉಪನ್ಯಾಸಕರಾದ ಬಿ ಎಸ್ ಗೌರಿ, ಕ್ರೀಡಾ ಸಂಯೋಜಕ ಎಸ್ ಆರ್ ಮುತ್ತಗಿ, ಗಣೇಶ ಗುನ್ನಾಪೂರ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್ ಎಸ್ ಹರಿಯಾಲ, ಪ್ರಾಥಮಿಕ…
ವಿಜಯಪುರ: ವಿಜಯಪುರ ಜಿಲ್ಲಾ ಹೂಗಾರ ಸಮಾಜ ಹಾಗೂ ಶ್ರೀ ಕಲ್ಮೇಶ್ವರ ಶೈವ ಗುರವ ಸಂಸ್ಥಾನ ಮಠ ಹಾವಿನಾಳ ಇವರ ಸಹಯೋಗದಲ್ಲಿ ಇತ್ತೀಚೆಗೆ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವು ಅದ್ಧೂರಿಯಾಗಿ ಜರುಗಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜ್ಞಾನ ಯೋಗಾಶ್ರಮದ ನಿಂಗಯ್ಯ ಶ್ರೀಗಳು ಆಗಮಿಸಿದ್ದರು. ಅಧ್ಯಕ್ಷತೆಯನ್ನು ಸಿದ್ದರಾಮಯ್ಯ ಮಠ,ದಿವ್ಯ ಸಾನಿಧ್ಯವನ್ನು ಶರಣಬಸವ ಶರಣರು ಚಿಂಚೋಳಿ, ಉದ್ಘಾಟಕರಾಗಿ ಬಿ ಎಸ್ ಬಿರಾದಾರ, ಸಮಾಜದ ಜಿಲ್ಲಾಧ್ಯಕ್ಷರಾದ ಸಂಗಮೇಶ ಗುರವ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಹೂಗಾರ ಸಮಾಜದ ೨೦೨೩-೨೪ನೇ ಸಾಲಿನ ಪ್ರತಿಭಾನ್ವಿತ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಸೇರಿದಂತೆ ಸಮಾಜದ ಪರವಾಗಿ ಶಿಕ್ಷಣ,ಕ್ರೀಡೆ, ಸಾಮಾಜಿಕ ಸೇವೆ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಎಲ್ಲಾ ತಾಲೂಕು ಅಧ್ಯಕ್ಷರುಗಳು ಸೇರಿದಂತೆ ಸಮಾಜದ ಎಲ್ಲ ಬಾಂಧವರು ಭಾಗವಹಿಸಿದ್ದರು.ಪ್ರಸಾದ( ಸುರೇಶ)ಪೂಜಾರಿ ನಿರೂಪಿಸಿದರು.
ವಿಜಯಪುರ: ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರಗೆಳೆದು ವೇದಿಕೆ ಒದಗಿಸಿದಾಗ ಅಗಾಧ ಜ್ಞಾನ ಹೊರಬರುತ್ತದೆ ಎಂದು ರವೀಂದ್ರನಾಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಉಮಾ ಭೋಸಲೆ ಹೇಳಿದರು.ನಗರದ ಗುರುದೇವ ಇಂಟರನ್ಯಾಶನಲ್ ಪ್ರೌಡಶಾಲೆಯಲ್ಲಿ ಹಮ್ಮಿಕೊಂಡ ಗಣಿತ ಹಬ್ಬ ಉದ್ಘಾಟಿಸಿ ಪ್ರಥಮ ಸ್ಥಾನ ಪಡೆದ ಕುಮಾರಿ ಮಿನಾಜ್ ಕಬೂಲ್ ಕೊಕಟನೂರ ಇವಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದ ಅವರು, ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಪ್ರತಿಭೆ ಇರುತ್ತದೆ ಅದನ್ನು ಒರೆಗೆ ಹಚ್ಚಿ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೆಪಿಸಬೇಕು. ಅದನ್ನು ನಮ್ಮ ಶಾಲೆಯ ಶಿಕ್ಷಕರು ಉತ್ತಮ ರೀತಿಯಲ್ಲಿ ಮಾಡುತ್ತಿದ್ದಾರೆ. ಪ್ರತಿ ವರ್ಗದಲ್ಲಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಬೇಕು ಜೀವನ ಮಾರ್ಗ ಕಲಿಸುವತ್ತ ಗಮನ ಹರಿಸಬೇಕೆಂದರು.೧೦ನೇ ವರ್ಗದ ಶಿಕ್ಷಕಿ ತಹಸೀನ್ ದಫೇದಾರ ಮಾತನಾಡಿ,ಮಕ್ಕಳಲ್ಲಿ ಕ್ರೀಯಾಶೀಲತೆಯನ್ನು ಹೆಚ್ಚಿಸಲು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಅದರಲ್ಲಿ ನಮ್ಮ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ಮಿನಾಜ್ ಕೊಕಟನೂರ ಉತ್ತಮ ಮಾಡಲ್ ಮಾಡಿ ಪ್ರಥಮ ಸ್ಥಾನ ಪಡೆದಿದ್ದಾಳೆ ಎಂದರು.ಸಂಸ್ಥೆಯ ಅಧ್ಯಕ್ಷ ಡಾ. ರವೀಂದ್ರ ಭೋಸಲೆ ಅಧ್ಯಕ್ಷೆತೆ ವಹಿಸಿದ್ದರು.…
ಇಂಡಿ: ಓದುವ ಹವ್ಯಾಸವು ಮಕ್ಕಳಲ್ಲಿ ಶಬ್ದ ಭಂಡಾರ, ಗ್ರಹಿಕಾ ಸಾಮರ್ಥ್ಯ, ಏಕಾಗ್ರತೆಯ ಶಕ್ತಿ, ಭಾಷಾ ಕೌಶಲ,ವಿಮರ್ಶಾತ್ಮಕ ಚಿಂತನೆ, ತಾರ್ಕಿಕತೆ, ವಿಶ್ಲೇಷಣಾ ಸಾಮರ್ಥ್ಯ ಕಲ್ಪನಾ ಶಕ್ತಿ, ಸೃಜನಶೀಲತೆಯನ್ನು ಬೆಳೆಸುವಲ್ಲಿ ಅತ್ಯಂತ ಪ್ರಮುಖ ಸಾಧನವಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ‘ಓದುವ ಹವ್ಯಾಸ-ಜ್ಞಾನದ ವಿಕಾಸ’ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು.ಓದುವುದು ಜ್ಞಾನದ ಪ್ರಮುಖ ಬಾಗಿಲಾಗಿದೆ. ಈಹವ್ಯಾಸದಿಂದ ಮನಸ್ಸು ಉಲ್ಲಾಸಗೊಳ್ಳುವ ಜತೆಗೆ ನಮ್ಮಲ್ಲಿ ಜ್ಞಾನ ಹಾಗೂ ಕೌಶಲವನ್ನು ಹೆಚ್ಚಿಸುವುದರೊಂದಿಗೆ ನಮ್ಮ ಭವಿಷ್ಯ ನಿರ್ಮಾಣಕ್ಕೂ ದಾರಿದೀಪವಾಗುತ್ತದೆ. ಕಲಿಕೆ ಮತ್ತು ಓದು ಬದುಕಿನ ಅವಿಭಾಜ್ಯ ಅಂಗ ಎಂಬ ರೀತಿಯಲ್ಲಿ ಓದುವ ಅಭ್ಯಾಸವನ್ನು ಮಕ್ಕಳಲ್ಲಿ ರೂಢಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.ಶಿಕ್ಷಕಿ ಎಸ್ ಪಿ ಪೂಜಾರಿ ಮಾತನಾಡಿ, ವಿದ್ಯಾಭ್ಯಾಸವು ಜೀವನದ ಅತ್ಯಗತ್ಯವಾದ ಸಂಗತಿ. ಇದು ಬದುಕಿನಲ್ಲಿ ಉತ್ತಮ ಬೆಳವಣಿಗೆ ಹಾಗೂ ಭವಿಷ್ಯವನ್ನು ಸೃಷ್ಟಿಸುವುದು.ಅದರಲ್ಲೂ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಹೆಚ್ಚು ಬೆಳೆಸುವುದು ಅವಶ್ಯಕವಾಗಿದ್ದು, ಕಲಿಕೆಯೊಂದಿಗೆ ಓದು ಕೂಡ ಜೊತೆಯಲ್ಲಿ ಸಾಗಬೇಕು ಎಂದು ಹೇಳಿದರು.ಮುಖ್ಯ ಶಿಕ್ಷಕ ಎಸ್ ಎಸ್…
ವಿಜಯಪುರ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಷಯವಾರು ರಸಪ್ರಶ್ನೆ ಸ್ಪರ್ಧೆ ಸೇರಿದಂತೆ ಪಠ್ಯ ಚಟುವಟಿಕೆಗಳಿಗೆ ಪೂರಕವಾಗುವ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜ್ಞಾನದ ಮಟ್ಟ ವೃದ್ಧಿಸುತ್ತದೆ ಎಂದು ಬಂಜಾರಾ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಇ ಡಿ ಲಮಾಣಿ ಹೇಳಿದರು.ಶನಿವಾರದಂದು ಬಂಜಾರಾ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ‘ರಸಪ್ರಶ್ನೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ಪ್ರತಿ ಶನಿವಾರಕ್ಕೊಮ್ಮೆ ಇಂಥ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಹೆಚ್ಚಿನ ಫಲಿತಾಂಶವನ್ನು ಇದರಿಂದ ನಿರೀಕ್ಷಿಸಬಹುದು. ಶಿಕ್ಷಕರು ಪ್ರತಿಯೊಂದು ಮಗುವಿನ ವೈಯಕ್ತಿಕವಾಗಿ ಜ್ಞಾನದ ಮಟ್ಟವನ್ನು ಅರಿತು ಬೋಧನಾ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು, ವಿಷಯವಾರು ರಸಪ್ರಶ್ನೆ ಕಾರ್ಯಕ್ರಮಗಳು, ಮುಂತಾದ ಪಠ್ಯೇತರ ಚಟುವಟಿಕೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳು ಭಯ ಭೀತರಾಗದೆ ಸಂತೋಷವಾಗಿ ಪರೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತಿದೆ ಎಂದರು.ಎಸ್ ವಿ ದೇಶಪಾಂಡೆ ಮಾತನಾಡಿ, ಶಾಲೆಯ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಿಭಾಗಿಸಿ, ಎಲ್ಲಾ ಶಿಕ್ಷಕರಿಗೂ ಇಂತಿಷ್ಟು ವಿದ್ಯಾರ್ಥಿಗಳೆಂದು ದತ್ತು ನೀಡುವ ವ್ಯವಸ್ಥೆ ಜಾರಿಗೊಳಿಸಿ, ಆಯಾ ಶಿಕ್ಷಕರು…
