ವಿಜಯಪುರ: ವಿಜಯಪುರ ಜಿಲ್ಲಾ ಹೂಗಾರ ಸಮಾಜ ಹಾಗೂ ಶ್ರೀ ಕಲ್ಮೇಶ್ವರ ಶೈವ ಗುರವ ಸಂಸ್ಥಾನ ಮಠ ಹಾವಿನಾಳ ಇವರ ಸಹಯೋಗದಲ್ಲಿ ಇತ್ತೀಚೆಗೆ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವು ಅದ್ಧೂರಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜ್ಞಾನ ಯೋಗಾಶ್ರಮದ ನಿಂಗಯ್ಯ ಶ್ರೀಗಳು ಆಗಮಿಸಿದ್ದರು. ಅಧ್ಯಕ್ಷತೆಯನ್ನು ಸಿದ್ದರಾಮಯ್ಯ ಮಠ,ದಿವ್ಯ ಸಾನಿಧ್ಯವನ್ನು ಶರಣಬಸವ ಶರಣರು ಚಿಂಚೋಳಿ, ಉದ್ಘಾಟಕರಾಗಿ ಬಿ ಎಸ್ ಬಿರಾದಾರ, ಸಮಾಜದ ಜಿಲ್ಲಾಧ್ಯಕ್ಷರಾದ ಸಂಗಮೇಶ ಗುರವ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹೂಗಾರ ಸಮಾಜದ ೨೦೨೩-೨೪ನೇ ಸಾಲಿನ ಪ್ರತಿಭಾನ್ವಿತ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಸೇರಿದಂತೆ ಸಮಾಜದ ಪರವಾಗಿ ಶಿಕ್ಷಣ,ಕ್ರೀಡೆ, ಸಾಮಾಜಿಕ ಸೇವೆ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಎಲ್ಲಾ ತಾಲೂಕು ಅಧ್ಯಕ್ಷರುಗಳು ಸೇರಿದಂತೆ ಸಮಾಜದ ಎಲ್ಲ ಬಾಂಧವರು ಭಾಗವಹಿಸಿದ್ದರು.ಪ್ರಸಾದ( ಸುರೇಶ)ಪೂಜಾರಿ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

