ವಿಜಯಪುರ: ವಿಜಯಪುರ ನಗರ ವ್ಯಾಪ್ತಿಯಲ್ಲಿನ ನಗರ ವಸತಿ ರಹಿತರನ್ನು ಗುರುತಿಸಲು ಸ್ವಯಂ ಸೇವಾ ಸಂಸ್ಥೆಯಿಂದ ಡಿ.೧೫ ರಿಂದ ೩೧ರವರೆಗೆ ಎರಡು ದಿನಕ್ಕೊಮ್ಮೆ ವಸತಿ ರಹಿತರನ್ನು ಗುರುತಿಸಲು ರ‍್ಯಾಪಿಡ್ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಸಮೀಕ್ಷೆ ಅವಧಿಯಲ್ಲಿ ಸಾರ್ವಜನಿಕರಿಗೆ ನಗರ ವ್ಯಾಪ್ತಿಯಲ್ಲಿ ಯಾರಾದರೂ ವಸತಿ ರಹಿತರು ಕಂಡು ಬಂದಲ್ಲಿ ಕಾರ್ಯದರ್ಶಿ ಕರ್ನಾಟಕ ಹ್ಯೂಮನ್ ವೆಲಫೇರ್ & ಜನಾಭಿವೃದ್ದಿ ಸೊಸಾಯಿಟಿ (ರಿ) ವಿಜಯಪುರ ಇವರ ಮೊ: ೭೪೧೧೯೦೧೨೭೫ ಸಂಖ್ಯೆಗೆ ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
