ಚಡಚಣ: ಪಟ್ಟಣದ ಶ್ರೀ ಸಂಗಮೇಶ್ವರ ಮಹಾವಿದ್ಯಾಲಯದ ಬಿಸಿಎ ವಿಭಾಗದ ವಿದ್ಯಾರ್ಥಿಗಳು ಶ್ಯೆಕ್ಷಣಿಕ ವರ್ಷ ೨೦೨೨-೨೩ ನೇ ಸಾಲಿನಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಪ್ರಥಮ ಸ್ಥಾನವನ್ನು ಕುಮಾರಿ. ವಿಜಯಲಕ್ಷೀ ಸಿದ್ದಾ (೯೧.೫೫), ದ್ವಿತೀಯ ಸ್ಥಾನವನ್ನು ಕುಮಾರಿ. ಐಶ್ವರ್ಯ ಅವಟಿ(೮೯.೩೪), ತೃತೀಯ ಸ್ಥಾನವನ್ನು ಕುಮಾರಿ. ವರ್ಷಾ ಖಜ್ಜೂರಗಿ(೮೮.೦೦), ಉನ್ನತ ಶ್ರೇಣಿಯಲ್ಲಿ ಅಂಕ ಗಳಿಸಿ ಸಾಧನೆಗೈದಿದ್ದಾರೆ.
ಈ ವಿದ್ಯಾರ್ಥಿಗಳ ಸಾಧನೆಗೆ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು, ಪ್ರಾರ್ಚಾಯರು ಮತ್ತು ಪ್ರಾಧ್ಯಾಪಕರು, ಬಿಸಿಎ ವಿಭಾಗದ ಮುಖ್ಯಸ್ಥರು, ಹಾಗೂ ಭೋಧಕೇತರ ಸಿಬ್ಬಂದಿ ವೃಂದ ಹರ್ಷ ವ್ಯಕ್ತಪಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

