Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 05, 2026

ಅಗ್ನಿ ಅವಘಡದಿಂದ ಎರಡು ಅಂಗಡಿಗಳು ಭಸ್ಮ

ಇಂಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಹೆಚ್ಚಿದ ಭ್ರಷ್ಟಾಚಾರ :ಆರೋಪ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಡಾ.ವಿಷ್ಣುವರ್ಧನ್ ಬಗ್ಗೆ ನಿರ್ಲಕ್ಷ್ಯ ಸಲ್ಲದು
(ರಾಜ್ಯ ) ಜಿಲ್ಲೆ

ಡಾ.ವಿಷ್ಣುವರ್ಧನ್ ಬಗ್ಗೆ ನಿರ್ಲಕ್ಷ್ಯ ಸಲ್ಲದು

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕನ್ನಡಿಗರ ಕೂಗಾಗಿ, ಜನಾಂದೋಲನವಾಗಿ ಡಿ.17ರಂದುಅಸಂಖ್ಯಾತ ಅಭಿಮಾನಿಗಳಿಂದ ಬೆಂಗಳೂರಿನಲ್ಲಿ ಪ್ರತಿಭಟನೆ

– ಸಿದ್ಧಾಪುರ ಶಿವಕುಮಾರ್

ಡಾ.ವಿಷ್ಣುವರ್ಧನ್ ಬರೀ ಜನಪ್ರಿಯ  ಅತ್ಯುತ್ತಮ ಕಲಾವಿದರಲ್ಲ, ಸಾಮಾಜಿಕ ಸೇವಕ ಚಿಂತಕರು, ಆಧ್ಯಾತ್ಮಶೀಲರು. ಬರೀ ತನ್ನ ಅಭಿನಯ ಭಾಷಣದ ಮೂಲಕ  ಜನರಿಗೆ ಭೋದಿಸಿದವರಲ್ಲ. ತಕ್ಕಂತೆ ಬಾಳಿ ಬದುಕಿದವರು. ಕನ್ನಡ ಭಾಷೆ ನೆಲ ಜಲ ಬಗ್ಗೆ ಕಾಳಜಿಹೊಂದಿದವರು. ಹೆಣ್ಣುಕುಲವನ್ನು ಬರೀ ನಟನೆಯಿಂದ ಹಾಡಿ ಹೊಗಳದೇ ತನ್ನ ಆದರ್ಶದ ಬದುಕಿನ ನಡೆತೆಯಿಂದಲೇ  ಗೌರವಿಸುವುದನ್ನು ತೋರಿಸಿದವರು. ಒಬ್ಬ ಕಲಾವಿದ ಬೆಳೆಯಬೇಕಾದಾಗ ಕಿಡಿಗೇಡಿಗಳ ಕಿರುಕುಳ  ಸಮಸ್ಯೆ ಸವಾಲುಗಳನ್ನು  ಎದುರಿಸಿ ಬೆಳೆಯಬೇಕೆಂಬುದಕ್ಕೆ ಸ್ಪೂರ್ತಿ ಸಾಕ್ಷಿಯಾದವರು.  ಪ್ರಶಸ್ತಿ ಪುರಸ್ಕಾರ ಸನ್ಮಾನಗಳ ಗೀಳಿಲ್ಲದೆ ಅದಕ್ಕಿಂತ ಮಿಗಿಲಾಗಿ ಅಭಿಮಾನವನ್ನು ಸಹಜವಾಗಿಯೇ ಸಂಪಾದಿಸಿದವರು. ಮಾನ ಅವಮಾನಗಳ ನಡುವೆ
ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಹೃದಯವಂತರಾದವರು. ತನ್ನ ಆದಾಯಕ್ಕಿಂತ ಅಧಿಕವಾಗಿ ಅಸಂಖ್ಯಾತರಿಗೆ ದಾನ ಧರ್ಮಕ್ಕೆ ಯಾವುದೇ ಪ್ರಚಾರ ಬಯಸದೆ ಕೃತಿ ರೂಪದಲ್ಲಿ ಸಾಕ್ಷಿಯಾದವರು. ವಿಷ್ಣುವರ್ಧನ್ ಇಹಲೋಕ ತ್ಯಜಿಸಿ ಹದಿನಾಲ್ಕು ವರ್ಷಗಳೇ ದಾಟಿದರೂ ಅವರನ್ನು ಅಭಿಮಾನಿಸುವ ಗೌರವಿಸುವ ಸಂತನಂತೆ ಪೂಜಿಸುವವರ ಕ್ರೇಜ್ ಹೆಚ್ಚುತ್ತಲಿದೆ ವಿನಃ ಕಡಿಮೆಯಾಗುತ್ತಿಲ್ಲ ಆಗುವುದೂ ಇಲ್ಲ!
ಅವರೊಬ್ಬ ಶ್ರೇಷ್ಠ ವ್ಯಕ್ತಿಯಾಗಿ ಅವ್ಯಕ್ತ ಜೀವಂತ ಶಕ್ತಿಯಾಗಿ ಪ್ರಭಾವಿಸುತ್ತಲೇ ಇದ್ದಾರೆ.  ನೆನಪಿಡಿ, ಸ್ವಚ್ಚಂದ ಮನಸ್ಸಿನವರು ನಿಸ್ವಾರ್ಥ ಸೇವಾ ಕಾಳಜಿಯವರು ಮಾತ್ರವೇ ಹೀಗೆ ಅಸಾಧಾರಣವಾಗಿ ಬೆಳೆದು ಬೆಳಗಲು ಸಾಧ್ಯ. ಇಂತಹ ಅಸಂಖ್ಯಾತ ಅಭಿಮಾನಿಗಳ ಆರಾಧಕ ಶ್ರೇಷ್ಠ ವ್ಯಕ್ತಿಯನ್ನು ರಾಜ್ಯದ ರಾಜಧಾನಿಯಲ್ಲಿ ಪೂಜಿಸಲು ಪುಣ್ಯಭೂಮಿ ಬೇಕೆಂಬ ಬೇಡಿಕೆ ನ್ಯಾಯಸಮ್ಮತವೇ.  ಇಂತಹ ನಾಡಿಗೆ ಕೀರ್ತಿ ತಂದ ಮಹನೀಯ ಸಾಧಕ ಶ್ರೇಷ್ಠ ಪ್ರಾತಃಸ್ಮರಣೀಯರನ್ನು ಸೂಕ್ತ  ಗೌರವವನ್ನು ತೋರಿಸುವುದು ಘನ ಸರ್ಕಾರದ ಕರ್ತವ್ಯ. ಆದರೆ ಆರು ಜನ ಮುಖ್ಯಮಂತ್ರಿಗಳಿಂದಲೂ ಅಭಿಮಾನ ಸ್ಟುಡಿಯೋ ಪುಣ್ಯಭೂಮಿ ಸಮಸ್ಯೆಯನ್ನು ಸರಿಪಡಿಸುವ ಇಚ್ಚಾಸಕ್ತಿ ತೋರಿಸದೇ ಇರುವುದು ನಿಜವಾಗಿಯೂ ವಿಪರ್ಯಾಸವೇ. ಹೇಳಿ ಕೇಳಿ ಅಭಿಮಾನ‌ ಸ್ಟುಡಿಯೋ ಕಲಾವಿದರಾದ ಬಾಲಣ್ಣನವರಿಗೆ ನೀಡಿದ ಸರ್ಕಾರದ ಅನುದಾನಿತ ಜಾಗವಾದ್ದರಿಂದ ಸರ್ಕಾರಕ್ಕಿದು ದೊಡ್ಡ ವಿಷಯವಲ್ಲ. ಅದೇ ಜಾಗದಲ್ಲಿ ಹಿರಿಯ ಮೇರು ನಟರಾದ ವಿಷ್ಣುವರ್ಧನ್ ಅವರಿಗೂ  ಪುಣ್ಯಭೂಮಿಗಾಗಿ ನ್ಯಾಯಸಮ್ಮತವಾಗಿ ಹಂಚುವ ಇಚ್ಚಾಸಕ್ತಿ ಕೊರತೆ ಖಂಡಿತವಾಗಿ ಕಾಣುತ್ತಿದೆ. ಸರ್ಕಾರ ಈ ನಿಟ್ಟಿನಲ್ಲಿ ತನ್ನ ಜವಾಬ್ದಾರಿಯನ್ನು ವಿಷ್ಣುವರ್ಧನ್ ಅವರ ಬಗ್ಗೆ ತಕ್ಕದಾಗಿ ತೋರಿಸದೇ ತಮಗೆ ತಾವೇ ಅವಮಾನ ಮಾಡಿಕೊಳ್ಳುತ್ತಿದೆ. ಜೊತೆಗೆ ತಾರತಮ್ಯವನ್ನು ಮೈ ಮೇಲೆ ಎಳೆದುಕೊಂಡಂತೆ ಕಂಡಿದ್ದರಿಂದಲೇ ಸತತ ಸಹನೆಯ ಹೋರಾಟ ನಂತರ ಇದೀಗ ನಾಡಿನಾದ್ಯಂತ ಖಂಡಿಸಲೆಂದೇ ಕನ್ನಡಿಗರ ಕೂಗಾಗಿ ಜನಾಂದೋಲನವಾಗಿ ಇದೇ ಭಾನುವಾರ 17 ಬೆಂಗಳೂರಿನಲ್ಲಿ ಪ್ರತಿಭಟನೆಗೆ ಮುಂದಾಗಿದೆ. ನಮ್ಮ  ನಾಡಿನ ಸುಪುತ್ರ  ಕನ್ನಡಕ್ಕೆ ಕನ್ನಡನತನಕ್ಕೆ ಕೀರ್ತಿ ತಂದ ಮೇರು ಕಲಾವಿದರಾಗಿ ಜೊತೆಗೆ ಸಾಮಾಜಿಕ ಸೇವಾ ಕಾಳಜಿಗೆ ಸಾಕ್ಷಿಯಾದ ಹೃದಯವಂತ ವಿಷ್ಣುವರ್ಧನ್ ಅವರ ವಿಷಯದಲ್ಲಿ ಸರ್ಕಾರ ಹೀಗೆ ನಡೆದುಕೊಳ್ಳಬಾರದಿತ್ತು. ಇದನ್ನು ಪ್ರಶ್ನಿಸುವುದರಲ್ಲಿ ಪ್ರತಿಯೊಬ್ಬ ಕ‌ನ್ನಡಿಗರ ಅಭಿಮಾನಿಗಳ ಹಕ್ಕು ಇದೆ. ಇದಕ್ಕಾಗಿ ನಾಡಿನಾದ್ಯಂತ ಅಭಿಮಾನದ ನಿಸ್ವಾರ್ಥ ಮನಸ್ಸುಗಳು ಮಹಿಳೆಯರು, ಚಿಕ್ಕ ಮಕ್ಕಳು, ವಯೊವೃದ್ಧರು, ಜಾತಿ ಕುಲ ಗೋತ್ರ ಬೇಧಗಳಿಲ್ಲದೆ ಪುಣ್ಯಭೂಮಿ ಪಡೆದೇ ತೀರಲು ಹಗಲಿರುಳು ಶ್ರಮಿಸುತ್ತಿವೆ. ಜೊತೆಗೆ ಮುಖ್ಯವಾಗಿ ನಾಡಿನ ಹಲವಾರು ಹೋರಾಟಗಳ ಸಂಘ ಸಂಘಟಕ ಸಮಿತಿಯವರು ವಿಷ್ಣುವರ್ಧನ್ ಅವರ ಪರವಾಗಿ ಅಭಿಮಾನದಿಂದ ಕೈಜೋಡಿಸಿದ್ದು ನಿಜವಾಗಿಯೂ ಸ್ವಾಗತಾರ್ಹ ಹಾಗೂ ಅಭಿನಂದನೀಯ. ಈ ಬಾರಿ ಸರ್ಕಾರದ ಕಣ್ತೆರೆಯಲಿ ಸಮಸ್ತ ಕನ್ನಡಿಗರ ಒಕ್ಕೊರಲಿನ ಕೂಗಿಗೆ ಪುಣ್ಯಭೂಮಿ ಸತ್ಕಾರ್ಯಕ್ಕೆ ಜಯ ಸಿಗಲಿ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 05, 2026

ಅಗ್ನಿ ಅವಘಡದಿಂದ ಎರಡು ಅಂಗಡಿಗಳು ಭಸ್ಮ

ಇಂಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಹೆಚ್ಚಿದ ಭ್ರಷ್ಟಾಚಾರ :ಆರೋಪ

ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು :ಸಂಭ್ರಮಾಚರಣೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 05, 2026
    In ದಿನಪತ್ರಿಕೆ
  • ಅಗ್ನಿ ಅವಘಡದಿಂದ ಎರಡು ಅಂಗಡಿಗಳು ಭಸ್ಮ
    In (ರಾಜ್ಯ ) ಜಿಲ್ಲೆ
  • ಇಂಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಹೆಚ್ಚಿದ ಭ್ರಷ್ಟಾಚಾರ :ಆರೋಪ
    In (ರಾಜ್ಯ ) ಜಿಲ್ಲೆ
  • ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು :ಸಂಭ್ರಮಾಚರಣೆ
    In (ರಾಜ್ಯ ) ಜಿಲ್ಲೆ
  • ಉಪಚುನಾವಣೆ : ಎರಡೂ ಕ್ಷೇತ್ರಗಳಲ್ಲಿ ಗೆದ್ದು ಬೀಗಿದ ಕಾಂಗ್ರೆಸ್
    In (ರಾಜ್ಯ ) ಜಿಲ್ಲೆ
  • ಬಬಲೇಶ್ವರ ಕ್ಷೇತ್ರದ ಸರಕಾರಿ ಶಾಲೆಗಳಿಗೆ ಕ್ರೀಡಾ ಸಲಕರಣೆ ಸೌಲಭ್ಯ
    In (ರಾಜ್ಯ ) ಜಿಲ್ಲೆ
  • ಕೊಲ್ಹಾರ: ರೈತ ಜಾಗೃತಿ ಸಮಾವೇಶಕ್ಕೆ ಸಾವಿರಾರು ರೈತರು ಭಾಗಿ
    In (ರಾಜ್ಯ ) ಜಿಲ್ಲೆ
  • ಕಬ್ಬಿನಲ್ಲಿ ಎಕರೆಗೆ 100 ಟನ್ ಇಳುವರಿ ಕುರಿತು ತಾಂತ್ರಿಕ ಕಾರ್ಯಗಾರ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 03, 2026
    In ದಿನಪತ್ರಿಕೆ
  • ರೈತರಿಗೆ ಗುಣಮಟ್ಟದ ವಿದ್ಯುತ್ ವ್ಯವಸ್ಥೆ ನೀಡುವ ಮಹದಾಸೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.