Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಡಾ.ಸುರೇಖಾ ರಾಠೋಡ ಗೆ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ

ಯುಕೆಪಿ ಎಂ.ಡಿ. ಕಚೇರಿಯ ಕಂಪ್ಯೂಟರ್ ಜಪ್ತಿ!

ದೋಷರಹಿತ ಮತದಾರರ ಪಟ್ಟಿಗೆ ರಾಜಕೀಯಪಕ್ಷಗಳ ಸಹಕಾರ ಅಗತ್ಯ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬಸವನಬಾಗೇವಾಡಿ ವಿಪಿಕೆಪಿಎಸ್ಗೆ ರೂ.೭೬.೬೨ ಲಕ್ಷ ನಿವ್ವಳ ಲಾಭ
(ರಾಜ್ಯ ) ಜಿಲ್ಲೆ

ಬಸವನಬಾಗೇವಾಡಿ ವಿಪಿಕೆಪಿಎಸ್ಗೆ ರೂ.೭೬.೬೨ ಲಕ್ಷ ನಿವ್ವಳ ಲಾಭ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಬಸವನಬಾಗೇವಾಡಿ: ೨೦೨೩-೨೪ ನೇ ಸಾಲಿನಲ್ಲಿ ಸಂಘವು ರೂ. ೫೯.೩೮ ಲಕ್ಷಗಳ ಆದಾಯವನ್ನು ಹೊಂದಿದ್ದು. ಒಟ್ಟು ರೂ. ೫೧೩.೭೬ ವೆಚ್ಚವಾಗಿದೆ. ಗರಿಷ್ಠ ಆದಾಯದಲ್ಲಿ ವೆಚ್ಚವನ್ನು ತೆಗೆದು ಒಟ್ಟು ರೂ.೭೬.೬೨ ಲಕ್ಷ ನಿವ್ವಳ ಲಾಭ ಹೊಂದಿದೆ ಎಂದು ಸ್ಥಳೀಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಹೇಳಿದರು.
ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆವರಣದಲ್ಲಿ ಶನಿವಾರ ಜರುಗಿದ ೨೦೨೩-೨೪ ನೇ ಸಾಲಿನ ೮೦ ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಸಂಘವು ಬಸವನಬಾಗೇವಾಡಿ ಪುರಸಭೆ ವ್ಯಾಪ್ತಿ ಒಳಪಟ್ಟಿರುತ್ತದೆ. ಮಾ.೩೧ ರವರೆಗೆ ೬,೮೧೮ ಸದಸ್ಯರನ್ನು ಹೊಂದಿದೆ. ಒಟ್ಟು ಶೇರು ಬಂಡವಾಳ ರೂ. ೪೬೨.೩೦ ಲಕ್ಷ ಇದೆ. ದುಡಿಯುವ ಬಂಡವಾಳಕ್ಕೆ ಶೇ.೬.೫೬ ಇರುವುದು. ಒಟ್ಟು ನಿಽಗಳು ರೂ. ೮೬೧.೭೦ ಲಕ್ಷ ಇದೆ. ಇದು ದುಡಿಯುವ ಬಂಡವಾಳಕ್ಕೆ ಶೇ.೧೨.೨೨ ರಷ್ಟು ಇದೆ. ಒಟ್ಟು ಠೇವಣಿ ರೂ. ೪,೩೭೪.೦೪ ಲಕ್ಷ ಇದೆ. ಪ್ರತಿವರ್ಷವೂ ಠೇವಣಿ ಹೆಚ್ಚಳವಾಗಿರುವುದು ಠೇವುದಾರರು ಸಂಘದ ಮೇಲೆ ಇಟ್ಟಿರುವ ವಿಶ್ವಾಸವನ್ನು ಸ್ಪಷ್ಟಪಡಿಸುತ್ತದೆ. ಠೇವಣಿಯು ದುಡಿಯುವ ಬಂಡವಾಳಕ್ಕೆ ಶೇ. ೬೨.೦೫ ರಷ್ಟು ಇದೆ. ವ್ಹಿಡಿಸಿಸಿ ಬ್ಯಾಂಕಿನಿಂದ ಕೃಷಿಗೆ ಆದ್ಯತೆಯನ್ನಿಟ್ಟು ವರದಿ ವರ್ಷದಲ್ಲಿ ರೂ. ೧,೪೩೨.೭೩ ಲಕ್ಷ ಸಾಲವನ್ನು ಪಡೆಯಲಾಗಿದೆ. ವರದಿ ವರ್ಷಾಂತ್ಯಕ್ಕೆ ಸಂಘದ ಪಡೆದ ಸಾಲಗಳ ಬಾಕಿ ರೂ.೧,೩೪೯.೬೪ ಲಕ್ಷ ಸಾಲ ಇದೆ. ಸುಸ್ತಿ ಬಾಕಿ ಇರುವುದಿಲ್ಲ ಎಂದರು.
ಈಗಾಗಲೇ ಸಂಘದಿಂದ ಗೊಬ್ಬರ, ಬೀಜ ಹಾಗೂ ಕ್ರಿಮಿನಾಶಕ ಮಳಿಗೆ, ಔಷಧ ಮತ್ತು ಜನರಲ್ ಸ್ಟೋರ್ ಆರಂಭಿಸಲಾಗಿದೆ. ಇದರ ಪ್ರಯೋಜನವನ್ನು ರೈತರು ಪಡೆದುಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಂಘದಿಂದ ಶುದ್ಧ ಕುಡಿಯುವ ನೀರಿನ ಘಟಕ, ಅಗ್ರಿಮಾರ್ಟ್, ಸೂಪರ್ ಮಾರ್ಕೆಟ್, ಇ-ಸ್ಟಾಂಪಿಂಗ್ ವ್ಯವಸ್ಥೆ, ಮಣ್ಣು ಮತ್ತು ನೀರಿನ ಪರೀಕ್ಷಾ ಕೇಂದ್ರ, ಶೀಲಲ ಶೇಖರಣಾ ಗೋದಾಮು, ಗೊಬ್ಬರ ಗೋಡಾವನ, ಕಾಮನ್ ಸರ್ವಿಸ್ ಸೆಂಟರ್, ಕುಸಬಿ ಎಣ್ಣೆ ಗಾಣಾ, ಬೇವಿನ ಹಿಂಡಿ ತಯಾರಿಕೆ ಘಟಕ ಆರಂಭಿಸುವ ಯೋಜನೆಗಳನ್ನು ಹಾಕಿಕೊಂಡಿದೆ. ಕೃಷಿಕರ ಸೇವೆ ದೇವರ ಸೇವೆಯೆಂದು ಸಂಘದ ಆಡಳಿತ ಮಂಡಳಿ, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದೆ. ಸಂಘದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕೆಂದರು.
ಸಂಘದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಚಿಕ್ಕೊಂಡ ಅವರು ೨೦೨೩-೨೪ ನೇ ಸಾಲಿನ ವಾರ್ಷಿಕ ವರದಿ ಹಾಗೂ ಅಢಾವೆ ಪತ್ರಿಕೆ ವಾಚಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮಲ್ಲೇಶಿ ಕಡಕೋಳ, ನಿರ್ದೇಶಕರಾದ ನಿಂಗಪ್ಪ ಅವಟಿ, ಮಹಾಂತೇಶ ಹಾರಿವಾಳ, ನಿಂಗಪ್ಪ ಕುಳಗೇರಿ, ಶ್ರೀಶೈಲ ಪರಮಗೊಂಡ, ಈರಣ್ಣ ವಂದಾಲ, ಸುರೇಶ ನಾಯಕ, ಗಂಗಾಬಾಯಿ ಕಡ್ಲಿಮಟ್ಟಿ, ಮಾದೇವಿ ಮೈಲೇಶ್ವರ, ಸಹ ಮುಖ್ಯಕಾರ್ಯನಿರ್ವಾಹಕ ಶಂಕರಗೌಡ ಚಿಕ್ಕೊಂಡ, ಸ್ಥಳೀಯ ವ್ಹಿಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ಆರ್.ಡಿ.ಶಹಾಪುರ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಸಂಘದ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು, ಈರಕಾರ ಮುತ್ಯಾ ದೇವಸ್ಥಾನ, ಶ್ರೀಶೈಲ ಮಲ್ಲಿಕಾರ್ಜನ ಪಾದಯಾತ್ರೆ ಸಮಿತಿ, ಹೋರಿಮಟ್ಟಿ ಗುಡ್ಡಿದ ಸೇವಾ ಸಮಿತಿ, ದ್ಯಾಮವ್ವ ದೇವಿ ದೇವಸ್ಥಾನದ ಸಮಿತಿ, ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದ ಸಮಿತಿ, ಗೌರಿ-ಶಂಕರ ದೇವಸ್ಥಾನ ಸಮಿತಿ, ಕ್ವಾಟಿ ಲಕ್ಷ್ಮೀದೇವಿ ದೇವಸ್ಥಾನ ಸಮಿತಿ, ಗಣಪತಿ ವೃತ್ತದ ಸೇವಾ ಸಮಿತಿ, ನಾಗಾವಿ ಯಲ್ಲಮ್ಮದೇವಿ ದೇವಸ್ಥಾನದ ಸೇವಾ ಸಮಿತಿಯ ಪದಾಧಿಕಾರಿಗಳನ್ನು, ಪಟ್ಟಣದಲ್ಲಿ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಹಿರಿಯರನ್ನು ಸೇರಿದಂತೆ ಅನೇಕರನ್ನು ಸಂಘದಿಂದ ಶಾಲು ಬದಲಾಗಿ ಟಾವೆಲ್ಲು-ಟೊಪ್ಪಿಗೆ, ಪುಸ್ತಕ ನೀಡುವ ಮೂಲಕ ಸನ್ಮಾನಿಸಿದ್ದು ವಿಶೇಷವಾಗಿತ್ತು.
ಸಭೆ ಆರಂಭಕ್ಕೂ ಮುನ್ನ ಸಂಘದ ಸಹಕಾರಿ ಆರ್ಥಿಕ ವರ್ಷ ೨೦೨೩-೨೪ ನೇ ಸಾಲಿನಲ್ಲಿ ನಿಧನರಾದ ಸಂಘದ ಹಾಲಿ ನಿರ್ದೇಶಕ ಮುದಕಪ್ಪ ಅಸ್ಕಿ ಹಾಗೂ ನಿಧನರಾದ ಸದಸ್ಯರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಡಾ.ಸುರೇಖಾ ರಾಠೋಡ ಗೆ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ

ಯುಕೆಪಿ ಎಂ.ಡಿ. ಕಚೇರಿಯ ಕಂಪ್ಯೂಟರ್ ಜಪ್ತಿ!

ದೋಷರಹಿತ ಮತದಾರರ ಪಟ್ಟಿಗೆ ರಾಜಕೀಯಪಕ್ಷಗಳ ಸಹಕಾರ ಅಗತ್ಯ

ಆಲಮಟ್ಟಿ ಉದ್ಯಾನಗಳಿಗೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಮನವಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಡಾ.ಸುರೇಖಾ ರಾಠೋಡ ಗೆ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ
    In (ರಾಜ್ಯ ) ಜಿಲ್ಲೆ
  • ಯುಕೆಪಿ ಎಂ.ಡಿ. ಕಚೇರಿಯ ಕಂಪ್ಯೂಟರ್ ಜಪ್ತಿ!
    In (ರಾಜ್ಯ ) ಜಿಲ್ಲೆ
  • ದೋಷರಹಿತ ಮತದಾರರ ಪಟ್ಟಿಗೆ ರಾಜಕೀಯಪಕ್ಷಗಳ ಸಹಕಾರ ಅಗತ್ಯ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಉದ್ಯಾನಗಳಿಗೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಮನವಿ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಎತ್ತರ ಹೆಚ್ಚಳ ೩ ವರ್ಷದಲ್ಲಿ ಪೂರ್ಣಗೊಳಿಸಲು ಬದ್ಧ
    In (ರಾಜ್ಯ ) ಜಿಲ್ಲೆ
  • ೧ ರಿಂದ ೫ ವರೆಗೆ ಶಿಕ್ಷಣ ಕಡ್ಡಾಯವಾಗಿ ಮಾತೃಭಾಷೆಯಲ್ಲಿರಲಿ
    In (ರಾಜ್ಯ ) ಜಿಲ್ಲೆ
  • 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹ.ಮ.ಪೂಜಾರ
    In ವಿಶೇಷ ಲೇಖನ
  • ಶೇ.೭೭.೬೮ ರಷ್ಟು ಮತದಾರರ ಮ್ಯಾಪಿಂಗ್ ಪೂರ್ಣ
    In (ರಾಜ್ಯ ) ಜಿಲ್ಲೆ
  • ಮಾದಕ ವಸ್ತುಗಳಿಂದ ಶರೀರದ ಮೇಲೆ ನೇರ ಪರಿಣಾಮ :ಪಿಎಸೈ ಸಚೀನ
    In (ರಾಜ್ಯ ) ಜಿಲ್ಲೆ
  • ಗ್ರಾಮದೇವತಾ ಜಾತ್ರಾಮಹೋತ್ಸವದಲ್ಲಿ ಗೀಗೀ ಪದಗಳ ಸಂಭ್ರಮ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.