Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಎಸ್.ಎಮ್.ಮಣೂರ ಪಬ್ಲಿಕ್ ಸ್ಕೂಲ್ ನಲ್ಲಿ ಗುಣಾತ್ಮಕ ಶಿಕ್ಷಣ

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಭದ್ರತಾ ವೈಫಲ್ಯ ಎಂಬ ಅಂಶಗಳ ಸುತ್ತ..
ವಿಶೇಷ ಲೇಖನ

ಭದ್ರತಾ ವೈಫಲ್ಯ ಎಂಬ ಅಂಶಗಳ ಸುತ್ತ..

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಭಾರತದ ಸಂಸತ್ತಿನಲ್ಲಿ ನಡೆದ ಕಲರ್ ಗ್ಯಾಸ್‌ ಸ್ಪೋಟದ ಪ್ರಹಸನದ ಹಿನ್ನೆಲೆಯಲ್ಲಿ..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ
-ವಿವೇಕಾನಂದ ಎಚ್ ಕೆ, ಬೆಂಗಳೂರು

ಹಿಂದೆ ಎಷ್ಟೋ ಘಟನೆಗಳು ನಡೆದಿವೆ, ಈಗಲು ಎಷ್ಟೋ ವಿಧ್ವಂಸಕ ಕೃತ್ಯಗಳು ನಡೆಯುತ್ತಿವೆ, ಮುಂದೆ ಇನ್ನೂ ಭಯಂಕರ ಹತ್ಯೆಗಳು‌ ಸಂಭವಿಸಬಹುದು. ಆಗಲು ಎಲ್ಲರೂ ಹೇಳುವುದು ಭದ್ರತಾ ವೈಫಲ್ಯ..

ಇದು ಕೇವಲ ನಮ್ಮ ದೇಶಕ್ಕೆ ಮಾತ್ರ ಸೀಮಿತವಲ್ಲ. ವಿಶ್ವದ ಬಲಿಷ್ಠ ದೇಶಗಳಲ್ಲಿ ಸಹ ಭದ್ರತಾ ವೈಫಲ್ಯ ಎಂಬ ಕಾರಣ ಸದಾ ಸಿದ್ಧವಾಗಿರುತ್ತದೆ..

ಅಮೆರಿಕದಲ್ಲಿ, ಇಂಗ್ಲೇಂಡಿನಲ್ಲಿ, ಆಫ್ರಿಕಾದಲ್ಲಿ, ಆಸ್ಟ್ರೇಲಿಯಾದಲ್ಲಿ, ಜಪಾನಿನಲ್ಲಿ, ಚೀನಾದಲ್ಲಿ, ಭಾರತದಲ್ಲಿ ಹೀಗೆ ಎಲ್ಲಾ ದೇಶಗಳಲ್ಲಿ ಸಹ ಇದು ನಿರಂತರವಾಗಿ ನಡೆಯುತ್ತಿದೆ..

ಕಾರಣ ಭದ್ರತೆ ಎಂಬ ಭಾವದಲ್ಲಿಯೇ ಅಭದ್ರತೆ, ಆಕ್ರಮಣ ಹಾಗು ಹಿಂಸೆ ಅಡಕವಾಗಿದೆ. ಆ ಕಾರಣದಿಂದಲೇ ಭದ್ರತೆ ಪ್ರಾಮುಖ್ಯತೆ ಪಡೆಯುತ್ತದೆ. ಶೇಕಡಾ 99% ರಷ್ಟು ಭದ್ರತೆ ಯಾವಾಗಲು ಯಶಸ್ವಿಯಾಗುತ್ತದೆ. ಕೇವಲ 1% ಸಾಮಾನ್ಯವಾಗಿ ವಿಫಲವಾಗುತ್ತದೆ. ಆದರೆ ಆ 1% ಮಾಡುವ ಹಾನಿ ಮಾತ್ರ ತುಂಬಾ ಅಪಾಯಕಾರಿಯಾಗಿರುತ್ತದೆ…..
ವಿಶ್ವದ ಅತ್ಯಂತ ಪ್ರಬಲ ರಕ್ಷಣಾ ವ್ಯವಸ್ಥೆ ಹೊಂದಿರುವ ಇಸ್ರೇಲ್ ದೇಶವು ಸಹ ಸದಾ ಅಭದ್ರತೆಯಿಂದ ನರಳುತ್ತಿದೆ. ಇನ್ನು ಬೃಹತ್ ಭಾರತದ ಪರಿಸ್ಥಿತಿ ಮತ್ತಷ್ಟು ಶೋಚನೀಯ..

ನರೇಂದ್ರ ಮೋದಿ ಇರಲಿ,
ಮನಮೋಹನ್ ಸಿಂಗ್ ಇರಲಿ, ರಾಹುಲ್ ಗಾಂಧಿ ಇರಲಿ, ಅಜಿತ್ ದೋವಲ್ ಇರಲಿ, ನಾನೇ ಇರಲಿ, ನೀವೇ ಇರಲಿ ಭದ್ರತಾ ವೈಫಲ್ಯ ಒಂದಲ್ಲ ಒಂದು ಬಾರಿ ಆಗೇ ಆಗುತ್ತದೆ. ಅದನ್ನು ತಡೆಯಲು ಸಾಧ್ಯವಿಲ್ಲ. ಆದರೆ ತಡೆಯುವ ಪ್ರಯತ್ನಗಳು ಮಾತ್ರ ಪ್ರಾಮಾಣಿಕವಾಗಿರಬೇಕು ಮತ್ತು ನಿರಂತರವಾಗಿರಬೇಕು ಮತ್ತು ಹೊಸ ಹೊಸ ವಿಧಾನಗಳನ್ನು ಅನುಸರಿಸಬೇಕು. ಹಾಗೆಯೇ ಅದನ್ನು ವಿಫಲಗೊಳಿಸಲು ವಿರೋಧಿಗಳು ಸಹ ಅಷ್ಟೇ ವಿಭಿನ್ನ ವಿಧಾನಗಳನ್ನು ಅನುಸರಿಸುತ್ತಾರೆ. ಅಪರೂಪಕ್ಕೊಮ್ಮೆ ಅವರು ಯಶಸ್ವಿಯಾಗುವುದು ಸಹ ಅಷ್ಟೇ ವಾಸ್ತವ..

ಇಂದಿರಾ ಗಾಂಧಿ ಸ್ವತಃ ಭದ್ರತಾ ವೈಫಲ್ಯಕ್ಕೆ ಬಲಿಯಾದರು. ನರಸಿಂಹರಾವ್ ಕಾಲದಲ್ಲಿ ಭದ್ರತಾ ವೈಫಲ್ಯದಿಂದ ಬಾಬರಿ ಮಸೀದಿ ಧ್ವಂಸವಾಯಿತು. ವಾಜಪೇಯಿ ಕಾಲದಲ್ಲಿ ಭದ್ರತಾ ವೈಫಲ್ಯದಿಂದ ಸಂಸತ್ತಿನ ಮೇಲೆ ದಾಳಿಯಾಯಿತು. ಮನಮೋಹನ್ ಸಿಂಗ್ ಕಾಲದಲ್ಲಿ ಭದ್ರತಾ ವೈಫಲ್ಯದಿಂದ ಮುಂಬಯಿ ಮೇಲೆ ದಾಳಿಯಾಯಿತು. ನರೇಂದ್ರ ಮೋದಿ ಕಾಲದಲ್ಲಿ ಭದ್ರತಾ ವೈಫಲ್ಯದಿಂದ ಪುಲ್ವಾಮ ಬಾಂಬ್ ದಾಳಿ ನಡೆಯಿತು. ಹೀಗೆ ಇನ್ನೂ ಎಷ್ಟೋ. ಇದು ನಿರಂತರ ಎಂಬುದನ್ನು ಮರೆಯಬಾರದು..

ಇದಕ್ಕೆ ಶಾಶ್ವತ ಪರಿಹಾರವೇನು ಇಲ್ಲ. ಎಷ್ಟೇ ತಂತ್ರಜ್ಞಾನ ಉಪಯೋಗಿಸಿದರು ವಿರೋಧಿಗಳು ಅಷ್ಟೇ ಪ್ರಬಲ ತಂತ್ರ ಹೆಣೆಯುತ್ತಾರೆ. ಇದೊಂದು ಅಪಘಾತದಂತೆ. ಎಲ್ಲ ಎಚ್ಚರಿಕೆಗಳ ನಡುವೆಯೂ ಯಾವಾಗ ಬೇಕಾದರೂ ಸಂಭವಿಸುವ ಸಾಧ್ಯತೆ ಇದ್ದೇ ಇರುತ್ತದೆ..

ದುರಾದೃಷ್ಟವಶಾತ್ ರಾಜಕೀಯ ನಾಯಕರು ಆಗಲೂ ಈಗಲೂ ಪರಸ್ಪರ ಆರೋಪದ ಮಾಡುವುದನ್ನು ಬಿಡುವುದಿಲ್ಲ. ‌ಒಳ್ಳೆಯ ಕೆಲಸಗಳನ್ನು ಹಿರೋಗಳಂತೆ ಸ್ವೀಕರಿಸುವ ದೇಶದ ಮುಖ್ಯಸ್ಥರು ಕೆಟ್ಟದ್ದನ್ನು ಸಹ ಒಪ್ಪಿಕೊಳ್ಳಲೇಬೇಕು. ಇದೇ ಸಹಜ ನ್ಯಾಯ..

ಎಲ್ಲಿಯವರೆಗೆ ಆರ್ಥಿಕ ಅಸಮಾನತೆ, ಸಾಮಾಜಿಕ ಅಸಮಾನತೆ ಮತ್ತು ಧಾರ್ಮಿಕ ಅಸಹಿಷ್ಣತೆ ಇರುತ್ತದೆಯೋ ಅಲ್ಲಿಯವರೆಗೆ ಭದ್ರತಾ ವೈಫಲ್ಯ ವಿಶ್ವವನ್ನು ಕಾಡುತ್ತಲೇ ಇರುತ್ತದೆ. ಬೇಕಾದರೆ ಗಮನಿಸಿ ನೋಡಿ ವಿಶ್ವದ ಕೆಲವು ಉತ್ತಮ ಜೀವನಮಟ್ಟದ ದೇಶಗಳಾದ ನಾರ್ವೆ, ಸ್ವಿಟ್ಜರ್ಲೆಂಡ್‌‌, ಆಸ್ಟ್ರಿಯಾ ಮುಂತಾದ ಕೆಲವು ದೇಶಗಳಲ್ಲಿ ಭದ್ರತಾ ವೈಫಲ್ಯ ತೀರಾ ಅಪರೂಪ..

ಜಾತಿ, ಧರ್ಮ, ಭ್ರಷ್ಟಾಚಾರ, ರಾಜಕೀಯ, ಚುನಾವಣೆ ಮುಂತಾದ ಅನೇಕ ವಿಷಯಗಳಲ್ಲಿ ಅಪಾರ ಭಿನ್ನತೆ ಹೊಂದಿರುವ ಭಾರತದಲ್ಲಿ ಎಷ್ಟೇ ಎಚ್ಚರಿಕೆ ವಹಿಸುವುದರು ಭದ್ರತಾ ವೈಫಲ್ಯ ಮಾತ್ರ ಯಾವಾಗ ಬೇಕಾದರೂ ಸಂಭವಿಸಬಹುದು ಎಂಬ ಪ್ರಜ್ಞೆ ಸದಾ ಜಾಗೃತವಾಗಿರಲಿ..

ಹಾಗೆಂದು ಈ ಕೆಟ್ಟವರನ್ನು ತಡೆಯಲು ಒಳ್ಳೆಯವರಿಗೆ ಹಿಂಸೆ ಮಾಡಬೇಡಿ. ಏಕೆಂದರೆ ಈಗಾಗಲೇ ಸಾಮಾನ್ಯ ಜನರ ತಪಾಸಣಾ ವ್ಯವಸ್ಥೆ ಮತ್ತು ಅವರ ಪ್ರವೇಶ ನಿಷೇಧ ಇಡೀ ವ್ಯವಸ್ಥೆಯನ್ನು ಜೈಲಿನಂತೆ ಮಾಡಲಾಗಿದೆ. ಇನ್ನೂ ಹೀಗೆ ಮಾಡುತ್ತಿದ್ದರೆ ನಾವುಗಳು ಏಕ ವ್ಯಕ್ತಿ ದ್ವೀಪಗಳಂತೆ ಅನಾಥರಾಗಿ, ಅಜ್ಞಾತರಾಗಿ ವಾಸ ಮಾಡಬೇಕಾದ ಪರಿಸ್ಥಿತಿ ಬರಬಹುದು..

ಇನ್ನು ಈ ಸುಮಾರು 6/7 ಯುವಕರ ಈ ಹುಚ್ಚಾಟ ಖಂಡಿತ ಸ್ವೀಕಾರಾರ್ಹವಲ್ಲ. ಅವರ ಉದ್ದೇಶ ಏನೇ ಇರಲಿ ಮಾರ್ಗ ಮಾತ್ರ ಹುಚ್ಚುತನ ಮತ್ತು ಕ್ರಿಮಿನಲ್ ರೀತಿಯಲ್ಲಿದೆ. ಇಂತಹ ಪ್ರಯತ್ನಗಳಿಂದ ವೈಯಕ್ತಿಕ ಮತ್ತು ಸಾಮಾಜಿಕವಾಗಿ ಅಪಾರ ನಷ್ಟ ಉಂಟುಮಾಡುತ್ತದೆ ಮತ್ತು ಅವರುಗಳು ತುಂಬಾ ಕಷ್ಟ ಅನುಭವಿಸುವುದು ನಿಶ್ಚಿತ. ಇದಕ್ಕಿಂತ ಉತ್ತಮ ಮಾರ್ಗಗಳು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಕಷ್ಟು ಇವೆ. ಅದನ್ನು ಅನುಸರಿಸೋಣ..

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಎಸ್.ಎಮ್.ಮಣೂರ ಪಬ್ಲಿಕ್ ಸ್ಕೂಲ್ ನಲ್ಲಿ ಗುಣಾತ್ಮಕ ಶಿಕ್ಷಣ

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಎಸ್.ಎಮ್.ಮಣೂರ ಪಬ್ಲಿಕ್ ಸ್ಕೂಲ್ ನಲ್ಲಿ ಗುಣಾತ್ಮಕ ಶಿಕ್ಷಣ
    In (ರಾಜ್ಯ ) ಜಿಲ್ಲೆ
  • ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್
    In (ರಾಜ್ಯ ) ಜಿಲ್ಲೆ
  • ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ
    In (ರಾಜ್ಯ ) ಜಿಲ್ಲೆ
  • ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ
    In ವಿಶೇಷ ಲೇಖನ
  • ಸರಗೂರು ತಾಲೂಕಿನಲ್ಲಿ ನಿಲ್ಲದ ಕಾಡುಪ್ರಾಣಿ-ಮಾನವ ಸಂಘರ್ಷ
    In (ರಾಜ್ಯ ) ಜಿಲ್ಲೆ
  • ಕೇವಲ ಅಂಕ ಗಳಿಕೆ ಶಿಕ್ಷಣವಲ್ಲˌ ತಹಶೀಲ್ದಾರ ಅನೀಲ ಬಡಿಗೇರ
    In (ರಾಜ್ಯ ) ಜಿಲ್ಲೆ
  • ಸಾರ್ವಜನಿಕ ಬ್ಯಾಂಕುಗಳಿಂದ ಆರ್ಥಿಕ ಸಾಕ್ಷರತೆ ಸಪ್ತಾಹ
    In (ರಾಜ್ಯ ) ಜಿಲ್ಲೆ
  • ಶನಿವಾರ ವಿದ್ಯುತ್ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಆಂಧ್ರದಲ್ಲಿ ಕೆ.ಜಿ ತಂಬಾಕಿಗೆ 400, ಕರ್ನಾಟಕದಲ್ಲಿ ಕೇವಲ 292 ರೂ.ಹೆಚ್ ಡಿ ಕೋಟೆಯಲ್ಲಿ ಹರಾಜು ಮಾರುಕಟ್ಟೆ ಬಂದ್, ರೈತರ ಆಕ್ರೋಶ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.