ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಸುಕ್ಷೇತ್ರ ಬ್ರಹ್ಮದೇವನಮಡು ಗ್ರಾಮದ ಆರಾಧ್ಶ ದೈವ ಶ್ರೀ ಬಲಭೀಮೇಶ್ವರ (ಚಟ್ಟಿ) ಕಾತಿ೯ಕೋತ್ಸವ ಡಿ.೧೬ ರಂದು ನಡೆಯಲಿದೆ. ದೇವಸ್ಥಾನದ ಅಚ೯ಕ ನಿಂಗಣ್ಣಚಾಯ೯ ಜೋಶಿ ಸಾನ್ನಿಧ್ಶದಲ್ಲಿ ಬಲಭೀಮೇಶ್ವರ ಮೂತಿ೯ಗೆ ವಿಶೇಷ ಪೂಜೆ ಸಲ್ಲಿಸಿ ದೀಪಾಲಂಕಾರ ಮಾಡಲಾಗುವುದು.
ಸಂಜೆ ಭಕ್ತರಿಗೆ ಭಜ್ಜಿ, ರೊಟ್ಟಿ ಪ್ರಸಾದ ವ್ಶವಸ್ಥೆ ಕಲ್ಪಿಸಲಾಗಿದೆ. ಅಂದು ಇಡೀ ರಾತ್ರಿ ಖಾನಾಪೂರ, ಹೊನ್ನಳ್ಳಿ, ಕಡಕೋಳ,ಅರಳಗುಂಡಗಿ ಭಜನಾ ಮಂಡಳಿಯವರಿಂದ ಭಜನೆ ನಡೆಯಲಿದೆ ಎಂದು ಮುಖಂಡ ರುದ್ರಣ್ಣಸಾಹು ಮಾನಶೆಟ್ಟಿ, ಕಮೀಟಿ ಅಧ್ಶಕ್ಷ ರೇವಣಸಿದ್ದಸಾಹು ಕೋರವಾರ ಭಕ್ತರಲ್ಲಿ ಮನವಿ ಮಾಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

