ಬಸವನಬಾಗೇವಾಡಿ: ಪಟ್ಟಣದಲ್ಲಿರುವ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಎರಡು ಸ್ಥಾನಗಳು ರಾಜೀನಾಮೆಯಿಂದ ತೆರುವಾದ ಹಿನ್ನೆಲೆಯಲ್ಲಿ ಶನಿವಾರ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅಮರೇಶ ಹಣಮಂತ್ರಾಯ ನಾಡಗೌಡ, ಉಪಾಧ್ಯಕ್ಷರಾಗಿ ಬಿ.ಎಸ್.ಇಜೇರಿ ಅವರು ಅವಿರೋಧ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ನಜೀರಅಹ್ಮದ ಅವಟಿ ಘೋಷಿಸಿದರು.
ಈ ಎರಡು ಸ್ಥಾನಗಳಿಗೆ ತಲಾ ಒಬ್ಬೊಬ್ಬರೇ ನಾಮಪತ್ರ ಸಲ್ಲಿಕೆ ಮಾಡಿದ್ದರು. ೨೦೨೪-೨೫ ನೇ ಸಾಲಿಗೆ ಅಧ್ಯಕ್ಷರಾಗಿ,ಉಪಾಧ್ಯಕ್ಷರಾಗಿ ಆಯ್ಕೆಯಾದ ಅಮರೇಶ ಹಣಮಂತ್ರಾಯ ನಾಡಗೌಡ, ಬಿ.ಎಸ್.ಇಜೇರಿ ಅವರನ್ನು ಸೊಸಾಯಿಟಿಯ ನಿರ್ದೇಶಕರು, ನಿವೃತ್ತ ಶಿಕ್ಷಕರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯಶಿಕ್ಷಕರಾದ ಎಸ್.ಜಿ.ಮೊಕಾಶಿ, ಎಸ್.ಜಿ.ಪಾಟೀಲ ಮಾತನಾಡಿ, ನಮ್ಮ ಕಾಲಾವಧಿಯಲ್ಲಿ ಅಮರೇಶ ನಾಡಗೌಡ ಅವರ ತಂದೆ ನಿವೃತ್ತ ಶಿಕ್ಷಕ ದಿ.ಎಚ್.ಎ.ನಾಡಗೌಡ ಸೇರಿದಂತೆ ನಾವು ಹಾಗೂ ಅನೇಕರು ಸೊಸಾಯಿಟಿಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ದಿ.ಎಚ್.ಎ.ನಾಡಗೌಡ ಅವರು ಸೊಸಾಯಿಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಜೊತೆಗೆ ಸಮಸ್ತ ಶಿಕ್ಷಕರ ಬಾಂಧವರ ಸಹಕಾರದೊಂದಿಗೆ ಸೊಸಾಯಿಟಿಗೆ ಪ್ರಗತಿಗೆ ಸೇವೆ ಸಲ್ಲಿಸುವ ಮೂಲಕ ಸೊಸಾಯಿಟಿಯ ಪ್ರಗತಿಗೆ ನಾಂದಿ ಹಾಡಿದ್ದಾರೆ. ಇದೀಗ ಅವರ ಪುತ್ರ ಸೊಸಾಯಿಟಿಯ ಅಧ್ಯಕ್ಷರಾಗಿರುವುದು ಶ್ಲಾಘನೀಯ. ಇವರ ಕಾಲಾವಧಿಯಲ್ಲಿಯೂ ಸೊಸಾಯಿಟಿ ಪ್ರಗತಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಎಚ್.ಬಿ.ಬಾರಿಕಾಯಿ, ಎ.ಎಂ.ಹಳ್ಳೂರ, ಸಿ.ಜಿ.ಹೂಗಾರ, ಬಿ.ಡಿ.ಕುಂಬಾರ, ಆರ್.ಡಿ.ಪವಾರ, ಐ.ಎಂ.ಇಂಡಿ, ಸಿ.ಟಿ.ಮಾದರ, ವೈ.ಎಂ.ಬೇವೂರ, ನಿವೃತ್ತ ಮುಖ್ಯಶಿಕ್ಷಕ ಶರಣಪ್ಪ ಮಾದರ, ಶಿಕ್ಷಕರಾದ ಪಿ.ವೈ,ರತ್ನಾಕರ, ಜಿ.ಎಂ.ನಾವಿ, ಮುಖ್ಯಕಾರ್ಯನಿರ್ವಾಹಕ ಬಿ.ವೈ.ವಡವಡಗಿ ಇತರರು ಇದ್ದರು.
Subscribe to Updates
Get the latest creative news from FooBar about art, design and business.
ಶಿಕ್ಷಕರ ಸೊಸಾಯಿಟಿ ಅಧ್ಯಕ್ಷರಾಗಿ ನಾಡಗೌಡ, ಉಪಾಧ್ಯಕ್ಷರಾಗಿ ಇಜೇರಿ ಆಯ್ಕೆ
Related Posts
Add A Comment

