ಚಡಚಣ: ನಿಸರ್ಗದ ಒಂದೊಂದು ಸಣ್ಣ ಅಂಶದಲ್ಲೂ ಜೀವನೋತ್ಸಾಹವನ್ನು ಕಾಣುವ ಕವಿ ಕುವೆಂಪು ಅವರು ಯುವ ಪ್ರತಿಭೆಗಳಿಗೆ ಆದರ್ಶ ಕವಿಯಾಗಿ ಇಂದಿಗೂ ಅವರ ಕೃತಿಗಳ ಮೂಲಕ ಜೀವಂತವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಉಮದಿ ಸರ್ವೋದಯ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಸುರೇಖಾ ಹೊರ್ತಿಕರ್ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಸಂಗಮೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ವಿಭಾಗ ಆಯೋಜಿಸಿದ ರಾಷ್ಟ್ರ ಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ನಡೆದ ವಿಶ್ವಮಾನವ ದಿನಾಚರಣೆ, ಸಂದರ್ಭದಲ್ಲಿ ಕುವೆಂಪು ಅವರ ಸಾಹಿತ್ಯದಲ್ಲಿ ನಿಸರ್ಗ ಪ್ರೇಮ ಕುರಿತು ಅವರು ಮಾತನಾಡುತ್ತಾ ಕುವೆಂಪು ಅವರು ರಚಿಸಿದ ಕಥೆ, ಕಾದಂಬರಿ, ನಾಟಕ, ಕವಿತೆಯಂತಹ ಉತ್ಕೃಷ್ಟ ಸಾಹಿತ್ಯ ಇಂದಿಗೂ ಓದಿದ ಪ್ರತಿಯೊಬ್ಬರಿಗೂ ಜೀವನೋತ್ಸವ ತುಂಬುತ್ತಿದೆ. ಅದರಲ್ಲಿ ಬೆಳಗಿನ ಉಲ್ಲಾಸದ ವಾತಾವರಣ, ತರಂಗಗಳಲ್ಲಿ ನಿಸರ್ಗ ಪ್ರೇಮದಲ್ಲಿ ವಿಹಾರಿಸುವ ಕುರಿತು ಅದ್ಭುತವಾಗಿ ವರ್ಣಿಸಿದರು.
ವಿಶ್ರಾಂತ ಪ್ರಾಚಾರ್ಯ ಎಸ್. ಜಿ. ಜಂಗಮಶೆಟ್ಟಿ ಮಾತನಾಡಿ ಕುವೆಂಪು ಅವರು ಸಾಹಿತ್ಯದ ಮೂಲಕ ವಿಶ್ವಮಾನವ ಸಂದೇಶವನ್ನು ಪ್ರಸ್ತುತಪಡಿಸಿದ್ದು, ಮಾನವ ಕುಲ ಒಳಿತಿಗೆ ಶಾಂತಿ ಸಂದೇಶವನ್ನು ಸಾರಿದ್ದಾರೆ. ಅವರ ಜನ್ಮದಿನಾಚರಣೆ ನಮ್ಮಗೆಲ್ಲ ಹಬ್ಬದಂತೆ. ಅವರ ಸಾಹಿತ್ಯದ ಮೂಲಕ ಜನಸಮುದಾಯ ಹೇಗೆ ನಡೆದುಕೊಳ್ಳಬೇಕು. ಸಮಾನತೆಯ ಬದುಕು ಅನುಸರಿಸುವಂತೆ ಅದರಿಂದ ಶಾಂತಿ ನೆಮ್ಮದಿ ಕಾಣಬಹುದು ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ. ಎಸ್. ಮಾಗಣಗೇರಿ ಮಾತನಾಡಿ, ಮನುಷ್ಯ ಜಾತಿ, ಧರ್ಮ, ಪಂಗಡ, ಪಂಥ, ದೇಶ, ಭಾಷೆಗಳನ್ನು ಮೀರಿ ವಿಶಾಲ ಮನೊಭಾವನೆಯಿಂದ ಬದುಕುವುದೇ ವಿಶ್ವಮಾನವ ಸಂದೇಶದ ಸಾರವಾಗಿದೆ. ಕನ್ನಡ ನಾಡಿನ ಸಾಮಾಜಿಕ ಪರಿವರ್ತನೆಯಲ್ಲಿ ರಾಷ್ಟ್ರ ಕವಿ ಕುವೆಂಪು ಅವರ ದಾರ್ಶನಿಕ ಚಿಂತನೆ ಮತ್ತು ಸಾಹಿತ್ಯವು ಗಣನಿಯ ಪಾತ್ರವಹಿಸಿದೆ. ಅವರ ಅಸಾಧಾರಣ ಪ್ರತಿಭೆ ಮತ್ತು ಉದಾರವಾದ ವ್ಯಕ್ತಿತ್ವದಿಂದ ಹೊರಹೊಮ್ಮಿರುವ ಸಾಹಿತ್ಯವು ನಮ್ಮ ಸಮಾಜದ ಮನಸ್ಸನ್ನು ಸಚ್ಚೇತನಗೊಳಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ. ಎಸ್. ಬಿ. ರಾಠೋಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಂಥಪಾಲಕ ಎಂ.ಕೆ. ಬಿರಾದಾರ, ಡಾ. ಎಸ್. ಎಸ್. ದೇಸಾಯಿ, ಪ್ರೊ. ಬಸವರಾಜ ಯಳ್ಳೂರ, ಪ್ರೊ. ಮಯೂರ್ ಕುದುರಿ, ಪ್ರೊ. ಮುರುಗೇಶ್ ಕೆ. ಎಂ., ಪ್ರೊ. ಎಸ್. ಬಿ. ಶಿರೋಳ, ಪ್ರೊ. ರಶ್ಮಿ ಗಜಕೋಶ ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರೀತಿ ಬಿರಾದಾರ ಪ್ರಾರ್ಥಿಸಿದರೆ ಪ್ರೊ. ಮಹಾಂತೇಶ ಜನವಾಡ ಸ್ವಾಗತಿಸಿದರು. ಪ್ರೊ. ಎಸ್. ಎಫ್. ಬಿರಾದಾರ ನಿರೂಪಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

