ದೇವರಹಿಪ್ಪರಗಿ: ಜಂಗಮರು ಪೂರ್ವಜರ ಆಚಾರ ವಿಚಾರಗಳನ್ನು ಅರಿತು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಧರ್ಮರಕ್ಷಣೆಗೆ ಮುಂದಾಗಬೇಕು ಎಂದು ಜಡಿಮಠದ ಜಡಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಗುರುವಾರ ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ ನೀಡಿ ಅವರು ಮಾತನಾಡಿದರು.
೮ ವರ್ಷ ವಯಸ್ಸಿನ ಎಲ್ಲ ಜಂಗಮರು ಸಂಪ್ರದಾಯದಂತೆ ಅಯ್ಯಾಚಾರ ದೀಕ್ಷೆ ಪಡೆಯಬೇಕು. ಇಂದು ಶಿವದೀಕ್ಷಾ ಪಡೆದ ವಟುಗಳು ತಮ್ಮ ಜೀವನದುದ್ದಕ್ಕೂ ನಿತ್ಯ ಸ್ನಾನದ ನಂತರ ಶಿವಪೂಜೆ ನೆರವೇರಿಸಬೇಕು ಇದರಿಂದ ನಿಮ್ಮ ಭವಿಷ್ಯಕ್ಕೆ ಭದ್ರ ಬುನಾದಿ ದೊರೆಯುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಸದಯ್ಯನಮಠದ ವೀರಗಂಗಾಧರಶ್ರೀಗಳು ವಟುಗಳಿಗೆ ಮಂತ್ರೋಚ್ಛಾರದ ಮಹತ್ವ ಹಾಗೂ ಶಿಷ್ಟಾಚಾರಗಳ ಕುರಿತು ಮಾಹಿತಿ ನೀಡಿದರು. ಜೊತೆಗೆ ಪಾಲಕರು, ಹಿರಿಯರು ನಮ್ಮ ಆಚಾರ, ವಿಚಾರಗಳನ್ನು ಪಾಲಿಸಲು ಮಕ್ಕಳಿಗೆ ತಿಳಿಹೇಳುವ ಮೂಲಕ ತಮ್ಮದೇಯಾದ ಕರ್ತವ್ಯ ಪಾಲಿಸಲು ಮುಂದಾಗಬೇಕು ಎಂದರು.
ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ, ಪಟ್ಟಣ ಪಂಚಾಯಿತಿ ಸದಸ್ಯ ಶಾಂತಯ್ಯ ಜಡಿಮಠ, ಪಿ.ಜಿ.ಹಿರೇಮಠ, ಪಿ.ಎಸ್.ಮಿಂಚನಾಳ, ಯಲಗೂರೇಶ ದೇವೂರ, ಸಂಗಪ್ಪ ಮಣೂರ, ಚನ್ನಯ್ಯ ಮಲ್ಲಿಕಾರ್ಜುನಮಠ, ರಮೇಶ ಮಶಾನವರ, ಕಾಶೀನಾಥ ಹಿರೇಮಠ, ವೀರೇಶ ಕುದರಿ, ಕುಮಾರಸ್ವಾಮಿ ಹಿರೇಮಠ, ಈರಪ್ಪ ಹೊಸಮನಿ, ಕುಮಾರ ವಡ್ಡೋಡಗಿ, ಶಾಂತಯ್ಯ ಹಿರೇಮಠ, ಶ್ರೀಕಾಂತ ನಾಶಿಮಠ ಸೇರಿದಂತೆ ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

