Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಾ.೧೫ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ

ಮಾ.೧೫ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಿದ್ಧೇಶ್ವರ ಶ್ರೀ ನಡೆ-ನುಡಿ ನಮಗೆಲ್ಲ ಸ್ಪೂರ್ತಿ :ಸಚಿವ ಶಿವಾನಂದ
(ರಾಜ್ಯ ) ಜಿಲ್ಲೆ

ಸಿದ್ಧೇಶ್ವರ ಶ್ರೀ ನಡೆ-ನುಡಿ ನಮಗೆಲ್ಲ ಸ್ಪೂರ್ತಿ :ಸಚಿವ ಶಿವಾನಂದ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ: ಶ್ರೀ ಸಿದ್ಧೇಶ್ವರ ಅಪ್ಪನವರ ನಡೆ ಮತ್ತು ನುಡಿ ನಮ್ಮೆಲ್ಲರಿಗೂ ಸ್ಪೂರ್ತಿ. ಜೀವನದಲ್ಲಿ ಏನು ಅಪೇಕ್ಷೆ ಪಡೆಯದೆ ಆಶಯಗಳು ಇಲ್ಲದ ಬದುಕನ್ನು ನಮಗ್ಯಾರಾದರು ಕಲಿಸಿದ್ದಾರೆ ಎಂದಾದರೆ ಅದು ಪೂಜ್ಯ ಸಿದ್ಧೇಶ್ವರ ಮಹಾ ಸ್ವಾಮೀಜಿಯವರು ಎಂದು ಜವಳಿ ಮತ್ತು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವ ಅಂಗವಾಗಿ “ಗ್ರಾಮೀಣ ಜನರ ಬದುಕು” ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ೬ನೇ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಗ ಎಲ್ಲಿಂದಲೋ ಜನ ಗೋಳಗುಮ್ಮಟ ನೋಡುವ ಬದಲು ಜ್ಞಾನ ಗುಮ್ಮಟವನ್ನು ನೋಡಲು ವಿಜಯಪುರಕ್ಕೆ ಬರುತ್ತಿದ್ದರು ಎಂದರೆ ಅವರ ವ್ಯಕ್ತಿತ್ವದ ಶಕ್ತಿ ನಮಗೆ ಅರ್ಥವಾಗುತ್ತದೆ. ಅವರು ಬದುಕು ಇಡೀ ಜಗತ್ತಿಗೆ ಒಂದು ಮಾರ್ಗದರ್ಶಕ ಎಂದರೆ ತಪ್ಪಾಗಲಾರದು. ಎಲ್ಲ ತತ್ವಜ್ಞಾನಿಗಳನ್ನು ನಾವು ನೋಡಲು ಸಾಧ್ಯವಾಗಲಿಲ್ಲ. ಬದಲಿಗೆ ಎಲ್ಲ ತತ್ವಜ್ಞಾನಿಗಳ ಕುರಿತು ಶ್ರೀ ಸಿದ್ಧೇಶ್ವರ ಅಪ್ಪನವರ ಮಾತಿನ ಮೂಲಕ ನಾವು ಕಂಡಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಪೂರ ಮಾತನಾಡಿ, ತತ್ವಜ್ಞಾನಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಬಗ್ಗೆ ಅಧ್ಯಯನವಾಗಬೇಕು, ಮತ್ತು ಪಠ್ಯಕ್ರಮದಲ್ಲಿ ಅವರು ಸೇರುವಂತಹ ಕೆಲಸ ಆಗಬೇಕು. ಸಚಿವ ಶಿವಾನಂದ ಪಾಟೀಲ ಅವರ ಮೂಲಕ ನಾನು ಪ್ಲೇಟೊ ಮತ್ತು ಅರಿಸ್ಟಾಟಲ್ ಅವರ ಮಾದರಿಯಲ್ಲಿ ಅಪ್ಪನವರ ಅಧ್ಯಯನಕ್ಕೆ ಅವಕಾಶ ಮಾಡಿಕೊಡಬೇಕೆಂದು ರಾಜ್ಯ ಸರಕಾರಕ್ಕೆ ವಿನಂತಿ ಮಾಡುತ್ತೇನೆ ಎಂದರು.
ಬೆಳಗಾವಿಯ ನಿವೃತ್ತ ಪ್ರಾಧ್ಯಾಪಕ ಡಾ.ಬಸವರಾಜ ಜಿಗಜಿಂಪಿ ತಮ್ಮ ಅನುಭಾವ ಹಂಚಿಕೊಂಡು, ಸಿದ್ದೇಶ್ವರ ಅಪ್ಪನವರು ತಮ್ಮ ನುಡಿಗಳಲ್ಲಿ ಹಳ್ಳಿಯ ಶ್ರಮದ ಬುದುಕಿನ ಬಗ್ಗೆ, ಗ್ರಾಮೀಣ ಸೊಗಡಿನ ಬಗ್ಗೆ ಬಹಳ ಚಂದವಾಗಿ ಹೇಳುತ್ತಿದ್ದರು. ಅಲ್ಲಿಯ ಬದುಕಿನ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದರು. ಅಪ್ಪನವರ ಮಾತಿನಂತೆ ನೂರಕ್ಕೆ ನೂರರಷ್ಟು ಸತ್ಯ ಗ್ರಾಮೀಣ ಭಾಗದ ಬದುಕನ್ನು ಬೇರೆ ಎಲ್ಲಿಯೂ ನಾವು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಗದಗ ಶಿವಾನಂದ ಮಠದ ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳು ಹಾಗೂ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಮಲಕನದೇವರ ಹಟ್ಟಿಯ ಮಲ್ಲಿಕಾರ್ಜುನ ಭಜನಾ ಮಂಡಳಿ ಪ್ರಾರ್ಥನಾ ಗೀತೆ ಹಾಡಿದರು. ಕಾಖಂಡಕಿಯ ಶ್ರೀ ಚನ್ನಪ್ಪ ತೋಟಕರ್ ಹಳ್ಳಿಯ ಹಾಡು ಹಾಡಿದರು. ಡಾ.ಸೋಮಶೇಖರ ವಾಲಿ ಸ್ವಾಗತಿಸಿ, ಪರಿಚಯಿಸಿದರು, ಪ್ರಭುಲಿಂಗ ಮಹಾಸ್ವಾಮೀಜಿ ನಿರೂಪಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಾ.೧೫ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ

ಮಾ.೧೫ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಶ್ರೀಶೈಲ ದರ್ಶನಕ್ಕೆ ವಿಶೇಷ ಬಸ್ ಸೌಲಭ್ಯ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಾ.೧೫ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಮಾ.೧೫ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಶ್ರೀಶೈಲ ದರ್ಶನಕ್ಕೆ ವಿಶೇಷ ಬಸ್ ಸೌಲಭ್ಯ
    In (ರಾಜ್ಯ ) ಜಿಲ್ಲೆ
  • ನಾಟಕ ಕಲೆ ಉಳಿಸಿ-ಬೆಳೆಸುವುದು ಅಗತ್ಯ :ಡಾ.ಪ್ರಭುಗೌಡ
    In (ರಾಜ್ಯ ) ಜಿಲ್ಲೆ
  • ಉಳುವಿ ಪಾದಯಾತ್ರಿಗಳಿಗೆ ಸ್ವಾಗತ, ಬೀಳ್ಕೊಡುಗೆ
    In (ರಾಜ್ಯ ) ಜಿಲ್ಲೆ
  • ಜಮೀನು ದಾರಿ ಸಮಸ್ಯೆ ಇತ್ಯರ್ಥ ಅಧಿಕಾರ ತಹಸೀಲ್ದಾರರಿಗಿರಲಿ
    In (ರಾಜ್ಯ ) ಜಿಲ್ಲೆ
  • ಅಭ್ಯಾಸವು ಪರಿಪೂರ್ಣ ವ್ಯಕ್ತಿಯನ್ನಾಗಿ ನಿರ್ಮಿಸುತ್ತದೆ :ಡಾ.ಗುಡಿ
    In (ರಾಜ್ಯ ) ಜಿಲ್ಲೆ
  • ಪಾರಂಪರಿಕ ಕಲೆಗಳ ಸಂರಕ್ಷಣೆ ಅಗತ್ಯ :ಡಾ.ಪ್ರಭುಸಾರಂಗದೇವ ಶ್ರೀ
    In (ರಾಜ್ಯ ) ಜಿಲ್ಲೆ
  • ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಿ :ಡಾ.ಪ್ರಭುಸಾರಂಗದೇವ ಶ್ರೀ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.