ವಿಜಯಪುರ: ಜಿಲ್ಲೆಯ ಚಡಚಣ ಪಟ್ಟಣ ಪಂಚಾಯತಿಗೆ ಸಾರ್ವತ್ರಿಕ ಚುನಾವಣೆ, ಮುದ್ದೇಬಿಹಾಳ ಪುರಸಭೆಗೆ ವಿವಿಧ ಕಾರಣಗಳಿಂದ ತೆರವಾದ ವಾರ್ಡ ನಂ.೧೮ರ ಸ್ಥಾನಕ್ಕೆ ಉಪ ಚುನಾವಣೆ ಹಾಗೂ ಮನಗೂಳಿ ಪಟ್ಟಣ ಪಂಚಾಯತ್‌ಗೆ ವಿವಿಧ ಕಾರಣಗಳಿಂದ ತೆರವಾದ ವಾರ್ಡ ಸಂ.೭ರ ಸ್ಥಾನಕ್ಕೆ ಉಪ ಚುನಾವಣೆಗೆೆ ಡಿ.೨೭ ರಂದು ಮತದಾನ ನಡೆಯಲಿರುವುದರಿಂದ ಶಾಂತಿಯುತ ಮತದಾನಕ್ಕಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಮತದಾನದ ಪೂರ್ವ ದಿನ ಹಾಗೂ ಮತದಾನ ದಿನ ಚಡಚಣ, ಮನಗೂಳಿ ಮತ್ತು ಮುದ್ದೇಬಿಹಾಳ ಪಟ್ಟಣಗಳಲ್ಲಿ ನಡೆಯುವ ಸಂತೆ, ಜಾತ್ರೆ ಹಾಗೂ ಉತ್ಸವಗಳನ್ನು ನಿಷೇಧಿಸಿ ಜಿಲ್ಲಾದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
