ಯಡ್ರಾಮಿ: ಕೊಲ್ಕಾತ್ತಾದಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಹಾಗೂ ಬರ್ಬರ ಹತ್ಯೆ ನಡೆದಿರುವುದು ಅಮಾನುಷ ಕೃತ್ಯವಾಗಿದೆ. ಈ ಪ್ರಕರಣದಲ್ಲಿ ನಿಷ್ಪಕ್ಷವಾಗಿ ತನಿಖೆ ನಡೆಸಿ ವಿದ್ಯಾರ್ಥಿನಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಖಾಸಗಿ ವೈದ್ಯಾಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಡಾ.ವ್ಹಾಯ್.ಎ.ಛಾಯಗೋಳ ಆಗ್ರಹಿಸಿದರು.
ಯಡ್ರಾಮಿ ಪಟ್ಟಣದ ತಹಸೀಲ್ ಕಛೇರಿಯಲ್ಲಿ ಶನಿವಾರ ಐಎಮ್ಎ (ಭಾರತೀಯ ವೈದ್ಯಕೀಯ ಸಂಘ) ನೀಡಿರುವ ಮುಷ್ಕರಕ್ಕೆ ಬೆಂಬಲ ಸೂಚಿಸಿ ಖಾಸಗಿ ವೈದ್ಯಾಧಿಕಾರಿಗಳ ಸಂಘದಿಂದ ಗ್ರೇಡ್-2 ತಹಸೀಲ್ದಾರ್ ಸತ್ಯಪ್ರಸಾದ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಸಾರ್ವಜನಿಕರಿಗಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ವೈದ್ಯರ ಮೇಲೆ ಹಲ್ಯೆಯಂತಹ ಪ್ರಕರಣಗಳು ನಡೆಯುತ್ತಿವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಹಾಗೂ ಕಠಿಣ ಕಾನೂನು ಜಾರಿಗೆ ತರಬೇಕು ಎಂದರು.
ಈ ವೇಳೆ ವೈದ್ಯರಾದ ಡಾ.ಎಮ್.ಎಮ್. ಬಿರಾದಾರ, ಡಾ.ರವೀಂದ್ರ, ಡಾ.ಶಿವಪ್ರಸಾದ ಪಾಟೀಲ, ಡಾ.ಪ್ರಕಾಶ ಹವಲ್ದಾರ, ಡಾ.ಉಮೇಶ ಬದ್ರಶೆಟ್ಟಿ, ಡಾ.ಪ್ರಭು ಪೊಲೀಸಪಾಟೀಲ, ಡಾ.ಎಮ್.ಎಮ್.ಗುಡ್ನಾಳ, ಡಾ.ರಾಹುಲಗೌಡ ಬಿರಾದಾರ, ಡಾ.ವಿನೋದ ರಾಠೋಡ, ಡಾ.ಶರಣು ನೂಲಾ, ಡಾ.ಲಂಕೇಶ, ಡಾ.ಅನೀಲಕುಮಾರ, ಡಾ.ಮಹಾಂತೇಶ ಹಾಗೂ ಪ್ರಮುಖರಾದ ಚಂದ್ರಶೇಖರ ಪುರಾಣಿಕ, ನಾಗಣ್ಣ ಬಿರಾದಾರ, ಪ್ರಭು ಜವಳಗಿ, ಶರಣು ಸುಬೇದಾರ, ಷಣ್ಮುಖ ಬಿರಾದಾರ, ಶ್ರೀಶೈಲ ಸಜ್ಜನ, ಮಲ್ಲಿಕಾರ್ಜುನ ಹೂಗಾರ, ಸಾಗರ ಲಗಳಿ, ಶಿವಾನಂದ ಜವಳಗಿ, ಕಾರ್ತಿಕ, ಪವನ ಕಡಕೋಳ ಇದ್ದರು.
Subscribe to Updates
Get the latest creative news from FooBar about art, design and business.
ಹತ್ಯೆಯಾದ ವೈದ್ಯ ವಿದ್ಯಾರ್ಥಿನಿ ಕುಟುಂಬಕ್ಕೆ ನ್ಯಾಯ ಒದಗಿಸಿ :ಡಾ.ಛಾಯಾಗೋಳ
Related Posts
Add A Comment

