Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸಹಕಾರಿ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಕೈಜೋಡಿಸಿ :ದರ್ಶನಾಪುರ

ತಿಂಗಳಿಂದ ಬಬಲೇಶ್ವರ ನಾಕಾ ರಸ್ತೆ ಬಂದ್ :ಆಕ್ರೋಶ

ಮಾಧ್ಯಮದವರ ಕುಂದುಕೊರತೆ ತ್ವರಿತ ನಿವಾರಣೆಗೆ ಕ್ರಮ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಆರೋಗ್ಯ ಕ್ಷೇತ್ರಕ್ಕೆ ಎಕ್ಸಲೆಂಟ್ ನರ್ಸಿಂಗ್ ಕಾಲೇಜ್ ಕೊಡುಗೆ ಅನನ್ಯ
(ರಾಜ್ಯ ) ಜಿಲ್ಲೆ

ಆರೋಗ್ಯ ಕ್ಷೇತ್ರಕ್ಕೆ ಎಕ್ಸಲೆಂಟ್ ನರ್ಸಿಂಗ್ ಕಾಲೇಜ್ ಕೊಡುಗೆ ಅನನ್ಯ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಲ್ಲನಗೌಡ ಬಿರಾದಾರ ಶ್ಲಾಘನೆ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಆರೋಗ್ಯ ಕ್ಷೇತ್ರದ ಬೆಳವಣಿಗೆಯಲ್ಲಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದ್ದು, ಪ್ರತಿವರ್ಷ ನರ್ಸಿಂಗ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುತ್ತಿರುವ ಎಕ್ಸಲೆಂಟ್ ನರ್ಸಿಂಗ್ ಕಾಲೇಜಿನ ಕೊಡುಗೆ ಅನನ್ಯವಾದದ್ದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಲ್ಲನಗೌಡ ಬಿರಾದಾರ ಶ್ಲಾಘಿಸಿದರು.
ನಗರದಲ್ಲಿ ನಡೆದ ಮಾತೋಶ್ರೀ ಗೌರಮ್ಮ ಅಪ್ಪಾಸಾಹೇಬ್ ಬಬಲೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ “ಎಕ್ಸಲೆಂಟ್ ಕಾಲೇಜ್ ಆಫ್ ನರ್ಸಿಂಗ್ ” ಮಹಾವಿದ್ಯಾಲಯದ ನಾಲ್ಕನೇ ಬ್ಯಾಚಿನ ವಿದ್ಯಾರ್ಥಿಗಳ ದೀಪದಾನ ಹಾಗೂ ಪ್ರತಿಜ್ಞಾವಿಧಿ ಬೋಧನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವ ನಾಯಕ ಸಂಗಮೇಶ್ ಬಬಲೇಶ್ವರ ಅವರು ತಮ್ಮ ತಾಯಿಯ ಸ್ಮರಣೆಗಾಗಿ ಸ್ಥಾಪಿಸಿರುವ ಕಾಲೇಜಿನಿಂದ ತಾಯಿ ಹೃದಯದ ನರ್ಸಗಳು ಪ್ರತಿ ವರ್ಷ ಹೊರ ಬರುವಂತಾಗಲಿ ಎಂದು ಡಿಎಚ್ಒ ಡಾ.ಮಲ್ಲನಗೌಡ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕರು ಹಾಗೂ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜನನಿ ಆಸ್ಪತ್ರೆಯ ಮುಖ್ಯಸ್ಥ ಡಾ ಹಂಪನಗೌಡ ಪಾಟೀಲ್ ಮಾತನಾಡಿ, ನರ್ಸಿಂಗ್ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿಯಾಗಿದ್ದು, ಎಲ್ಲ ವಿದ್ಯಾರ್ಥಿಗಳು ಸೇವಾ ಮನೋಭಾವದಿಂದ ಸೇವೆ ಸಲ್ಲಿಸಿದರೆ ಅದಕ್ಕಿಂತ ಶ್ರೇಷ್ಠವಾದ ಕೆಲಸ ಮತ್ತೊಂದಿಲ್ಲ ಎಂದರು.
ಇನ್ನೋರ್ವ ಅತಿಥಿ ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಹನುಮಂತಪ್ಪ ಹತ್ತರಿಕಿಹಾಳ ಮಾತನಾಡಿ, ವಿದ್ಯಾರ್ಥಿಗಳು ವೃತ್ತಿಯಲ್ಲಿ ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು. ಎಕ್ಸಲೆಂಟ್ ನರ್ಸಿಂಗ್ ಕಾಲೇಜು ಜಿಲ್ಲಾ ಆಸ್ಪತ್ರೆಯೊಂದಿಗೆ ಸಂಯೋಜನೆ ಹೊಂದಿರುವುದರಿಂದ ಇಲ್ಲಿ ಓದುತ್ತಿರುವ ನರ್ಸಿಂಗ್ ವಿದ್ಯಾರ್ಥಿಗಳು ಅತ್ಯಂತ ಸುದೈವಿಗಳು ಎಂದು ಹೇಳಿದರು.
ಇದೇ ವೇಳೆ ಉದ್ಯಮಿ ಶಾಂತೇಶ ಕಳಸಗೊಂಡ ಮತ್ತು ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಸ್ಥೆಯ ನಿರ್ದೇಶಕರಾದ ಪ್ರದೀಪ್ ಲಿಂಗದಳ್ಳಿ ಪ್ರಾಚಾರ್ಯ ಶ್ರೀಮತಿ ಶ್ವೇತಾ ಬಿರಾದಾರ, ಶ್ರೀಮತಿ ಎಸ್ ಎ ಮೋಮಿನ್, ಶ್ರೀಮತಿ ಜಯಶ್ರೀ, ಅಮಿತ್ ಹಾಗೂ ಸಂಯೋಜಕರಾದ ರಾಜಶೇಖ ತಿಡಗುಂದಿ, ಶರಣಗೌಡ ಹಾಗೂ ಅಧ್ಯಾಪಕರು, ವಿದ್ಯಾರ್ಥಿಗಳು ಪಾಲಕರು, ಪಾಲ್ಗೊಂಡಿದ್ದರು.

“ದೇವರು ಎಲ್ಲ ಕಡೆ ತಾಯಿಯ ಜೊತೆಗೆ ಇನ್ನೊಬ್ಬ ತಾಯಿಯ ಸ್ಥಾನದಲ್ಲಿ ವೈದ್ಯರು ಮತ್ತು ನರ್ಸುಗಳನ್ನು ಸೃಷ್ಟಿಮಾಡಿದ್ದಾನೆ. ಹಾಗಾಗಿ ನೀವೆಲ್ಲರೂ ರೋಗಿಗಳಲ್ಲಿ ನಿಮ್ಮ ತಂದೆ ತಾಯಿಯನ್ನು ಕಂಡು ಪ್ರಾಮಾಣಿಕ ಸೇವೆ ಮಾಡಿದರೆ ನಮ್ಮ ತಾಯಿಯ ಸ್ಮರಣೆಗಾಗಿ ನಾವು ನರ್ಸಿಂಗ್ ಮಹಾವಿದ್ಯಾಲಯ ಪ್ರಾರಂಭ ಮಾಡಿದ್ದು ಸಾರ್ಥಕವಾಗುತ್ತದೆ.”

– ಸಂಗಮೇಶ ಬಬಲೇಶ್ವರ
ಸಂಸ್ಥಾಪಕರು
ಎಕ್ಸಲೆಂಟ್ ಕಾಲೇಜ್ ಆಫ್ ನರ್ಸಿಂಗ್ ಮಹಾವಿದ್ಯಾಲಯ
ಹಾಗೂ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಸಹಕಾರಿ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಕೈಜೋಡಿಸಿ :ದರ್ಶನಾಪುರ

ತಿಂಗಳಿಂದ ಬಬಲೇಶ್ವರ ನಾಕಾ ರಸ್ತೆ ಬಂದ್ :ಆಕ್ರೋಶ

ಮಾಧ್ಯಮದವರ ಕುಂದುಕೊರತೆ ತ್ವರಿತ ನಿವಾರಣೆಗೆ ಕ್ರಮ

ವಿಕಲಚೇತನರಿಗೋಸ್ಕರ ಪಾದಯಾತ್ರೆ ಬೆಂಬಲಾರ್ಥ ಸಭೆ ಇಂದು

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಸಹಕಾರಿ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಕೈಜೋಡಿಸಿ :ದರ್ಶನಾಪುರ
    In (ರಾಜ್ಯ ) ಜಿಲ್ಲೆ
  • ತಿಂಗಳಿಂದ ಬಬಲೇಶ್ವರ ನಾಕಾ ರಸ್ತೆ ಬಂದ್ :ಆಕ್ರೋಶ
    In (ರಾಜ್ಯ ) ಜಿಲ್ಲೆ
  • ಮಾಧ್ಯಮದವರ ಕುಂದುಕೊರತೆ ತ್ವರಿತ ನಿವಾರಣೆಗೆ ಕ್ರಮ
    In (ರಾಜ್ಯ ) ಜಿಲ್ಲೆ
  • ವಿಕಲಚೇತನರಿಗೋಸ್ಕರ ಪಾದಯಾತ್ರೆ ಬೆಂಬಲಾರ್ಥ ಸಭೆ ಇಂದು
    In (ರಾಜ್ಯ ) ಜಿಲ್ಲೆ
  • ಆರೋಗ್ಯ ಕ್ಷೇತ್ರಕ್ಕೆ ಎಕ್ಸಲೆಂಟ್ ನರ್ಸಿಂಗ್ ಕಾಲೇಜ್ ಕೊಡುಗೆ ಅನನ್ಯ
    In (ರಾಜ್ಯ ) ಜಿಲ್ಲೆ
  • ಪ್ರಜಾಸೇವಾ ಅಭಿಯಾನಕ್ಕೆ ಶಾಸಕ ವಿಠ್ಠಲ ಕಟಕಧೋಂಡಚಾಲನೆ
    In (ರಾಜ್ಯ ) ಜಿಲ್ಲೆ
  • ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಪ್ರಧಾನಿ ಮಧ್ಯಸ್ಥಿಕೆ ಅಗತ್ಯ
    In (ರಾಜ್ಯ ) ಜಿಲ್ಲೆ
  • ಜಿ.ಪಂ-ತಾ.ಪಂ ಚುನಾವಣೆ: ಅಲ್ಪಸಂಖ್ಯಾತರಿಗೆ‌ ಪ್ರಾತಿನಿಧ್ಯ ಕಲ್ಪಿಸಿ
    In (ರಾಜ್ಯ ) ಜಿಲ್ಲೆ
  • ಬೆಳೆಹಾನಿ ರೈತರಿಗೆ ಎಕರೆಗೆ ₹25,000 ಪರಿಹಾರ ನೀಡಲು ಆಗ್ರಹ
    In (ರಾಜ್ಯ ) ಜಿಲ್ಲೆ
  • 371(ಜೆ) ವ್ಯಾಪ್ತಿಗೆ ವಿಜಯಪುರ ಜಿಲ್ಲೆ ಸೇರ್ಪಡೆಗೆ ಆಗ್ರಹ
    In ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.