ವಿಜಯಪುರ: ವಿಜಾಪೂರ ಹಾಗೂ ಬಾಗಲಕೋಟ ಜಿಲ್ಲಾ ಆರೋಗ್ಯ ಇಲಾಖೆ ನೌಕರರ ಪತ್ತಿನ ಸಹಕಾರಿ ಸಂಘ ನಿಯಮಿತ, ವಿಜಯಪುರ ಇದರ ಈ ಮುಂಚೆ ಇದ್ದ ವಿನಾಯಕ ಅವದಿ ಉಪಾಧ್ಯಕ್ಷ ಸ್ಥಾನವು ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಡಿ.೧೩ ರಂದು ನಾಮನಿರ್ದೇಶನ ಜರುಗಿದ್ದು, ಆಡಳಿತ ಮಂಡಳಿಯ ಎಲ್ಲ ಸದಸ್ಯರು ಹಾಗೂ ಅಧ್ಯಕ್ಷರ ಸಮ್ಮುಖದಲ್ಲಿ ಶ್ರೀ ಮೋಹಮ್ಮದಯಾಶೀನ ಕೆ. ಮೋಮಿನ ಇವರನ್ನು ಸಂಘದ ನೂತನ ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಡಾ. ಬಾಲಕೃಷ್ಣ ಕೆಳಗೇರಿ, ಸಂಘದ ಸದಸ್ಯರಾದ ಎಸ್.ಎಸ್. ಪಾಟೀಲ, ಅನೀಲ ಘೋರ್ಪಡೆ, ಎಸ್.ಓ.ಹಿರೇಕುರುಬರ, ಸಂತೋಷ ಯರಗಲ್, ಎಂ.ಎಸ್.ಬಾಗೇವಾಡಿ, ಶಂಕರ ತೋಡಕೆ, ಶ್ರೀಮತಿ ಕೆ.ಎಸ್.ಹಂಚಿನಾಳ, ಇನ್ನಿತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

