*ಮೊದಲ ಪುಟ*
ವಿಜಯಪುರ: ಸೆಕ್ಯೂರಿಟಿ ಗಾರ್ಡ ಮೇಲೆ ಹಲ್ಲೆಗೈದು ಮನೆ ನುಗ್ಗಿದ ಕಳ್ಳರು ಚಿನ್ನ, ನಗದು ದೋಚಿ ಫರಾರಿಯಾಗಿರುವ ಘಟನೆ ವಿಜಯಪುರ ನಗರದ ಮಹಾವೀರ ಕಾಲೋನಿಯಲ್ಲಿ ನಡೆದಿದೆ.
ಗುಲಾಬ್ ಮುಹಮ್ಮದ್ ಮುಜಾವರ ಹಲ್ಲೆಗೊಳಗಾದ ಸೆಕ್ಯೂರಿಟಿ ಗಾರ್ಡ ಆಗಿದ್ದಾರೆ.
ಇನ್ನು ಶ್ರೀಕಾಂತ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ.
ಶ್ರೀಕಾಂತ ಕುಟುಂಬದವರು ಮದುವೆಗೆಂದು ಹೋದಾಗ ಈ ಕೃತ್ಯ ನಡೆದಿದೆ. ಕಳ್ಳರು ಮನೆಗೆ ನುಗ್ಗಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ತಡೆಯಲು ಯತ್ನಿಸಿದ ಸೆಕ್ಯೂರಿಟಿ ಗಾರ್ಡ ಗುಲಾಬ್ ಮುಹಮ್ಮದ್ ಮೇಲೆ ಮಾರಕಾಸ್ತ್ರಗಳಿಂದ ದಾಳಿಗೈದು ಮನೆಯಲ್ಲಿದ್ದ ಚಿನ್ನ, ನಗದು ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚಿಕೊಂಡು ಫರಾರಿಯಾಗಿದ್ದಾರೆ.
ತೀವ್ರ ಗಾಯಗೊಂಡಿರುವ ಸೆಕ್ಯೂರಿಟಿ ಗಾರ್ಡ ಗುಲಾಬ್ ಮುಹಮ್ಮದ್ ರನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

