ಮುದ್ದೇಬಿಹಾಳ : ತಾಲೂಕಿನ ಹುಲ್ಲೂರು ಗ್ರಾ.ಪಂ ನ ಕಾರ್ಯಾಲಯದ ಎದುರು ಬಸವ ವಸತಿ ಯೋಜನೆಯಲ್ಲಿ ಆಯ್ಕೆ ಪ್ರಕ್ರಿಯೆಯಲ್ಲಿ ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿದ್ದು ತನಿಖೆ ನಡೆಸುವಂತೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಗುರುವಾರ ಗ್ರಾಮ ಪಂಚಾಯತ ಸದಸ್ಯ ಶಿವಾನಂದ ಲಮಾಣಿ ಬೆಂಬಲಿಗರೊಂದಿಗೆ ಧರಣಿ ಸತ್ಯಾಗ್ರಹ ಆರಂಭಿಸಿದರು.
ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಶಿವಾನಂದ, ಹುಲ್ಲೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಪುತ್ರ ಕಲ್ಮೇಶ ಮಾದರ ಉಪಾಧ್ಯಕ್ಷೆ ಸುಪುತ್ರ ವಿನೋದ ಓಲೇಕಾರ ಮತ್ತು ಪ್ರಭಾರಿ ಅಭಿವದ್ಧಿ ಅಧಿಕಾರಿ ರಾಜೇಂದ್ರ ಎಕ್ಸಂಬಿ ತಮ್ಮ ಅಣತಿಯಂತೆ ನಡೆಯುವ ನಾಲ್ಕು ಜನ ಸದಸ್ಯರನ್ನು ಸೇರಿಸಿಕೊಂಡು ಸಾಮಾನ್ಯ ಸಭೆಗಳನ್ನು ನಡೆಸದೇ ಮನಸೋಯಿಚ್ಚೆ ಕೆಲಸಗಳನ್ನು ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ನಡೆದ ಬಸವ ವಸತಿ ಯೋಜನೆಯಲ್ಲಿ ಆಯ್ಕೆ ಪ್ರಕ್ರಿಯೆ ತಡೆಗೆ ಕೋರಿ ನಾನು ಅರ್ಜಿ ಸಲ್ಲಿಸಿದ್ದರು ಕ್ಯಾರೆ ಅನ್ನದೇ ತಾರಾತುರಿಯಲ್ಲಿ ಜಿ.ಪಿ.ಎಸ್ ಮಾಡಿ ಒಟ್ಟು ೭೨ ಮನೆಗಳನ್ನು ಆಯ್ಕೆ ಮಾಡಿದ್ದಾರೆ. ಇದು ಘೋರ ಅಪರಾಧವಾಗಿದ್ದು ಇಲ್ಲಿ ಸರಕಾರದ ಆದೇಶ ಗಾಳಿಗೆ ತೂರಿದ್ದಾರೆ. ಕಾರಣ ಕೂಡಲೇ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಧರಣಿ ಆರಂಭಿಸಿದ್ದು ಶುಕ್ರವಾರ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಪಂದನೆ ನೀಡದಿದ್ದಲ್ಲಿ ಹೋರಾಟ ರೂಪರೇಷೆಗಳನ್ನು ಬದಲಾಯಿಸುವುದಾಗಿ ತಿಳಿಸಿದ್ದಾರೆ.
ಧರಣಿಗೆ ಸದಸ್ಯರಾದ ದಿಲೀಪಕುಮಾರ ನಾಯಕ ಮತ್ತು ಅಶೋಕಗೌಡ ಬಿರಾದಾರ ಬೆಂಬಲಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

