ದೇವರಹಿಪ್ಪರಗಿ: ವೀರಭದ್ರೇಶ್ವರ ೧೧ನೇ ವರ್ಷದ ಕಾರ್ತೀಕೋತ್ಸವ ಪುರವಂತರ ಸೇವೆ ಹಾಗೂ ಪಲ್ಲಕ್ಕಿ ಉತ್ಸವದೊಂದಿಗೆ ಸಂಪನ್ನಗೊಂಡಿತು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಕಾರ್ತೀಕೋತ್ಸವ ಹಾಗೂ ಪ್ರವಚನ ಮಂಗಲದ ಅಂಗವಾಗಿ ಮಂಗಳವಾರ ಬೆಳಿಗ್ಗೆ ಪುರವಂತರ ಸೇವೆ ಹಾಗೂ ಪಲ್ಲಕ್ಕಿ ಉತ್ಸವ ಭಕ್ತ ಸಮೂಹದ ಸಮ್ಮುಖದಲ್ಲಿ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭಗೊಂಡಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಲ್ಮೇಶ್ವರ ದೇವಸ್ಥಾನದ ಗಂಗಾಸ್ಥಳ ತಲುಪಿತು. ಪುನಃ ವೀರಭದ್ರೇಶ್ವರ ದೇವಸ್ಥಾನಕ್ಕೆ ಮರಳಿತು. ನಂತರ ಮಹಾಪ್ರಸಾದ ವಿತರಣೆಯಾಯಿತು. ಸಾಯಂಕಾಲ ಭಕ್ತರು ಭಕ್ತಿ, ಭಾವದೊಂದಿಗೆ ದೀಪ ಬೆಳಗಿಸಿ ಕಾರ್ತೀಕೋತ್ಸವ ಆಚರಿಸಿದರು.
ಸಮಿತಿಯ ಸಿ.ಕೆ.ಕುದರಿ, ಪ್ರಭುದೇವ ಹಿರೇಮಠ, ಜಗದೇವಪ್ಪ ಬಿರಾದಾರ, ಯಲಗೂರೇಶ ದೇವೂರ, ಮಡಿವಾಳಪ್ಪ ಮಣೂರ, ರಮೇಶ ಮಶಾನವರ, ರವಿ ಯಾಳಗಿ, ಈರಣ್ಣ ಧುತ್ತರಗಾಂವಿ, ವಿನೋದ ನಾಶಿಮಠ, ಮಡಿವಾಳಯ್ಯ ನಾಶೀಮಠ, ಸಂಗನಗೌಡ ಪಾಟೀಲ, ಬಾಬುಗೌಡ ಪಾಟೀಲ ತೇಜಪ್ಪ ಕಕ್ಕಳಮೇಲಿ, ವೀರಭದ್ರಯ್ಯ ಮಲ್ಲಿಕಾರ್ಜುನಮಠ, ಪ್ರಕಾಶ ಮಾಳನೂರ, ಈರಪ್ಪ ಹೊಸಮನಿ, ಪ್ರಸಾದ ಬಡಿಗೇರ, ಪ್ರಕಾಶ ಮಣೂರ, ವೀರಣ್ಣ ಮಣೂರ, ರಾಜು ಮಿರಗಿ, ಶೇಖರ ವಾಡೇದಮನಿ, ತುಕಾರಾಮ ಮಾಳದಕರ, ಅಜ್ಜಯ್ಯ ಹಿರೇಮಠ, ಗುರುಪಾದ ಬುದ್ನಿ, ಶ್ರೀಶೈಲ ಮಣೂರ, ಶ್ರೀಶೈಲ ದೇಸಾಯಿ ಸೇರಿದಂತೆ ಮಹಿಳೆಯರು, ಮಕ್ಕಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

