ಮುದ್ದೇಬಿಹಾಳ: ಇಲ್ಲಿನ ಪುರಸಭೆಯ ೧೮ನೇ ವಾರ್ಡಿನ ಉಪ ಚುನಾವಣೆಯ ನಿಮಿತ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ ನೇತೃತ್ವದಲ್ಲಿ ವಾರ್ಡ್ ನ ಮಾಬುಸ್ಮಾಮಿ ಕಟ್ಟೆಯ ಆವರಣದಲ್ಲಿ ಬುಧವಾರ ಬೆಳಿಗ್ಗೆ ಕಾಂಗ್ರೆಸ್ ಪಕ್ಷದ ಪೂರ್ವಭಾವಿ ಸಭೆ ಜರುಗಿತು.
ಈ ವೇಳೆ ಮುಖಂಡರಾದ ಶಿವಾನಂದ ಹಿರೇಮಠ, ಮಹೆಬೂಬ ನಾಲತವಾಡ, ಕಾಮರಾಜ ಬಿರಾದಾರ ಸೇರಿದಂತೆ ಹಲವರು ಮಾತನಾಡಿ ವಾರ್ಡ್ ನ ಸರ್ವತೋಮುಖ ಬೆಳವಣಿಗೆಗೆ ಪಕ್ಷದ ಎಲ್ಲರೂ ಶ್ರಮಿಸಬೇಕು. ಸದ್ಯ ನಮ್ಮ ನಮ್ಮಲ್ಲೇ ಟಿಕೇಟ್ ಗಾಗಿ ಪೈಪೋಟಿ ಮಾಡೋದು ಬೇಡ. ಎಲ್ಲ ಸದಸ್ಯರು ಚರ್ಚಿಸಿ ಸೂಕ್ತ ಒಬ್ಬ ಅಭ್ಯರ್ಥಿಯನ್ನ ಆಯ್ಕೆ ಮಾಡೋಣ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ ಮಾತನಾಡಿದರು.
ಈ ವೇಳೆ ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗಪೂರ ಮಕಾನದಾರ, ಪಕ್ಷದ ಹಿರಿಯರಾದ ಎಂ.ಬಿ.ನಾವದಗಿ, ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ, ಮಾಜಿ ಸದಸ್ಯ ಪಿಂಟು ಸಾಲಿಮನಿ, ಅಪ್ಪು ದೇಗಿನಾಳ, ಗೋಪಿ ಮಡಿವಾಳರ, ಶ್ರೀಕಾಂತ ಚಲವಾದಿ ಸೇರಿದಂತೆ ಮತ್ತೀತರರು ಭಾಗಿಯಾಗಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

