ಹೊನವಾಡ: ಡಾ.ಬಿ.ಆರ್ ಅಂಬೇಡ್ಕರ ಅವರ ಆಲೋಚನೆಗಳು, ಸಾಮಾಜಿಕ ಅಸಮಾನತೆ, ಲಿಂಗ ತಾರತಮ್ಯ, ರಾಜಕೀಯ, ಆರ್ಥಿಕ ವಿಷಯಗಳ ಬಗ್ಗೆ ಸಂವಿಧಾನದಲ್ಲಿರುವ ಇತರೆ ಪ್ರಮುಖವಾದ ವಿಷಯಗಳ ಮೇಲೆ ಬೆಳಕು ಚೆಲ್ಲುವಂತೆ ಸಂವಿಧಾನದ ಕುರಿತು ನಾಟಕವನ್ನು ಸಿದ್ಧಪಡಿಸಿ ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳಲ್ಲಿ ಪ್ರದರ್ಶನಗೊಳ್ಳುವ ಮೂಲಕ ಸಂವಿಧಾನದ ಕುರಿತು ಗ್ರಾಮೀಣ ಜನರಲ್ಲಿ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಾಚಾರ್ಯ ಎಂ.ಎ ಹಿರೇಮಠ ನುಡಿದರು.
ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ವಿ ವಿ ಎಸ್ ಪ್ರೌಢ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವಿಜಯಪುರ ತಾಲ್ಲೂಕು ಪಂಚಾಯತ್ ತಿಕೋಟಾ ಹಾಗೂ ಸಪ್ತಗಿರಿ ಫೌಂಡೇಶನ್ ವಿಜಯಪುರ ವತಿಯಿಂದ ಪ್ರದರ್ಶನ ಮಾಡಲಾಯಿತು.
ಮೊದಮೊದಲಿಗೆ, ಕನ್ನಡದ ಸಾಹಿತಿಗಳ ಪ್ರಖ್ಯಾತ ಕಾದಂಬರಿಗಳ ಕೆಲವು ತುಣುಕುಗಳನ್ನು ಬೀದಿ ನಾಟಕ ರೂಪಕ್ಕೆ ಪರಿವರ್ತಿಸಿ, ಆಯಾ ಸಾಹಿತಿಗಳ ಸಮ್ಮುಖದಲ್ಲಿ, ಪ್ರದರ್ಶನ ನೀಡಿ, ಗೌರವ ಸಮ್ಮಾನ ಮಾಡಿ, ಸಾಹಿತಿಗಳ ಮತ್ತು ಅವರ ಕಾದಂಬರಿಯನ್ನು ಪರಿಚಯಿಸುವ ಕಾರ್ಯಕ್ರಮಗಳಲ್ಲಿ ಬೀದಿ ನಾಟಕ ಬಳಕೆಯಾಗುತಿತ್ತು ಎಂದು ಎಸ್ ಜಿ ಲಕ್ಕುಂಡಿಮಠ ಹೇಳಿದರು.
ಕರ್ನಾಟಕದಲ್ಲಿ ಬೀದಿ ನಾಟಕದ ಪ್ರಕಾರವನ್ನು ಪರಿಚಯಿಸಿದವರು ಹಿರಿಯರಾದ ಎ.ಎಸ್.ಮೂರ್ತಿಯವರು. ನಂತರ ಜನರಲ್ಲಿ ಸಕಾರಾತ್ಮಕ ಭಾವನೆಗೆ ಸಾಮಾಜಿಕ ಚಿಂತನೆಗಳಿಗೆ ಧ್ವನಿಯಾಗಲಿ ಇನ್ನಷ್ಟು ಬೆಳಗಲಿ ಸಾಮಾಜಿಕ ಕಳಕಳಿಯ ಸಾಂಸ್ಕೃತಿಕ ಲೋಕ ಶಕ್ತಿಶಾಲಿಯಾಗಲಿ ಎಂಬ ಆಶಾವಾದ ಮಾತ್ರ ನಮ್ಮನ್ನು ಮುಂದಕ್ಕೆ ಕರೆದೊಯ್ಯಲಿ ಎಂದು ಸಹ ಶಿಕ್ಷಕ ಆಯ್ ಕೆ ನದಾಫ್ ಹೇಳಿದರು.
ಸಪ್ತಗಿರಿ ಫೌಂಡೇಶನ್ ಅಧ್ಯಕ್ಷ ಸುನಿಲ್ ರೆಡ್ಡಿ ಕಾರ್ಯದರ್ಶಿ ಮಲ್ಲಕಾರ್ಜುನ ರೆಡ್ಡಿ ಸಂಚಾಲಕ ಸಂಗಮೇಶ ಕಲಾವಿದರಾದ ಎ ಎನ್ ಹುಲಗೆಪ್ಪ ಬಂಡೆಹಳ್ಳಿ, ಮಮತಮ್ಮ ತುಮಕೂರು ರವಿಕುಮಾರ ಬಂಡೆಹಳ್ಳಿ ವೆಂಕಟೇಶ್ ಕೊರಟಗೆರೆ ರೇಣುಕಾ ಗಂಗಾವತಿ ನಿರ್ದೇಶಕರು ಎಂ ಅಮೃತ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರು ಪ್ರೌಢ ಶಾಲೆಯ ಹಾಗೂ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

