ವಿಜಯಪುರ: ಕಲಬುರಗಿ ಜಿಲ್ಲೆಯ ೧೧೦ ಕೆ.ವಿ ಶಹಾಪೂರ-ಕೆಂಬಾವಿ, ೧೧೦ ಕೆ.ವಿ ಹತ್ತಿಗುಡೂರ್-ನಾಗನೂರು ಮತ್ತು ೧೧೦ ಕೆ.ವಿ ನಾಗನೂರು ಕೆಂಬಾವಿ ಮಾರ್ಗಗಳಲ್ಲಿ ಫ್ಲಾಷ್ಡ ಒವರ್ ಇನ್ಸುಲೇಟರ್ ಬದಲಾವಣೆ ಸೇರಿದಂತೆ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ೧೧೦ ಕೆ.ವಿ ಅಸ್ಕಿ ಹಾಗೂ ೧೧೦ ಕೆ.ವಿ ತಾಳಿಕೋಟಿ ವಿದ್ಯುತ್ ವಿತರಣಾ ಉಪ ಕೇಂದ್ರಗಳಲ್ಲಿ ಬರುವ ಎಲ್ಲಾ ೧೧ಕೆ.ವಿ ನಿರಂತರ ವಿದ್ಯುತ್, ಕುಡಿಯುವ ನೀರು ಹಾಗೂ ಕೃಷಿ ನೀರಾವರಿ ಮಾರ್ಗಗಳಿಗೆ ಹಾಗೂ ಬಂಟನೂರ ಐ.ಪಿ ಮಾರ್ಗ, ಗೊಟಗುಣಕಿ ನಿರಂತರ ಜ್ಯೋತಿ ಹಾಗೂ ೧೧೦ಕೆ.ವಿ ಎಫ್.ಪಿ.ಇ.ಎಲ್ ಸೌರ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಡಿಸೆಂಬರ್ ೧೪ರ ಬೆಳಿಗ್ಗೆ ೧೦:೩೦ ರಿಂದ ಸಾಯಂಕಾಲ ೫:೩೦ ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಬಸವನ ಬಾಗೇವಾಡಿ ಕಾರ್ಯ ನಿರ್ವಾಹಕ ಅಭಿಯಂತರರು ಕೋರಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
