Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸಹಕಾರಿ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಕೈಜೋಡಿಸಿ :ದರ್ಶನಾಪುರ

ತಿಂಗಳಿಂದ ಬಬಲೇಶ್ವರ ನಾಕಾ ರಸ್ತೆ ಬಂದ್ :ಆಕ್ರೋಶ

ಮಾಧ್ಯಮದವರ ಕುಂದುಕೊರತೆ ತ್ವರಿತ ನಿವಾರಣೆಗೆ ಕ್ರಮ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮಾಧ್ಯಮದವರ ಕುಂದುಕೊರತೆ ತ್ವರಿತ ನಿವಾರಣೆಗೆ ಕ್ರಮ
(ರಾಜ್ಯ ) ಜಿಲ್ಲೆ

ಮಾಧ್ಯಮದವರ ಕುಂದುಕೊರತೆ ತ್ವರಿತ ನಿವಾರಣೆಗೆ ಕ್ರಮ

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಬೆಂಗಳೂರಿನಲ್ಲಿ ಜಿಲ್ಲಾ ಮಟ್ಟದ ದಿನಪತ್ರಿಕೆಗಳ ಮಾಲೀಕರು, ಸಂಪಾದಕರು, ಮುದ್ರಕರು ಹಾಗೂ ಜಿಲ್ಲಾ ವಾರ್ತಾಧಿಕಾರಿಗಳಿಗಾಗಿ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಭಾರತದ ಪತ್ರಿಕಾ ನೋಂದಣೆಯ ಪ್ರಧಾನ ಮಹಾನಿರ್ದೇಶಕ ಯೋಗೇಶ್ ಕುಮಾರ್ ಬವೇಜಾ ಭರವಸೆ

ಉದಯರಶ್ಮಿ ದಿನಪತ್ರಿಕೆ

ಬೆಂಗಳೂರು: ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ನೋಂದಣಿ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರವು ಹಲವಾರು ಮಹತ್ವದ ಬದಲಾವಣೆಗಳನ್ನು ತರುವ ಮೂಲಕ ಸುಮಾರು 150 ವರ್ಷದಷ್ಟು ಹಳೆಯ ಕಾಯ್ದೆಯನ್ನು ಮಾಧ್ಯಮದವರ ಅನುಕೂಲಕ್ಕಾಗಿ ಡಿಜಿಟಲೀಕರಣದೊಂದಿಗೆ ಸರಳೀಕರಣಗೊಳಿಸುವ ಮೂಲಕ ಮಾಧ್ಯಮ ಕ್ಷೇತ್ರವನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಭಾರತದ ಪತ್ರಿಕಾ ನೋಂದಣೆಯ ಪ್ರಧಾನ ಮಹಾನಿರ್ದೇಶಕರಾದ ಯೋಗೇಶ್ ಕುಮಾರ್ ಬವೇಜಾ ಅವರು ತಿಳಿಸಿದರು.
ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವಾರ್ತಾ ಶಾಖೆ ಬೆಂಗಳೂರು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ವಾರ್ತಾಸೌಧದ ಮಹಾತ್ಮ ಗಾಂಧೀ ಮಾಧ್ಯಮ ಕೇಂದ್ರದ ಸಭಾಂಗಣದಲ್ಲಿ ಇಂದು “ ಪತ್ರಿಕಾ ಮತ್ತು ನಿಯತಕಾಲಿಕೆಗಳ ನೋದಂಣೆ ಕಾಯ್ದೆ 2023” ಮತ್ತು “ಪ್ರೆಸ್ ಸೇವಾ ಪೋರ್ಟಲ್” ಗೆ ಸಂಬಂಧಿಸಿದ ಕುಂದುಕೊರತೆ, ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ದಿನಪತ್ರಿಕೆಗಳ ಮಾಲೀಕರು, ಸಂಪಾದಕರು, ಮುದ್ರಕರು ಹಾಗೂ ಜಿಲ್ಲಾ ವಾರ್ತಾಧಿಕಾರಿಗಳಿಗಾಗಿ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಈ ಹಿಂದೆ ಹೊಸ ಪತ್ರಿಕೆ ಆರಂಭಿಸಬೇಕಾದರೆ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಅರ್ಜಿ ಸಲ್ಲಿಸಿ ದೆಹಲಿಗೆ ಕಳುಹಿಸಬೇಕಾಗಿತ್ತು. ಇದರಿಂದ ತಿಂಗಳುಗಳು ಹಾಗೂ ವರ್ಷಗಳೇ ಕಳೆಯುತ್ತಿದ್ದವು. ಆದರೆ ಈಗ 2023 ರ ಹೊಸ ಖಾಯ್ದೆ ಮೂಲಕ ಎಲ್ಲಾ ಪ್ರಕ್ರಿಯೆಗಳನ್ನು ‘ಪ್ರೆಸ್ ಸೇವಾ ಪೋರ್ಟಲ್’ ಮೂಲಕ ಆನ್ಲೈನ್ನಲ್ಲಿ ನಡೆಯಲಿರುವುದರಿಂದ ಭೌತಿಕ ದಾಖಲೆಗಳ ಸಲ್ಲಿಕೆಗೆ ಅವಕಾಶವಿರುವುದಿಲ್ಲ. ಹಾಗಾಗಿ ನೋಂದಣಿ ಪ್ರಕ್ರಿಯೆಯು ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ನೆರವೇರಲಿದೆ. ಯಾವುದೇ ದಾಖಲೆಗಳು ಕಳೆದುಹೋಗುವ ಅಥವಾ ಕಾಗದಪತ್ರಗಳ ಅಲೆದಾಟದ ಸಮಸ್ಯೆ ಇರುವುದಿಲ್ಲ. ಆದ್ದರಿಂದ ಪತ್ರಿಕೆಗಳು, ನಿಯತಕಾಲಿಕೆಗಳ ನೋಂದಣಿ ಕಾಯ್ದೆಯ ಮಾರ್ಗಸೂಚಿಯನ್ನು ಎಲ್ಲರೂ ಚಾಚೂ ತಪ್ಪದೆ ಪಾಲಿಸಬೇಕು ಎಂದು ತಿಳಿಸಿದರು.
ನೋಂದಣಿ ಪ್ರಕ್ರಿಯೆಯ ಕಾಲಮಿತಿಯನ್ನು ಗಣನೀಯವಾಗಿ ಕಡಿತಗೊಳಿಸಲಾಗಿದ್ದು, ಅರ್ಜಿ ಸಲ್ಲಿಸಿದ ಕೇವಲ 3 ತಿಂಗಳೊಳಗೆ ಹೊಸ ಪತ್ರಿಕೆಯನ್ನು ಪ್ರಾರಂಭಿಸಬಹುದು ಎಂದು ತಿಳಿಸಿದರು. ಪಿಆರ್ ಜಿಐನಿಂದ ಸಮಗ್ರ ಪರಿಶೀಲನೆ ಬಳಿಕ ಅಂತಿಮವಾಗಿ ಟೈಟಲ್ ನೀಡಿದ ಮೇಲೆ 12 ತಿಂಗಳೊಳಗೆ ಪತ್ರಿಕೆಯನ್ನು ಆರಂಭಿಸುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.
ಪತ್ರಿಕೆಗಳ ಹೊಸ ರಿಜಿಸ್ಟ್ರೇಶನ್ ಮಾಡುವ ಬಗ್ಗೆ, ಮಾಲೀಕತ್ವ ಬದಲಾವಣೆ, ವಿಳಾಸ ಬದಲಾವಣೆ ಮಾಡಿಸುವುದಕ್ಕೆ ಸಹ ನಿಯಮಾನುಸಾರ ಅವಕಾಶವಿರುತ್ತದೆ. ಹೊಸ ನೋಂದಣಿ ಹೇಗೆ ಮಾಡುವುದು, ಹೊಸ ಆವೃತ್ತಿ (New Edition) ಸೇರ್ಪಡೆ ಹೇಗೆ, ನೋಂದಣಿ ಪರಿಷ್ಕರಣೆ, ಮಾಲೀಕತ್ವ ವರ್ಗಾವಣೆ , ದಂಡ ಪಾವತಿ, ಮುದ್ರಣ ಕಾಗದ ಆಮದು ಮತ್ತು ಪತ್ರಿಕೆಗಳ ಸ್ಥಗಿತಗೊಳಿಸುವಿಕೆ/ರದ್ಧತಿ, ಇವೇ ಮುಂತಾದ ಪ್ರಕ್ರಿಯೆಗಳನ್ನು ಡಿಜಿಟಲ್ ಮೂಲಕ ಹೇಗೆ ಮಾಡುವುದು ಎಂಬುದನ್ನು ವಿವರಿಸಿದರು.
ಸಂವಾದದಲ್ಲಿ ಸಂಪಾದಕರುಗಳು ಹಾಗೂ ಜಿಲ್ಲಾ ವಾರ್ತಾಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಇಲ್ಲಿನ ಪ್ರತಿ ಸಲಹೆಗಳನ್ನು ಸ್ವೀಕರಿಸಲಾಗಿದೆ ಹಾಗೂ ಈ ಕುರಿತಂತೆ ಕೇಂದ್ರದ ವಾರ್ತಾ ಇಲಾಖೆಯ ಗಮನಕ್ಕೆ ತರಲಾಗುವುದು. ಕೇಂದ್ರ ವಾರ್ತಾ ಇಲಾಖೆಯ ಕರ್ನಾಟಕದ ಶಾಖೆಗಳಲ್ಲಿ ಪೇಪರ್ ಗಳ ಹಾಜರಾತಿ ಕುರಿತಂತೆ ಮುದ್ರಿತ ಪೇಪರ್ ಗಳನ್ನು ಪಡೆಯುವ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.
ಇದಕ್ಕೂ ಮುಂಚಿತವಾಗಿ ಮಾತನಾಡಿದ ವಾರ್ತಾ ಇಲಾಖೆಯ ಕಾರ್ಯದರ್ಶಿಗಳಾದ ಜೆ. ಮಂಜುನಾಥ್ ಅವರು ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿದೆ. ಸಮಾಜದಲ್ಲಿ ನೂರಾರು ಉಳುಕುಗಳು ಇರುತ್ತದೆ. ಆದರೆ ಮಾಧ್ಯಮದವರು ಸಮಾಜಕ್ಕೆ ಒಳ್ಳೆಯದಾಗುವಂತಹ ಸುದ್ದಿಗಳನ್ನು ನೀಡಬೇಕು. ಪತ್ರಿಕೆಗಳು ನಕರಾತ್ಮಕ ವಿಷಯಗಳಿಗೆ ಪ್ರಾಧಾನ್ಯತೆ ಕೊಡಬಾರದು. ಬದಲಿಗೆ ಆಶಾದಾಯಕ, ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಗೆ ಪತ್ರಿಕೆಗಳು ಸೇರ್ಪಡೆ ಆಗುತ್ತಿರುವ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಪತ್ರಿಕೆಗಳ ಸಂಖ್ಯೆ ಹೆಚ್ಚಳದಿಂದ ಸರಕಾರಕ್ಕೆ ಆರ್ಥಿಕ ಹೊರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪತ್ರಿಕೆಗಳ ನೋಂದಣಿ, ಹಾಜರಾತಿ, ಪ್ರಸಾರ ಸಂಖ್ಯೆ ಮೇಲೆ ಇನ್ನಷ್ಟು ನಿಗಾ ವಹಿಸುವ ಅಗತ್ಯವಿರುತ್ತದೆ. ಕೃತಕ ಬುದ್ಧಿಮತ್ತೆ(ಎ.ಐ), ಚಾಟ್ ಜಿಪಿಟಿ ಮತ್ತಿತರ ತಂತ್ರಜ್ಞಾನದ ಈ ಯುಗದಲ್ಲಿ ದಿನಪತ್ರಿಕೆಗಳ ಹಾಜರಾತಿಗಾಗಿ 48 ಗಂಟೆಗಳ ಕಾಲಾವಕಾಶ ಅಗತ್ಯವಿಲ್ಲ ಎನಿಸುತ್ತದೆ. ಇದಲ್ಲದೇ ಪ್ರಸಾರ ಸಂಖ್ಯೆಯ ಬಗ್ಗೆಯೂ ನಿಗಾ ವಹಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಆರಂಭದಲ್ಲಿ ಕಾರ್ಯಾಗಾರದ ಉದ್ದೇಶ ಕುರಿತು ಪ್ರಾಸ್ತಾವಿಕವಾಗಿ ಬೆಂಗಳೂರಿನ ದೂರದರ್ಶನ ಕೇಂದ್ರದ ಮುಖ್ಯಸ್ಥರಾದ ಬಿ.ಕೆ. ಕೇಶವಮೂರ್ತಿ ಅವರು ಮಾತನಾಡಿದರು, ಕಾರ್ಯಗಾರದಲ್ಲಿ ಎನ್.ಐ.ಸಿ ಉಪನಿರ್ದೇಶಕರಾದ ಗೌರವ್ ಶರ್ಮ್, ವಾರ್ತಾ ಇಲಾಖೆಯ ಹಿರಿಯ ಅಧಿಕಾರಿಗಳಾದ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ ವಾರ್ತಾಧಿಕಾರಿಗಳು ಮತ್ತು ಸ್ಥಳೀಯ ಹಾಗೂ ಪ್ರಾದೇಶಿಕ ಪತ್ರಿಕೆಗಳ ಮಾಲೀಕರು, ಸಂಪಾದಕರುಗಳು ಉಪಸ್ಥಿತರಿದ್ದರು.

ಪತ್ರಕರ್ತರು” ಯಾರು? ಎಂಬ ಸ್ಪಷ್ಟ ವ್ಯಾಖ್ಯಾನ ಅಗತ್ಯ :ಎಂ.ಎನ್.ಅನುಚೇತ್

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಎಂ.ಎನ್.ಅನುಚೇತ್ ಅವರು ಮಾತನಾಡಿ, ದಿನಪತ್ರಿಕೆಗಳ ಬೆಂಬಲಕ್ಕಾಗಿ ಸರ್ಕಾರವು ಪ್ರೋತ್ಸಾಹ ಜಾಹೀರಾತನ್ನು ನೀಡುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರೋತ್ಸಾಹ ಜಾಹೀರಾತು ಪಡೆಯುವುದಕ್ಕಾಗಿಯೇ ದಿನಪತ್ರಿಕೆಗಳ ಹುಟ್ಟಿಕೊಳ್ಳುತ್ತಿವೆ. ಪ್ರೋತ್ಸಾಹ ಜಾಹೀರಾತಿಗಾಗಿ 2022 ರಲ್ಲಿ 44 ಕೋಟಿ ರೂಪಾಯಿ ವೆಚ್ಚವಾಗಿತ್ತು. ಆದರೆ 2025-2026 ರ ವೇಳೆಗೆ ಅದರ ವೆಚ್ಚ ದ್ವಿಗುಣವಾಗಿ 82 ಕೋಟಿ ರೂಪಾಯಿಗಳಾಗಿರುತ್ತದೆ. ಆದ್ದರಿಂದ ನಿಜವಾಗಿಯೂ ಪತ್ರಿಕೋದ್ಯಮವನ್ನೇ ವೃತ್ತಿಯಾಗಿಸಿಕೊಂಡಿರುವವರಿಗೆ ಪ್ರೋತ್ಸಾಹ ಜಾಹೀರಾತು ತಲುಪಬೇಕಿದೆ. ಹಾಗಾಗಿ ಇದಕ್ಕೆ ಕಡಿವಾಣ ಹಾಕುವ ಅಗತ್ಯವಿರುವುದರಿಂದ ರಾಜ್ಯದ ಎಲ್ಲಾ ಮಾಧ್ಯಮದವರು ಸಹಕರಿಸಬೇಕೆಂದರು.
ಸಾಮಾಜಿಕ ಜಾಲತಾಣ, ಡಿಜಿಟಲ್ ಯುಗದಲ್ಲಿ ನಿಜವಾದ ಪತ್ರಕರ್ತ ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಯಾರು ಪತ್ರಕರ್ತ ಎಂಬುದರ ಬಗ್ಗೆ ರಾಷ್ಟ್ರಮಟ್ಟದಲ್ಲಿ ಗಂಭೀರ ಚರ್ಚೆಯಾಗಬೇಕಿದೆ. ಪಿಆರ್ ಜಿಐ ಪತ್ರಿಕೆಗಳ ನೋಂದಣಿ, ನಿರ್ವಹಣೆ ಕುರಿತು ಗಮನಹರಿಸುತ್ತಿದೆ. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ “ಪತ್ರಕರ್ತ” ಯಾರು ಎಂಬುದು ಸ್ಪಷ್ಟವಾಗಿ ವ್ಯಾಖ್ಯಾನಿಸುವ ಅಗತ್ಯವಿದೆ ಎಂದು ಆಯುಕ್ತ ಅನುಚೇತ್ ಅವರು ಪ್ರತಿಪಾದಿಸಿದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಸಹಕಾರಿ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಕೈಜೋಡಿಸಿ :ದರ್ಶನಾಪುರ

ತಿಂಗಳಿಂದ ಬಬಲೇಶ್ವರ ನಾಕಾ ರಸ್ತೆ ಬಂದ್ :ಆಕ್ರೋಶ

ವಿಕಲಚೇತನರಿಗೋಸ್ಕರ ಪಾದಯಾತ್ರೆ ಬೆಂಬಲಾರ್ಥ ಸಭೆ ಇಂದು

ಆರೋಗ್ಯ ಕ್ಷೇತ್ರಕ್ಕೆ ಎಕ್ಸಲೆಂಟ್ ನರ್ಸಿಂಗ್ ಕಾಲೇಜ್ ಕೊಡುಗೆ ಅನನ್ಯ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಸಹಕಾರಿ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಕೈಜೋಡಿಸಿ :ದರ್ಶನಾಪುರ
    In (ರಾಜ್ಯ ) ಜಿಲ್ಲೆ
  • ತಿಂಗಳಿಂದ ಬಬಲೇಶ್ವರ ನಾಕಾ ರಸ್ತೆ ಬಂದ್ :ಆಕ್ರೋಶ
    In (ರಾಜ್ಯ ) ಜಿಲ್ಲೆ
  • ಮಾಧ್ಯಮದವರ ಕುಂದುಕೊರತೆ ತ್ವರಿತ ನಿವಾರಣೆಗೆ ಕ್ರಮ
    In (ರಾಜ್ಯ ) ಜಿಲ್ಲೆ
  • ವಿಕಲಚೇತನರಿಗೋಸ್ಕರ ಪಾದಯಾತ್ರೆ ಬೆಂಬಲಾರ್ಥ ಸಭೆ ಇಂದು
    In (ರಾಜ್ಯ ) ಜಿಲ್ಲೆ
  • ಆರೋಗ್ಯ ಕ್ಷೇತ್ರಕ್ಕೆ ಎಕ್ಸಲೆಂಟ್ ನರ್ಸಿಂಗ್ ಕಾಲೇಜ್ ಕೊಡುಗೆ ಅನನ್ಯ
    In (ರಾಜ್ಯ ) ಜಿಲ್ಲೆ
  • ಪ್ರಜಾಸೇವಾ ಅಭಿಯಾನಕ್ಕೆ ಶಾಸಕ ವಿಠ್ಠಲ ಕಟಕಧೋಂಡಚಾಲನೆ
    In (ರಾಜ್ಯ ) ಜಿಲ್ಲೆ
  • ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಪ್ರಧಾನಿ ಮಧ್ಯಸ್ಥಿಕೆ ಅಗತ್ಯ
    In (ರಾಜ್ಯ ) ಜಿಲ್ಲೆ
  • ಜಿ.ಪಂ-ತಾ.ಪಂ ಚುನಾವಣೆ: ಅಲ್ಪಸಂಖ್ಯಾತರಿಗೆ‌ ಪ್ರಾತಿನಿಧ್ಯ ಕಲ್ಪಿಸಿ
    In (ರಾಜ್ಯ ) ಜಿಲ್ಲೆ
  • ಬೆಳೆಹಾನಿ ರೈತರಿಗೆ ಎಕರೆಗೆ ₹25,000 ಪರಿಹಾರ ನೀಡಲು ಆಗ್ರಹ
    In (ರಾಜ್ಯ ) ಜಿಲ್ಲೆ
  • 371(ಜೆ) ವ್ಯಾಪ್ತಿಗೆ ವಿಜಯಪುರ ಜಿಲ್ಲೆ ಸೇರ್ಪಡೆಗೆ ಆಗ್ರಹ
    In ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.