ವಿಜಯಪುರ: ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರ ೬೧ನೇ ಜನ್ಮ ದಿನದ ಅಂಗವಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ವಿಕ್ರಮ ಗಾಯಕವಾಡ ಅವರು ಆರ್ಫನೈಜ್ ಅನಾಥ ಆಶ್ರಮದ ಮಕ್ಕಳಿಗೆ ಬುಧವಾರ ಅನ್ನ ಪ್ರಸಾದ ವ್ಯವಸ್ಥೆ ಮಾಡಿದರು.
ನಂತರ ಮಾತನಾಡಿದ ಅವರು, ಅಭಿವೃದ್ಧಿ ಹರಿಕಾರ ಶಾಸಕರ ಜನ್ಮ ದಿನ ಅರ್ಥಪೂರ್ಣವಾಗಿ ಆಚರಿಸಬೇಕೆಂಬ ನಿಟ್ಟಿನಲ್ಲಿ ಅನಾಥ ಆಶ್ರಮದ ಮಕ್ಕಳೊಂದಿಗೆ ಕೇಕ್ ಕತ್ತರಿಸಿ, ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ನಮ್ಮ ನಾಯಕರಿಗೆ ಉನ್ನತ ಹುದ್ದೆ ದೊರಕಿ, ನಾಡಿನ ಅಭಿವೃದ್ಧಿಗೆ ಶ್ರಮಿಸಲು ಅವಕಾಶ ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.
ಬಿಜೆಪಿ ಮುಖಂಡರಾದ ಬಾಬು ಶಿರಶ್ಯಾಡ, ಅಶೋಕ ಬೆಲ್ಲದ, ರಾಜಶೇಖರ ಭಜಂತ್ರಿ, ರಮೇಶ ಪಡಸಲಗಿ, ಶರಣು ಕಾಖಂಡಕಿ, ಬಸವರಾಜ ಗೊಳಸಂಗಿ, ಅಮಿತ್ ಗಡುಕರ, ನಾಗರಾಜ ಮುಳವಾಡ, ಕೃಷ್ಣಾ ರಾಠೋಡ, ಶ್ರೀಧರ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

