– ದೇವೇಂದ್ರ ಕ. ಹೆಳವರ*
ಪತ್ರಕರ್ತರು, ವಿಜಯಪುರ.
ಮೊ.9900762949
ನಿಮ್ಮ
ತನು ಶುದ್ಧ
ಭಾವ ಶುದ್ಧ
ನಡೆ ಶುದ್ಧ
ನುಡಿ ಶುದ್ಧ
ನುಡಿದಂತೆ ನಡೆದು
ತೋರಿದ ಜ್ಞಾನಯೋಗಿಯೇ
ನಿಮಗೆ ಕೋಟಿ ಕೋಟಿ ನಮನ
ನೀವು
ಎಂದೂ
ಪ್ರಶಸ್ತಿ – ಪುರಸ್ಕಾರ ನಿರೀಕ್ಷಿಸಿದವರಲ್ಲ
ಸನ್ಮಾನ ಉಡುಗೊರೆ ಬಯಸಿದವರಲ್ಲ
ಯಾರ ಮನವೂ ನೋಯಿಸಿದವರಲ್ಲ
ಬಿರುನುಡಿಗಳೆಂದೂ
ಆಡಿದವರಲ್ಲ.
ಬದುಕಿದರೆ ಹೀಗೆ ಬದುಕಬೇಕೆಂಬ
ಜೀವನಪಾಠ ಕಲಿಸಿಕೊಟ್ಟ
ಜ್ಞಾನಯೋಗಿಯೇ
ನಿಮಗೆ ಕೋಟಿ ಕೋಟಿ ನಮನ
ನೀವು
ಜ್ಞಾನದ ಗಣಿ
ಶಾಂತಮೂರ್ತಿ
ಗಿಡ- ಮರ
ಪಶು – ಪಕ್ಷಿ
ಪ್ರಕೃತಿಯಲ್ಲಿ
ದೇವನ ರೂಪ
ಕಂಡವರು.
ಜಾತಿ-ಮತ
ಪಂಥವನ್ನು
ಮೀರಿ ನಿಂತು
ಸರ್ವರನ್ನು ಸಮಭಾವದಿಂದ
ಕಂಡ ಜ್ಞಾನಯೋಗಿಯೇ ನಿಮಗೆ ಕೋಟಿ ಕೋಟಿ ನಮನ
ನೀವು
ಅಜ್ಞಾನದ ಅಂಧಕಾರ
ದೂರ ಮಾಡಿ ಎಲ್ಲರ
ಹೃದಯ- ಹೃದಯಗಳಲ್ಲಿ ಜ್ಞಾನದ ಜ್ಯೋತಿ ಬೆಳಗಿದವರು.
ಎಲ್ಲರಿಗೂ ಮಧುರ ಪ್ರೀತಿಯನ್ನೇ ಹಂಚಿದವರು.
ಆಧ್ಯಾತ್ಮಿಕ ಪ್ರವಚನದ ಮೂಲಕ ಜ್ಞಾನಾಮೃತ ನೀಡಿದ ಜ್ಞಾನಯೋಗಿಯೇ
ನಿಮಗೆ ಕೋಟಿ ಕೋಟಿ ನಮನ
ನಿಮ್ಮ
ಸರಳ ಜೀವನವೇ
ಮನುಕುಲಕೆ ಒಂದು
ಒಳ್ಳೆಯ ಸಂದೇಶ
ಜಗತ್ತಿನ ಎಲ್ಲೆಡೆ
ಆಧ್ಯಾತ್ಮಿಕ ಕಂಪು ಸೂಸಿ
ಬಸವನಾಡಿನ
ಕೀರ್ತಿ ಹೆಚ್ಚಿಸಿದ
ಜ್ಞಾನಯೋಗಿಯೇ
ನಿಮಗೆ ಕೋಟಿ ಕೋಟಿ ನಮನ

