ವಿಜಯಪುರ: ನಗರದ ಸಾಕ್ಷಿ ಹನುಮಾನ ಮಂದಿರ, ಗಣೇಶ ನಗರದ ಜನತೆ ಮತ್ತು ಮಹಾನಗರಪಾಲಿಕೆ ಸದಸ್ಯ ಕುಮಾರ ಗಡಗಿ ಅವರ ನೇತೃತ್ವದಲ್ಲಿ ಶ್ರೀ ತುಳಸಿಗಿರೀಶ ಫೌಂಡೇಶನ್ ಮತ್ತು ಶ್ರೀ ತುಳಸಿಗಿರೀಶ ಮಧುಮೇಹ ಆಸ್ಪತ್ರೆ, ವಿಜಯಪುರ ವತಿಯಿಂದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಗುರು ನಮನ ಮಹೋತ್ಸವ ನಿಮಿತ್ತ ಗುರುವಾರ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರ ನಡೆಯಿತು.
ನಗರದ ವಾರ್ಡ್ ನಂ. 21, ಗಣೇಶ ನಗರ, ಶ್ರೀ ಸಿದ್ಧಿವಿನಾಯಕ ಮತ್ತು ಶ್ರೀ ಸಾಕ್ಷಿ ಹನುಮಾನ್ ದೇವಸ್ಥಾನದಲ್ಲಿ ನೂರಾರು ಜನರ ಮಧುಮೇಹ ಹಾಗೂ ಬಿಪಿ ತಪಾಸಣೆ ನಡೆಸಿ ಸೂಕ್ತ ಸಲಹೆ ಮಾರ್ಗದರ್ಶನ ನೀಡಲಾಯಿತು.
ಮಧುಮೇಹ ತಜ್ಞ ಡಾ.ಬಾಬುರಾಜೇಂದ್ರ ನಾಯಿಕ, ಹೃದಯರೋಗ ತಜ್ಞೆ ಡಾ.ಶೀತಲ ನಾಯಿಕ ಶಿಬಿರದಲ್ಲಿ ಮಾರ್ಗದರ್ಶನ ನೀಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment

